ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಉಪಕ್ರಮವಾದ ಪರೀಕ್ಷಾ ಪೇ ಚರ್ಚಾ (ಪಿಪಿಸಿ) 2018 ರಿಂದ ಮೈಗೌ ಸಹಯೋಗದೊಂದಿಗೆ ಶಿಕ್ಷಣ ಸಚಿವಾಲಯವು ಯಶಸ್ವಿಯಾಗಿ ಆಯೋಜಿಸಿದೆ. ಒಂದು ತಿಂಗಳಲ್ಲಿ ಅತಿ ಹೆಚ್ಚು ಜನರು ಸಿಟಿಜನ್ ಎಂಗೇಜ್ಮೆಂಟ್ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂಬ ಗಿನ್ನೆಸ್ ವಿಶ್ವ ದಾಖಲೆಗೆ ಲಭಿಸಿದೆ. ಈ ಮಾನ್ಯತೆಯು ಮೈಗೌ ಪ್ಲಾಟ್‌ಫಾರ್ಮ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದ 8ನೇ ಆವೃತ್ತಿಯಲ್ಲಿ ಸ್ವೀಕರಿಸಿದ 3.53 ಕೋಟಿ ಮಾನ್ಯ ನೋಂದಣಿಗಳ ಅಭೂತಪೂರ್ವ ಸಾಧನೆಯನ್ನು ಆಚರಿಸುತ್ತದೆ. ಪರೀಕ್ಷಾ ಪೇ ಚರ್ಚಾ ಒಂದು ವಿಶಿಷ್ಟ ಜಾಗತಿಕ …
Read More »ಗೌರವಾನ್ವಿತ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಎನ್.ಇ.ಪಿ 2020ರ 5 ವರ್ಷಗಳ ಸ್ಮರಣಾರ್ಥ ನಾಳೆ ಭಾರತ್ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮ್ 2025 ಅನ್ನು ಉದ್ಘಾಟಿಸಲಿದ್ದಾರೆ
ಎನ್.ಇ.ಪಿ 2020 ರ 5ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಿಕ್ಷಣ ಸಚಿವಾಲಯವು 2025 ರ ಜುಲೈ 29ರಂದು ಅಖಿಲ ಭಾರತೀಯ ಶಿಕ್ಷಾ ಸಮಾಗಮ್, 2025 ಅನ್ನು ಭಾರತ್ ಮಂಟಪಂ ಆವರಣದಲ್ಲಿ ಆಯೋಜಿಸುತ್ತಿದೆ. ದಿನವಿಡೀ ನಡೆಯುವ ಚರ್ಚೆಗಳನ್ನು ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) 2020 ರ ಐದನೇ ವಾರ್ಷಿಕೋತ್ಸವವನ್ನು ಗುರುತಿಸುವ ಅಖಿಲ ಭಾರತೀಯ ಶಿಕ್ಷಾ ಸಮಾಗಮ್ (ಎ.ಬಿ.ಎಸ್.ಎಸ್) 2025, ಎ.ಬಿ.ಎಸ್.ಎಸ್ 2025 ಶಿಕ್ಷಣ ತಜ್ಞರು, …
Read More »ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆಯು (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ) ಆಗಸ್ಟ್, 2025 ರಿಂದ ಪ್ರಾರಂಭವಾಗುವ ಮೊದಲ ಬ್ಯಾಚ್ ಗಾಗಿ ಎವಿಜಿಸಿ-ಎಕ್ಸ್ ಆರ್ ನಲ್ಲಿ ಅತ್ಯಾಧುನಿಕ ಕೋರ್ಸ್ ಗಳನ್ನು ಪ್ರಕಟಿಸಿದೆ
ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆ (ಐಐಸಿಟಿ) ಈ ಆಗಸ್ಟ್‌ನಲ್ಲಿ ತನ್ನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಪ್ರಾರಂಭಿಸುತ್ತಿರುವುದರಿಂದ ಭಾರತದ ಉದಯೋನ್ಮುಖ ಡಿಜಿಟಲ್ ಮತ್ತು ಸೃಜನಶೀಲ ಆರ್ಥಿಕತೆಯು ಕ್ರಾಂತಿಕಾರಿ ಬದಲಾವಣೆಗೆ ಸಜ್ಜಾಗಿದೆ. ಸಂಸ್ಥೆಯು ಎವಿಜಿಸಿ-ಎಕ್ಸ್ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ) ವಲಯದಲ್ಲಿ ಉದ್ಯಮ-ಚಾಲಿತ ಕೋರ್ಸ್ ಗಳ ಬಲವಾದ ಪೋರ್ಟ್‌ಫೋಲಿಯೊವನ್ನು ನೀಡುತ್ತದೆ. ಈ ಸಂಸ್ಥೆಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ …
Read More »ಗುರು ಪೂರ್ಣಿಮೆಯಂದು ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)-ವಿಆರ್ ಐಎಫ್ ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟಿಸಿದ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ: ‘ಕಲಿಕೆಯ ದೀಪಸ್ತಂಭ’ವೆಂದು ಬಣ್ಣನೆ
ಗುರುಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ಕೇಂದ್ರ ಸಂವಹನ ಮತ್ತು ಈಶಾನ್ಯ ರಾಜ್ಯಗಳ ಪ್ರದೇಶಾಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬೆಂಗಳೂರಿನಲ್ಲಿ ಇಂದು ವಿಟಿಯು-ವಿಆರ್ ಐಎಫ್ ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಉದ್ಘಾಟಿಸಿದರು. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮತ್ತು ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ (ಟಿಸಿಒಇ) ಇಂಡಿಯಾದ ಜಂಟಿ ಉಪಕ್ರಮವಾಗಿದ್ದು. ವಿಆರ್ ಐಎಫ್ ಪೂರಕ ವ್ಯವಸ್ಥೆಯಾದ ಈ ಕೇಂದ್ರವು 5ಜಿ, 6ಜಿ, ಎಐ (ಕೃತಕ ಬುದ್ಧಿಮತ್ತೆ), ಕ್ವಾಂಟಮ್ ಸಂವಹನ …
Read More »ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಬೆಂಗಳೂರಿನಲ್ಲಿ ನಡೆದ ಐಐಟಿ ಮದ್ರಾಸ್‌ನ ಸಂಗಮ್ 2025 ಜಾಗತಿಕ ಅನ್ವೇಷಣೆ ಮತ್ತು ಹಳೆಯ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ ಭಾಗವಹಿಸಿದರು
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಇಂದು ಬೆಂಗಳೂರಿನಲ್ಲಿ ನಡೆದ ಐಐಟಿ ಮದ್ರಾಸ್ ಸಂಗಮ್ 2025 ಜಾಗತಿಕ ನಾವೀನ್ಯತೆ ಮತ್ತು ಪೂರ್ವ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಮಾತನಾಡಿ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ದೂರದೃಷ್ಟಿ ಹಾಗೂ ಬದ್ಧತೆಗಳನ್ನು ಉಲ್ಲೇಖಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಭಾರತವನ್ನು 2047ರೊಳಗಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ದೃಷ್ಟಿಕೋನವನ್ನು ತಿಳಿಸಿದರು. …
Read More »ಐಐಟಿ ಮದ್ರಾಸ್ ನಿಂದ ಬೆಂಗಳೂರಿನಲ್ಲಿ ಸಂಗಮ್-2025 ಆಯೋಜನೆ
ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ ಹಾಗೂ ಐಐಟಿ ಮದ್ರಾಸ್ ಪೂರ್ವ ವಿದ್ಯಾರ್ಥಿಗಳ ಸಂಘ ಜಂಟಿಯಾಗಿ ಪ್ರಮುಖ ಜಾಗತಿಕ ನಾವೀನ್ಯತೆ ಹಾಗೂ ಪೂರ್ವ ವಿದ್ಯಾರ್ಥಿಗಳ 6ನೇ ಆವೃತ್ತಿಯ ಸಂಗಮ್-2025 ಶೃಂಗಸಭೆಯನ್ನು ನಾಳೆ ಬೆಂಗಳೂರಿನ ಎಂಜಿ ರಸ್ತೆಯ ತಾಜ್ ನಲ್ಲಿ ಆಯೋಜಿಸಿದೆ. ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಪ್ರಸ್ತುತ ನೀತಿ- ಪ್ರತಿಭಾ ಪಲಾಯನದಿಂದ ಪ್ರತಿಭಾ ಜೋಡಣೆವರೆಗೆ ವಿಷಯದ ಕುರಿತು ಮಾತನಾಡುವರು. ಕಾರ್ಯಕ್ರಮದಲ್ಲಿ ನಾವೀನ್ಯತೆ ಹಾಗೂ ಉದ್ಯಮಶೀಲತೆಯಲ್ಲಿನ …
Read More »ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ಬೆಂಗಳೂರಿನ ಆದಿಚುಂಚನಗಿರಿ ವಿಶ್ವವಿದ್ಯಾಲಯ (ACU) ಕ್ಯಾಂಪಸ್ ಉದ್ಘಾಟನೆ
ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಬೆಂಗಳೂರಿನಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ (ಎಸಿಯು) ಬೆಂಗಳೂರು ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ನಮ್ಮ ಸಂಸ್ಕೃತಿಯ ಮೂಲ ತತ್ವ “ಸರ್ವ ಜನ ಹಿತಾಯ, ಸರ್ವ ಜನ ಸುಖಾಯ” ಎಂಬುದಾಗಿದೆ. ಇದರರ್ಥ ಕೇವಲ ತನ್ನ ಬಗ್ಗೆ ಮಾತ್ರವಲ್ಲದೆ ಎಲ್ಲರ ಕಲ್ಯಾಣ ಮತ್ತು ಸಂತೋಷದ ಬಗ್ಗೆ ಚಿಂತಿಸುವುದು ಎಂದು ಹೇಳಿದರು. …
Read More »ಪರೀಕ್ಷಾ ಸಮಯದಲ್ಲಿ ಸಕಾರಾತ್ಮಕತೆಯೇ ಪರೀಕ್ಷಾ ಯೋಧರಿಗೆ ಪರಮ ಮಿತ್ರ : ಪ್ರಧಾನಮಂತ್ರಿ
ಪರೀಕ್ಷಾ ತಯಾರಿಯ ಸಮಯದಲ್ಲಿ ಧನಾತ್ಮಕತೆಯು ವಿದ್ಯಾರ್ಥಿಗಳಿಗೆ ನಿರ್ಣಾಯಕ ಸ್ನೇಹಿತ ಎಂದು ಅದರ ಪ್ರಾಮುಖ್ಯತೆಯ ಬಗ್ಗೆ ಒತ್ತಿಹೇಳುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆಯ ‘ಪರೀಕ್ಷಾ ಪೇ ಚರ್ಚಾ’ ಸಂಚಿಕೆಯನ್ನು ಎಲ್ಲರೂ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಮೈಗೌವ್ ಇಂಡಿಯಾದ ಎಕ್ಸ್ ಪೋಸ್ಟ್ ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ: “ಪರೀಕ್ಷಾ ಸಮಯದಲ್ಲಿ #ExamWarriors ಗಳಿಗೆ ಸಕಾರಾತ್ಮಕತೆಯೇ ಪರಮ ಮಿತ್ರ. ನಾಳಿನ ‘ಪರೀಕ್ಷಾ ಪೇ ಚರ್ಚಾ’ ಸಂಚಿಕೆಯು ಈ ವಿಷಯದ …
