Friday, January 09 2026 | 11:04:04 AM
Breaking News

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ ಮಾಡಿದ ಭಾರತದ ರಾಷ್ಟ್ರಪತಿ

Connect us on:

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು (ಡಿಸೆಂಬರ್ 26, 2024) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಅಸಾಧಾರಣ ಹಾಗೂ ವಿಶೇಷ ಸಾಧನೆಗಳಿಗಾಗಿ ಏಳು ವಿಭಾಗಗಳಲ್ಲಿ ಒಟ್ಟು 17 ಮಕ್ಕಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ, ಎಲ್ಲಾ ಪ್ರಶಸ್ತಿ ವಿಜೇತರನ್ನು ರಾಷ್ಟ್ರಪತಿಯವರು ಅಭಿನಂದಿಸಿದರು ಮತ್ತು ಸಾಧಕ ಮಕ್ಕಳ ಕುರಿತಾಗಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ “ಇಡೀ ದೇಶ ಮತ್ತು ಸಮಾಜವು ಇವರ ಬಗ್ಗೆ ಹೆಮ್ಮೆಪಡುತ್ತದೆ, ದೇಶದ ಇತರ ಬಾಲಕರುಗಳಿಗೆ ಇವರು ಮಾದರಿಯಾಗಿದ್ದಾರೆ. ಇವರು ಅಸಾಧಾರಣ ಕೆಲಸವನ್ನು ಮಾಡಿದ್ದಾರೆ, ಅದ್ಭುತ ಸಾಧನೆಗಳನ್ನು ಸಾಧಿಸಿದ್ದಾರೆ, ಅಪಾರ ಸಾಮರ್ಥ್ಯಗಳನ್ನು ಹೊಂದಿದ್ದಾರೆ ಮತ್ತು ಅತುಲ್ಯ ಗುಣಗಳನ್ನು ಹೊಂದಿದ್ದಾರೆ” ಎಂದು ಹೇಳಿದರು.

“ಮಕ್ಕಳ ಪ್ರತಿಭೆ ಗುರುತಿಸಿ ಅವಕಾಶ ಕಲ್ಪಿಸಿಕೊಡುವುದು ನಮ್ಮ ಪರಂಪರೆಯಲ್ಲಿಯೇ ಬಂದಿದೆ. ಈ ಸಂಪ್ರದಾಯವನ್ನು ಮತ್ತಷ್ಟು ಬಲಪಡಿಸಬೇಕು. 2047ರಲ್ಲಿ ನಾವು ಭಾರತದ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುತ್ತೇವೆ. ಈ ಪ್ರಶಸ್ತಿ ವಿಜೇತರು ಆ ಕಾಲಘಟ್ಟದಲ್ಲಿ ದೇಶದ ಪ್ರಬುದ್ಧ ನಾಗರಿಕರಾಗುತ್ತಾರೆ. ಅಂತಹ ಪ್ರತಿಭಾವಂತ ಹುಡುಗ ಹುಡುಗಿಯರು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾತೃಗಳಾಗುತ್ತಾರೆ” ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.

 

भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं

सारांश कनौजिया की पुस्तकें

 

ऑडियो बुक : भारत 1885 से 1950 (इतिहास पर एक दृष्टि)

 

About Matribhumi Samachar

Check Also

ಭಾರತದ ರಾಷ್ಟ್ರಪತಿ ಒಡಿಶಾದ ರಾಯರಂಗಪುರದಲ್ಲಿ # ಸ್ಕಿಲ್ ದ ನೇಶನ್ ಎ.ಐ. ಸವಾಲಿಗೆ ಚಾಲನೆ ನೀಡಿದರು ಮತ್ತು ಇಗ್ನೋ ಪ್ರಾದೇಶಿಕ ಕೇಂದ್ರ ಹಾಗು ಕೌಶಲ್ಯ ಕೇಂದ್ರವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು (ಜನವರಿ 1, 2026) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು …