Monday, November 10 2025 | 04:31:33 AM
Breaking News

Miscellaneous

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಭಾರತ ರತ್ನ ಡಾ. ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು

ನವದೆಹಲಿಯ ಪುಸಾದಲ್ಲಿ ಇಂದು ನಡೆದ ಭಾರತ ರತ್ನ ಡಾ. ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 2025ರ ಆಗಸ್ಟ್ 7–9 ರವರೆಗೆ ನವದೆಹಲಿಯ ಪುಸಾ ಆವರಣದಲ್ಲಿ ಆಯೋಜಿಸಲಾಗಿರುವ ಈ ಸಮ್ಮೇಳನವು ಕೃಷಿ ವಿಜ್ಞಾನದಲ್ಲಿ ಶ್ರೇಷ್ಠ ವ್ಯಕ್ತಿತ್ವ ಮತ್ತು ಆಹಾರ ಭದ್ರತೆಯ ಪ್ರವರ್ತಕ …

Read More »

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ವಿಶೇಷ ನೋಂದಣಿ ಅಭಿಯಾನ 2025ರ ಆಗಸ್ಟ್ 15ರವರೆಗೆ ವಿಸ್ತರಣೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ (PMMVY) ವಿಶೇಷ ನೋಂದಣಿ ಅಭಿಯಾನವನ್ನು 2025ರ ಆಗಸ್ಟ್ 15ರವರೆಗೆ ವಿಸ್ತರಿಸಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಪ್ರಸ್ತುತ ನಡೆಯುತ್ತಿರುವ ಮನೆ-ಮನೆ ಜಾಗೃತಿ ಮತ್ತು ದಾಖಲಾತಿ ಅಭಿಯಾನವು, ಎಲ್ಲಾ ಅರ್ಹ ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರನ್ನು ತಲುಪುವ ಮೂಲಕ ಯೋಜನೆಯಡಿಯಲ್ಲಿ ಅವರ ಸಕಾಲಿಕ ನೋಂದಣಿಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು (PW&LM) ಪೌಷ್ಟಿಕ …

Read More »

ಡಿ.ಪಿ.ಐ.ಐ.ಟಿ ಕಾರ್ಯದರ್ಶಿ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿನ ಐ.ಒ.ಟಿ ಮತ್ತು ಎ.ಐ ಗಾಗಿ ಇರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕೆ-ಟೆಕ್, ನಾಸ್ಕಾಮ್ ಸೆಂಟರ್ ಆಫ್ ಎಕ್ಸಲೆನ್ಸ್ ಗೆ ಭೇಟಿ ನೀಡಿತು

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿ.ಪಿ.ಐ.ಐ.ಟಿ) ಕಾರ್ಯದರ್ಶಿ ಶ್ರೀ ಅಮರದೀಪ್ ಸಿಂಗ್ ಭಾಟಿಯಾ ನೇತೃತ್ವದ ನಿಯೋಗವು ಎನ್.ಐ.ಸಿ.ಡಿ.ಸಿ ಯ ಸಿ.ಇ.ಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ರಜತ್ ಕುಮಾರ್ ಸೈನಿ, ಡಿ.ಪಿ.ಐ.ಐ.ಟಿ ನಿರ್ದೇಶಕ ಮತ್ತು ಸ್ಟಾರ್ಟ್ಅಪ್ ಇಂಡಿಯಾದ ಮುಖ್ಯಸ್ಥರೊಂದಿಗೆ ಬೆಂಗಳೂರಿನಲ್ಲಿರುವ ಐ.ಒ.ಟಿ ಮತ್ತು ಎ.ಐ ಗಾಗಿ ಇರುವ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕೆ-ಟೆಕ್, ನಾಸ್ಕಾಮ್ ಸೆಂಟರ್ ಆಫ್ ಎಕ್ಸಲೆನ್ಸ್ ಗೆ ಭೇಟಿ ನೀಡಿತು. ನವೋದ್ಯಮ ಮತ್ತು ಇನ್ಕ್ಯುಬೇಷನ್ …

Read More »

ಪದ್ಮ ಪ್ರಶಸ್ತಿ 2026ಗೆ ನಾಮನಿರ್ದೇಶನ ಸಲ್ಲಿಸಲು ಕೊನೆಯ ದಿನಾಂಕ 2025 ಆಗಸ್ಟ್‌ 15ರವರೆಗೆ ವಿಸ್ತರಣೆ

ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ಶಿಫಾರಸುಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು2025ರ ಜುಲೈ 31 ರಿಂದ 2025ರ ಆಗಸ್ಟ್ 15 ರವರೆಗೆ ವಿಸ್ತರಿಸಲಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್‌ನಲ್ಲಿ (https://awards.gov.in) ಆನ್‌ಲೈನ್‌ನಲ್ಲಿ ಮಾತ್ರ ಸ್ವೀಕರಿಸಲಾಗುವುದು. 2026ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪ್ರಶಸ್ತಿಗಳು-2026 ರ ನಾಮನಿರ್ದೇಶನಗಳು/ಶಿಫಾರಸುಗಳ ಸಲ್ಲಿಕೆ ಕಾರ್ಯ 2025ರ ಮಾರ್ಚ್ 15 ರಂದು ಆರಂಭವಾಗಿದೆ. ಪದ್ಮ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ …

Read More »

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ‘ಬಿಮಾ ಸಖಿ ಯೋಜನೆ’ಯ ಐತಿಹಾಸಿಕ ಆರಂಭ – ಶ್ರೀ ಶಿವರಾಜ್ ಸಿಂಗ್ ಚೌಹಾಣ್

‘ಬಿಮಾ ಸಖಿ ಯೋಜನೆ’ ಕುರಿತು ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ‘ಬಿಮಾ ಸಖಿ ಯೋಜನೆ’ಯ ಐತಿಹಾಸಿಕ ಆರಂಭವನ್ನು ಸಾಧಿಸಿದ್ದೇವೆ. ಈ ಯೋಜನೆಯು ಮಹಿಳಾ ಸಬಲೀಕರಣದ ಕಡೆಗೆ ಒಂದು ಪ್ರಮುಖ ಹೆಜ್ಜೆ ಮಾತ್ರವಲ್ಲ, ಗ್ರಾಮೀಣ ಮತ್ತು ಅರೆ-ನಗರ ಭಾರತಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿಯೂ ಒಂದು ಪ್ರಮುಖ ಹೆಜ್ಜೆಯಾಗಿದೆ. …

Read More »

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ನಾಮನಿರ್ದೇಶನಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು 2025 ರ ಆಗಸ್ಟ್‌ 15 ರವರೆಗೆ ವಿಸ್ತರಿಸಲಾಗಿದೆ

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್‌ಬಿಪಿ) ಗಾಗಿ ಆನ್‌ಲೈನ್‌ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವನ್ನು 15.08.2025 ರವರೆಗೆ ವಿಸ್ತರಿಸಲಾಗಿದೆ. ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆಯು 01.04.2025ರಂದು ರಾಷ್ಟ್ರೀಯ ಪ್ರಶಸ್ತಿ ಪೋರ್ಟಲ್‌ https://awards.gov.in. ನಲ್ಲಿಪ್ರಾರಂಭವಾಯಿತು. ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗೆ ಅರ್ಹರಾದ ಮಕ್ಕಳಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 5 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 18 ವರ್ಷ ಮೀರದ ಯಾವುದೇ ಮಗು …

Read More »

‘ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮಾದಕವಸ್ತು ಮುಕ್ತ ಯುವಕರು’ ಎಂಬ ಧ್ಯೇಯವಾಕ್ಯದೊಂದಿಗೆ ವಾರಣಾಸಿಯ ರುದ್ರಾಕ್ಷಿ ಕನ್ವೆನ್ಷನ್ ಸೆಂಟರ್ನಲ್ಲಿ ‘ಯುವ ಆಧ್ಯಾತ್ಮಿಕ ಶೃಂಗಸಭೆ’ ಪ್ರಾರಂಭವಾಯಿತು; ಭಾರತದಾದ್ಯಂತ ಸುಮಾರು 122 ಆಧ್ಯಾತ್ಮಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳಿಂದ 600 ಕ್ಕೂ ಹೆಚ್ಚು ಯುವಕರು ಪಾಲ್ಗೊಂಡರು

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಉತ್ತರ ಪ್ರದೇಶದ ವಾರಣಾಸಿಯಲ್ಲಿ ‘ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮಾದಕವಸ್ತು ಮುಕ್ತ ಯುವಕರು’ ಎಂಬ ಧ್ಯೇಯವಾಕ್ಯದೊಂದಿಗೆ ‘ಯುವ ಆಧ್ಯಾತ್ಮಿಕ ಶೃಂಗಸಭೆ’ಯನ್ನು ಪ್ರಾರಂಭಿಸಿದೆ. ಈ ಶೃಂಗಸಭೆಯಲ್ಲಿ ದೇಶಾದ್ಯಂತದ 122 ಆಧ್ಯಾತ್ಮಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳನ್ನು ಪ್ರತಿನಿಧಿಸುವ 600ಕ್ಕೂ ಹೆಚ್ಚು ಯುವ ಭಾಗಿದಾರರನ್ನು ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಯುವಜನ ವ್ಯವಹಾರಗಳು, ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು, …

Read More »

ʻಸ್ವಚ್ಛ ಸರ್ವೇಕ್ಷಣಾ 2024-25ʼ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ರಾಷ್ಟ್ರಪತಿ

ಫಲಿತಾಂಶ ಹೊರಬಿದ್ದಿದೆ! ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಎಚ್ಯುಎ) ಆಯೋಜಿಸಿದ್ದ ʻಸ್ವಚ್ಛ ಸರ್ವೇಕ್ಷಣಾ 2024-25ʼ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಮತ್ತು ಸಹಾಯಕ ಸಚಿವರಾದ ಶ್ರೀ ತೋಖಾನ್ ಸಾಹು ಅವರ ಉಪಸ್ಥಿತಿಯಲ್ಲಿ 23 ʻಸೂಪರ್ ಸ್ವಚ್ಛ ಲೀಗ್ ನಗರʼಗಳು ಪ್ರಶಸ್ತಿ ಸ್ವೀಕರಿಸಿದವು. ಭಾರತದಲ್ಲಿ ಹೊಸ ತಲೆಮಾರಿನ ಸ್ವಚ್ಛ ನಗರಗಳು ಉದಯಿಸಿದ್ದು …

Read More »

ಮಕ್ಕಳ ಅಸಾಧಾರಣ ಸಾಧನೆಗಳನ್ನು ಆಚರಿಸಲು ನೀಡುವ ವಿಶಿಷ್ಟ ಮನ್ನಣೆಯಾದ ʻಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2025ʼ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ

ʻಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2025ʼ(PMRBP) ಪ್ರಶಸ್ತಿಗಳಿಗೆ ನಾಮನಿರ್ದೇಶನಗಳಿಗಾಗಿ ಕರೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪುನರುಚ್ಚರಿಸುತ್ತಿದೆ. ಪ್ರಶಸ್ತಿಗಾಗಿ ಅರ್ಜಿಗಳ ಪಡೆಯುವಿಕೆ ಏಪ್ರಿಲ್ 1, 2025 ರಂದು ಆರಂಭವಾಗಿದ್ದು,  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2025ಕ್ಕೆ ನಿಗದಿಪಡಿಸಲಾಗಿದೆ. ʻಪಿಎಂಆರ್‌ಬಿಪಿʼ ಪ್ರಶಸ್ತಿಗೆ ಎಲ್ಲಾ ನಾಮನಿರ್ದೇಶನಗಳನ್ನು https://awards.gov.in ಆನ್‌ಲೈನ್ ಪೋರ್ಟಲ್ ಮೂಲಕ ಸಲ್ಲಿಸಬೇಕು. ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯು ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಕಲೆ …

Read More »

2026ನೇ ಸಾಲಿನ ಪದ್ಮ ಪ್ರಶಸ್ತಿಗೆ ಜುಲೈ 31ರವರೆಗೆ ಅರ್ಜಿ ಸಲ್ಲಿಕೆ

2026ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪ್ರಶಸ್ತಿಗಳು -2026 ಗಾಗಿ ನಾಮನಿರ್ದೇಶನಗಳು / ಶಿಫಾರಸುಗಳು 2025ರ ಮಾರ್ಚ್‌ 15 ರಂದು ಪ್ರಾರಂಭವಾಗಿವೆ. ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು 2025ರ ಜುಲೈ 31 ಕೊನೆಯ ದಿನಾಂಕವಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು / ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್‌  (https://awards.gov.in)  ನಲ್ಲಿಆನ್‌ಲೈನ್‌ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಪದ್ಮ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿಒಂದಾಗಿದೆ. 1954 ರಲ್ಲಿಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದ …

Read More »