Read More »ಪರೀಕ್ಷಾ ಪೇ ಚರ್ಚಾ 2025ರ ಮೊದಲ ಸಂಚಿಕೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು
ಫೆಬ್ರವರಿ 10, 2025 ರಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಸುಂದರ್ ನರ್ಸರಿಯಲ್ಲಿ 8ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ (ಪಿಪಿಸಿ)ಯ ಮೊದಲ ಸಂಚಿಕೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಅನೌಪಚಾರಿಕ ಆದರೆ ಅನುಭವ ಹಂಚಿಕೊಳ್ಳುವ ಒಳನೋಟವುಳ್ಳ ಅಧಿವೇಶನದಲ್ಲಿ, ಪ್ರಧಾನಮಂತ್ರಿ ಅವರು ದೇಶಾದ್ಯಂತದ ವಿದ್ಯಾರ್ಥಿಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಹಾಜರಿದ್ದ 36 ವಿದ್ಯಾರ್ಥಿಗಳು ಪೌಷ್ಟಿಕಾಂಶ ಮತ್ತು ಸ್ವಾಸ್ಥ್ಯದ ಬಗ್ಗೆ ಅಮೂಲ್ಯವಾದ ಪಾಠಗಳನ್ನು ಕಲಿತರು; ಒತ್ತಡವನ್ನು ಕರಗತ ಮಾಡಿಕೊಳ್ಳುವುದು; …
Read More »ವೇವ್ಸ್ 2025ರಲ್ಲಿ ನಡೆಯುವ ಭಾರತದಲ್ಲಿ ಸೃಜನಶೀಲ ಸವಾಲು ಆವೃತ್ತಿ – 1ರಲ್ಲಿ ಶಿಕ್ಷಣವು ಗೇಮಿಂಗ್ ಅನ್ನು ಎದುರುಗೊಳ್ಳಲಿದೆ
ನಿಮ್ಮ ನಗರದ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್.ಡಿ.ಜಿ) ಪ್ರಗತಿಯ ಬಗ್ಗೆ ನಿಮಗೆ ಆಳವಾದ ಜ್ಞಾನವಿದ್ದರೆ, ರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಲ್ಪಡುವ ಅವಕಾಶ ಇಲ್ಲಿದೆ. ವಿಶ್ವ ದೃಶ್ಯ ಶ್ರವಣ ಮತ್ತು ಮನೋರಂಜನಾ ಶೃಂಗಸಭೆ (ವೇವ್ಸ್) 2025 ತಮ್ಮ ನಗರದ ಸುಸ್ಥಿರತೆಯ ಪ್ರಯತ್ನಗಳು, ಸವಾಲುಗಳು ಮತ್ತು ಸಾಧನೆಗಳನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಗಳಿಗೆ ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ‘ಸಿಟಿ ಕ್ವೆಸ್ಟ್: ಶೇಡ್ಸ್ ಆಫ್ ಭಾರತ್’ ಎಂಬ ನವೀನ ಶೈಕ್ಷಣಿಕ ಆಟವು ವೇವ್ಸ್ 2025ರ ಅಡಿಯಲ್ಲಿ ನಡೆಯುತ್ತಿರುವ ‘ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್’ನ ಪ್ರಮುಖ ಅಂಶವಾಗಿದೆ. ಈ ಆಕರ್ಷಕ ಆಟವನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ(ಎಸ್.ಡಿ.