Wednesday, January 07 2026 | 02:48:01 AM
Breaking News

ವಿಜಯ್ ದಿನದ ಸಂದರ್ಭದಲ್ಲಿ 1971ರ ಯುದ್ಧದಲ್ಲಿ ಹುತಾತ್ಮ ವೀರರಿಗೆ ಗೌರವ ಸಲ್ಲಿಸಿ ರಾಷ್ಟ್ರವನ್ನು ಮುನ್ನಡೆಸಿದ ರಾಷ್ಟ್ರಪತಿ; ಯೋಧರ ಅಂತಿಮ ತ್ಯಾಗ ರಾಷ್ಟ್ರದ ಹೆಮ್ಮೆ ಮತ್ತು ಸ್ಫೂರ್ತಿಗೆ ಮೂಲ: ಶ್ರೀಮತಿ ದ್ರೌಪದಿ ಮುರ್ಮು

Connect us on:

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವಿಜಯ್ ದಿನದ ಅಂಗವಾಗಿ 1971ರ ಯುದ್ಧದ ವೀರ ಸೈನಿಕರಿಗೆ ಗೌರವ ಸಲ್ಲಿಸುವ ಮೂಲಕ ರಾಷ್ಟ್ರವನ್ನು ಮುನ್ನಡೆಸಿದರು. ಪ್ರತಿ ವರ್ಷ ಡಿಸೆಂಬರ್ 16 ರಂದು ಪಾಕಿಸ್ತಾನದ ವಿರುದ್ಧ ಭಾರತದ ಐತಿಹಾಸಿಕ ವಿಜಯದ ಸ್ಮರಣಾರ್ಥವಾಗಿ ವಿಜಯ್‌ ದಿನವನ್ನು ಆಚರಿಸಲಾಗುತ್ತದೆ. ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ X ನಲ್ಲಿ ರಾಷ್ಟ್ರಪತಿಗಳು, ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ನೀಡುವ ಮತ್ತು ರಾಷ್ಟ್ರೀಯ ಹೆಮ್ಮೆಯ ಮೂಲವಾಗಿ ಉಳಿಯುವ ಧೈರ್ಯಶಾಲಿಗಳ ಅಂತಿಮ ತ್ಯಾಗವನ್ನು ರಾಷ್ಟ್ರವು ಸದಾ ಕೃತಜ್ಞತೆಯಿಂದ ಸ್ಮರಿಸುತ್ತದೆ ಎಂದು ಹೇಳಿದರು.

ಸಶಸ್ತ್ರ ಪಡೆಗಳ ಅಸಮಾನ್ಯ ಶೌರ್ಯವನ್ನು ಗೌರವಿಸಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, ಸೈನಿಕರ ವೀರ ಶೌರ್ಯ ಮತ್ತು ನಿಸ್ವಾರ್ಥ ತ್ಯಾಗವನ್ನು ಪ್ರತಿ ಭಾರತೀಯರಿಗೆ ಸ್ಫೂರ್ತಿಯ ಮೂಲ ಎಂದು ಬಣ್ಣಿಸಿದರು, ಅವರ ಸೇವೆಗೆ ದೇಶವು ಸದಾ ಋಣಿಯಾಗಿರಲಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೈನಿಕರ ಧೈರ್ಯ ಮತ್ತು ತ್ಯಾಗವನ್ನು ಗೌರವಿಸಿದರು. ಅವರ ನಿಸ್ವಾರ್ಥ ಬದ್ಧತೆ ಮತ್ತು ಅಚಲ ಸಂಕಲ್ಪವು ರಾಷ್ಟ್ರವನ್ನು ರಕ್ಷಿಸಿದೆ ಮತ್ತು ಕೀರ್ತಿ ತಂದಿದೆ ಎಂದು ಹೇಳಿದರು. ಅವರು ಈ ದಿನವನ್ನು ಯೋಧರ ಅಸಾಧಾರಣ ಶೌರ್ಯ ಮತ್ತು ಅಚಲ ಮನೋಭಾವಕ್ಕೆ ಗೌರವ ಸಲ್ಲಿಸುವ ದಿನ ಎಂದು ಬಣ್ಣಿಸಿದರು.

ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸಿದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್‌ ಸಿಂಗ್‌, ಯೋಧರ ಶೌರ್ಯ ಮತ್ತು ದೇಶಭಕ್ತಿಯು ದೇಶ ಇನ್ನೂ ಸುರಕ್ಷಿತವಾಗಿರುವುದನ್ನು ಖಾತ್ರಿಪಡಿಸಿದೆ. ಅವರ ತ್ಯಾಗ ಮತ್ತು ಸೇವೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಈ ದಿನದ ಅಂಗವಾಗಿ ರಕ್ಷಣಾ ಸಚಿವರು ನವದೆಹಲಿಯಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು ಮತ್ತು ದಿಟ್ಟ ಯೋಧರಿಗೆ ಗೌರವ ಸಲ್ಲಿಸಿದರು.

image.png

ರಕ್ಷಣಾ ಖಾತೆ ರಾಜ್ಯು ಸಚಿವ ಶ್ರೀ ಸಂಜತ್‌ ಸೇತ್, ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್‌ ಅನಿಲ್‌ ಚೌವ್ಹಾಣ್‌, ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇಡಿ, ವಾಯುಪಡೆ ಸಿಬ್ಬಂದಿಯ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ಎ.ಪಿ.ಸಿಂಗ್‌, ರಕ್ಷಣಾ ಕಾರ್ಯದರ್ಶಿ ರಾಜೇಶ್‌ ಕುಮಾರ್‌ ಸಿಂಗ್ ಮತ್ತು ನೌಕಾಪಡೆಯ ಉಪ ಮುಖ್ಯಸ್ಥ ವೈಸ್‌ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್‌ ಅಗಲಿದೆ ಹುತಾತ್ಮ ಯೋಧರಿಗೆ ಪುಷ್ಪನಮನ ಮತ್ತು ಗೌರವ ಸಲ್ಲಿಸಿದರು.

About Matribhumi Samachar

Check Also

ಭಾರತದ ರಾಷ್ಟ್ರಪತಿ ಒಡಿಶಾದ ರಾಯರಂಗಪುರದಲ್ಲಿ # ಸ್ಕಿಲ್ ದ ನೇಶನ್ ಎ.ಐ. ಸವಾಲಿಗೆ ಚಾಲನೆ ನೀಡಿದರು ಮತ್ತು ಇಗ್ನೋ ಪ್ರಾದೇಶಿಕ ಕೇಂದ್ರ ಹಾಗು ಕೌಶಲ್ಯ ಕೇಂದ್ರವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು (ಜನವರಿ 1, 2026) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು …