मंगलवार, दिसंबर 03 2024 | 01:43:04 AM
Breaking News
Home / Choose Language / kannada / ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯಿಂದ ಹಲವು ರಾಜ್ಯಗಳಿಗೆ ವಿಪತ್ತು ನಿರ್ವಹಣೆ ಮತ್ತು ಸಾಮರ್ಥ್ಯವೃದ್ಧಿ ಯೋಜನೆಗಳಿಗಾಗಿ 1115.67 ಕೋಟಿ ಅನುಮೋದನೆ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯಿಂದ ಹಲವು ರಾಜ್ಯಗಳಿಗೆ ವಿಪತ್ತು ನಿರ್ವಹಣೆ ಮತ್ತು ಸಾಮರ್ಥ್ಯವೃದ್ಧಿ ಯೋಜನೆಗಳಿಗಾಗಿ 1115.67 ಕೋಟಿ ಅನುಮೋದನೆ

Follow us on:

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯಿಂದ ಹಲವು ರಾಜ್ಯಗಳಿಗೆ ವಿಪತ್ತು ನಿರ್ವಹಣೆ ಮತ್ತು ಸಾಮರ್ಥ್ಯವೃದ್ಧಿ ಯೋಜನೆಗಳಿಗಾಗಿ 1115.67 ಕೋಟಿ ರೂಪಾಯಿ ಬಿಡುಗಡೆಗೆ ಅನುಮೋದನೆ  ನೀಡಿದೆ. ಸಮಿತಿ ಹಣಕಾಸು ಸಚಿವರು, ಕೃಷಿ ಸಚಿವರು ಒಳಗೊಂಡಿದ್ದಾರೆ ಮತ್ತು ನೀತಿ ಆಯೋಗದ ಉಪಾಧ್ಯಕ್ಷರು ಸದಸ್ಯರಾಗಿದ್ದಾರೆ. ಸಮಿತಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ( ಎನ್ ಡಿಎಂಎಫ್ )ಯಿಂದ 15 ರಾಜ್ಯಗಳಲ್ಲಿ ಭೂ ಕುಸಿತ ಉಪಶಮನ ಪ್ರಸ್ತಾವವನ್ನು ಪರಿಗಣಿಸಿದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ( ಎನ್ ಡಿಎಂಎಫ್ )ಯ ನೆರವಿನಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿದ್ಧತೆ ಮತ್ತು ಸಾಮರ್ಥ್ಯವೃದ್ಧಿಯ ಭಾಗವಾಗಿ ನಾಗರಿಕ ರಕ್ಷಣಾ ಸ್ವಯಂಸೇವಕರ ತರಬೇತಿ ಮತ್ತು ಸಾಮರ್ಥ್ಯವೃದ್ಧಿ  ಪ್ರಸ್ತಾವಕ್ಕೂ ಅನುಮೋದನೆ ನೀಡಿದೆ.

ಉನ್ನತ ಮಟ್ಟದ ಸಮಿತಿಯು 15 ರಾಜ್ಯಗಳಲ್ಲಿ (ಅರುಣಾಚಲ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ) ರಾಷ್ಟ್ರೀಯ ಭೂಕುಸಿತ ಅಪಾಯ ಉಪಶಮನದ ಒಟ್ಟು 1000 ಕೋಟಿ ರೂ, ಮೊತ್ತದ ಯೋಜನೆಗೆ ಅನುಮೋದನೆ ನೀಡಿದೆ. ಅಲ್ಲದೆ, ಸಮಿತಿ ಉತ್ತರಾಖಂಡಕ್ಕೆ 139 ಕೋಟಿ ರೂ, ಹಿಮಾಚಲ ಪ್ರದೇಶಕ್ಕೆ 139 ಕೋಟಿ ರೂ, ಎಂಟು ಈಶಾನ್ಯ ರಾಜ್ಯಗಳಿಗೆ 378 ಕೋಟಿ ರೂ, ಮಹಾರಾಷ್ಟ್ರಕ್ಕೆ 100 ಕೋಟಿ ರೂ, ಕರ್ನಾಟಕಕ್ಕೆ 72 ಕೋಟಿ ರೂ, ಕೇರಳಕ್ಕೆ  72 ಕೋಟಿ ರೂ, ತಮಿಳುನಾಡಿಗೆ 50 ಕೋಟಿ ರೂ ಮತ್ತು ಪಶ್ಚಿಮ ಬಂಗಾಳಕ್ಕೆ 50 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಿದೆ.

ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 115.67 ಕೋಟಿ ರೂ.ಗಳ ವೆಚ್ಚದಲ್ಲಿ ನಾಗರಿಕ ರಕ್ಷಣೆಯ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಉನ್ನತ ಮಟ್ಟದ ಸಮಿತಿ ಮತ್ತೊಂದು ಯೋಜನೆಯನ್ನು ಅನುಮೋದಿಸಿದೆ. ಈ ಹಿಂದೆ ಸಮಿತಿಯು ಎನ್‌ಡಿಎಂಎಫ್‌ನಿಂದ ಏಳು ನಗರಗಳಲ್ಲಿ ಒಟ್ಟು 3075.65 ಕೋಟಿ ರೂ. ವೆಚ್ಚದಲ್ಲಿ ನಗರ ಪ್ರವಾಹ ಅಪಾಯ ಉಪಶಮನ ಯೋಜನೆಗಳನ್ನು ಮತ್ತು 4 ರಾಜ್ಯಗಳಲ್ಲಿ ಒಟ್ಟು ರೂ. 50 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಕೈಗೊಳ್ಳಲು ಅನುಮೋದನೆ ನೀಡಿತ್ತು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಪತ್ತು ನಿರೋಧಕ ಭಾರತದ ದೂರದೃಷ್ಟಿಯ ಸಾಕಾರಕ್ಕೆ ಗೃಹ ಸಚಿವ ಶ್ರೀ ಅಮಿತ್ ಶಾ ಮಾರ್ಗದರ್ಶನದಲ್ಲಿ ಗೃಹ ವ್ಯವಹಾರಗಳ ಸಚಿವಾಲಯದಿಂದ ದೇಶದಲ್ಲಿನ ವಿಪತ್ತುಗಳ ಪರಿಣಾಮಕಾರಿ ನಿರ್ವಹಣೆ ಖಾತ್ರಿಗೆ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಭಾರತದಲ್ಲಿ ವಿಪತ್ತು ಅಪಾಯ ಕಡಿತ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ವಿಪತ್ತುಗಳ ಸಮಯದಲ್ಲಿ ಯಾವುದೇ ವ್ಯಾಪಕವಾದ ಜೀವ ಮತ್ತು ಆಸ್ತಿ ನಷ್ಟವನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಈ ವರ್ಷ ಎಲ್ಲಾ ರಾಜ್ಯಗಳಿಗೆ ಈಗಾಗಲೇ 21,476 ಕೋಟಿ ರೂ.ಗೂ ಹೆಚ್ಚು ಅಧಿಕ ಹಣ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ರಾಜ್ಯ ವಿಪತ್ತು ನಿರ್ವಹಣಾ ನಿಧಿ(ಎಸ್ ಡಿಆರ್ ಎಫ್‌)ಯಿಂದ 26 ರಾಜ್ಯಗಳಿಗೆ 14,878.40 ಕೋಟಿ ರೂ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್ ಡಿಆರ್ ಎಫ್) 15 ರಾಜ್ಯಗಳಿಗೆ 4,637.66 ಕೋಟಿ ರೂ.ಗಳನ್ನು, ರಾಜ್ಯ ವಿಪತ್ತು ಉಪಶಮನ ನಿಧಿಯಿಂದ (ಎಸ್ ಡಿಎಂಎಫ್ ) ನಿಂದ 11 ರಾಜ್ಯಗಳಿಗೆ ರೂ.1,385.45 ಕೋಟಿ ರೂ ಹಾಗೂ ರಾಷ್ಟ್ರೀಯ ವಿಕೋಪ ನಿರ್ವಹಣಾ ನಿಧಿಯಿಂದ (ಎನ್ ಡಿಎಂಎಫ್ )ನಿಂದ 06 ರಾಜ್ಯಗಳಿಗೆ 574.93 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಭುವನೇಶ್ವರದಲ್ಲಿ ನವೆಂಬರ್ 30ರಿಂದ ಡಿಸೆಂಬರ್ 1ರ ವರೆಗೆ ಪೊಲೀಸ್ ಡೈರೆಕ್ಟರ್ ಜನರಲ್‌ಗಳು / ಇನ್‌ಸ್ಪೆಕ್ಟರ್ ಜನರಲ್‌ಗಳ ಅಖಿಲ ಭಾರತ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ನವೆಂಬರ್ 30ರಿಂದ ಡಿಸೆಂಬರ್ 1ರ ವರೆಗೆ ಒಡಿಶಾ ರಾಜ್ಯದ ಭುವನೇಶ್ವರದ ಲೋಕಸೇವಾ …