ಗಳು)ನ್ನು ಗುರಿಯಾಗಿಸುವ ಮೂಲಕ ನಗರ ಅಭಿವೃದ್ಧಿಯ ಮಾಪನಗಳನ್ನು ಆಟ ಆಡುವ ಮೂಲಕ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಯುವಕರಿಗೆ ಶಿಕ್ಷಣ ನೀಡಲು ಮತ್ತು ಪ್ರೇರೇಪಿಸಲು ವಿನ್ಯಾಸಗೊಳಿಸಲಾಗಿದೆ. ಇದು ಬಾಲ್ಯದ ಟ್ರಂಪ್ ಕಾರ್ಡ್ ಆಟದ ಸಂತೋಷವನ್ನು ಮೆಲುಕು ಹಾಕುವಾಗ ದೇಶಾದ್ಯಂತ 56 ನಗರಗಳ ಸಾಮರ್ಥ್ಯ ಮತ್ತು ಸವಾಲುಗಳನ್ನು ಸಹ ಪರಿಶೋಧಿಸುತ್ತದೆ. ಈ ವೇದಿಕೆಯು ಸುಸ್ಥಿರ ಭವಿಷ್ಯದತ್ತ ಗಮನಾರ್ಹ ದಾಪುಗಾಲು ಹಾಕುತ್ತಿರುವ ನಗರಗಳನ್ನು ಪ್ರಮುಖವಾಗಿ ಗುರುತಿಸಲು ಸ್ಥಳ ಒದಗಿಸುತ್ತದೆ. ನಗರ ಸುಸ್ಥಿರತೆಯ ಚಾಂಪಿಯನ್ ಆಗಿ ಎದ್ದು ಕಾಣಿರಿ ಮತ್ತು ನಗರದ ಎಸ್.ಡಿ.ಜಿ ಪ್ರಯಾಣದ ಬಗ್ಗೆ ನಿಮ್ಮ ಜ್ಞಾನವನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯಿರಿ, ಮೇ 1-4, 2025 ರಂದು ಮುಂಬೈನಲ್ಲಿ ನಡೆಯುವ ವೇವ್ಸ್ 2025 ರಲ್ಲಿ ವಿಜೇತರನ್ನು ಸನ್ಮಾನಿಸಲಾಗುತ್ತದೆ. ಆಟದ ಕುರಿತು ಸಿಟಿ ಕ್ವೆಸ್ಟ್ ಆಟವು ಸಿಂಗಲ್-ಪ್ಲೇಯರ್ ಸ್ವರೂಪದಲ್ಲಿ ತೊಡಗಿಸಿಕೊಳ್ಳುತ್ತದೆ, ಅಲ್ಲಿ ಆಟಗಾರರು ಸಿಟಿ ಕಾರ್ಡ್‌ಗಳ ಡೆಕ್ ಬಳಸಿ ಕಂಪ್ಯೂಟರ್ ಎದುರಾಳಿಯ ವಿರುದ್ಧ ಸ್ಪರ್ಧಿಸುತ್ತಾರೆ. ಪ್ರತಿ ಕಾರ್ಡ್ ಆರು ನಿಯತಾಂಕಗಳನ್ನು ಒಳಗೊಂಡಿರುತ್ತದೆ, ಇದು ಆಟಗಾರರಿಗೆ ಹಸಿವು ಸೂಚ್ಯಂಕ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ಮತ್ತು ಲಿಂಗ ಸಮಾನತೆಯಂತಹ ವಿವಿಧ ಅಂಕಿಅಂಶಗಳ ಆಧಾರದ ಮೇಲೆ ನಗರಗಳನ್ನು ಹೋಲಿಸಲು ಅನುವು ಮಾಡಿಕೊಡುತ್ತದೆ. ಇದು 15 ಸುಸ್ಥಿರ ಅಭಿವೃದ್ಧಿ ಗುರಿಗಳ ಜಾಡು ಪತ್ತೆ ಮಾಡುತ್ತದೆ ಮತ್ತು ನೀತಿ ಆಯೋಗದ ನಗರ ಸೂಚ್ಯಂಕ (2021) ಬಳಸಿಕೊಂಡು 56 ನಗರಗಳಲ್ಲಿ ಅಗ್ರ ಶ್ರೆಯಾಂಕದ 6 ಎಸ್.ಡಿ.ಜಿಗಳನ್ನು ಬಳಸುತ್ತದೆ. ಸಂವಾದಾತ್ಮಕ ಆಟದ ಮೂಲಕ, ಇದು 56 ಭಾರತೀಯ ನಗರಗಳ ಅಭಿವೃದ್ಧಿ ಸವಾಲುಗಳು ಮತ್ತು ಸಾಧನೆಗಳ ಬಗ್ಗೆ ಆಟಗಾರರಿಗೆ ಶಿಕ್ಷಣ ನೀಡುತ್ತದೆ, ಸುಸ್ಥಿರ ಅಭ್ಯಾಸಗಳ ಪ್ರಭಾವವನ್ನು ಒತ್ತಿ ಹೇಳುತ್ತದೆ. ಸಂವಾದಾತ್ಮಕವಾಗಿ ಆಟ ಆಡಲು ಅವಕಾಶ ನೀಡಲಿದ್ದು, ಇದು ಆಟಗಾರರಿಗೆ ಶಿಕ್ಷಣ ನೀಡುತ್ತದೆ. ಆಟಗಾರರು ಸಿಟಿ ಕ್ವೆಸ್ಟ್ ಮೂಲಕ ಪ್ರತಿಯೊಂದು ನಗರದ ಗುಣಲಕ್ಷಣಗಳನ್ನು ಅನ್ವೇಷಿಸುವಾಗ, …
Read More »
Matribhumi Samachar Kannad