Friday, January 23 2026 | 04:16:40 PM
Breaking News

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಕಾರ್ಯದರ್ಶಿಗಳು ವಿವಿಧ ಕಡಲ ರಾಜ್ಯಗಳಲ್ಲಿ ಚತುರ ಮತ್ತು ಸಮಗ್ರ ಮೀನುಗಾರಿಕಾ ಬಂದರು (ಸ್ಮಾರ್ಟ್ ಅಂಡ್ ಇಂಟಿಗ್ರೇಟೆಡ್ ಫಿಶಿಂಗ್ ಹಾರ್ಬರ್‌)ಗಳ ಅಭಿವೃದ್ಧಿಯ ಪ್ರಗತಿ ಹಾಗೂ ಬೆಂಗಳೂರಿನಲ್ಲಿರುವ ಮೀನುಗಾರಿಕೆಯ ಕರಾವಳಿ ಎಂಜಿನಿಯರಿಂಗ್ ಕೇಂದ್ರೀಯ ಸಂಸ್ಥೆಯ ಚಟುವಟಿಕೆಗಳ ಪರಿಶೀಲನೆ ನಡೆಸಿದರು

Connect us on:

ಗುಜರಾತ್ ರಾಜ್ಯದ ಜಾಖೌ, ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ಕರೈಕಲ್ ಮತ್ತು ಕೇಂದ್ರಾಡಳಿತ ಪ್ರದೇಶ  ದಾದ್ರಾ ಮತ್ತು ನಗರ್ ಹವೇಲಿ, ದಿಯು ದಮನ್ ನ ವಾಣಕ್ಬಾರಾ ಗಳಲ್ಲಿನ ಚತುರ ಮೀನುಗಾರಿಕಾ ಬಂದರು  (ಸ್ಮಾರ್ಟ್ ಫಿಶಿಂಗ್ ಹಾರ್ಬರ್) ಘಟಕಗಳ ಪ್ರಗತಿ ಪರಿಶೀಲಿಸಲು ಮತ್ತು ಸಂಸ್ಥೆಯ ಚಟುವಟಿಕೆಗಳನ್ನು ಪರಾಂಬರಿಸಲು ಕೇಂದ್ರೀಯ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ ಅವರು ಬೆಂಗಳೂರಿನಲ್ಲಿರುವ ಮೀನುಗಾರಿಕೆಗಾಗಿನ ಕರಾವಳಿ ಎಂಜಿನಿಯರಿಂಗ್ (CICEF) ನಲ್ಲಿ 2024ರ ಡಿಸೆಂಬರ್ 27 ರಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಶ್ರೀ ಸಾಗರ್ ಮೆಹ್ರಾ, ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್‌ ಎ ಒ) ಭಾರತದ ಪ್ರತಿನಿಧಿ ಶ್ರೀ. ಕೊಂಡ ರೆಡ್ಡಿ ಚವ್ವಾ ಮತ್ತು ಕಡಲ ರಾಜ್ಯಗಳ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ವರ್ಚುಯಲ್ ಮಾದರಿಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಸ್ಥಿರತೆ, ಉತ್ಪಾದಕತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಭಾರತದ ಮೀನುಗಾರಿಕಾ ಮೂಲಸೌಕರ್ಯವನ್ನು ಆಧುನೀಕರಿಸುವ ಕಾರ್ಯತಂತ್ರದ ಪ್ರಾಮುಖ್ಯತೆಯ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು.

ಕಾರ್ಯಾಚರಣೆಯ ಸಾಮರ್ಥ್ಯವನ್ನು ಸುಧಾರಿಸುತ್ತಾ ಮೀನುಗಾರ ಸಮುದಾಯಕ್ಕೆ ಅನುಕೂಲವಾಗುವಂತೆ ಸುಧಾರಿತ ತಂತ್ರಜ್ಞಾನ, ಪರಿಸರ ಸ್ನೇಹಿ ಅಭ್ಯಾಸಗಳು ಮತ್ತು ಸಮರ್ಥ ನಿರ್ವಹಣಾ ವ್ಯವಸ್ಥೆಯ ಗುರಿಯನ್ನು ಹೊಂದಿರುವ ಚತುರ ಮತ್ತು ಸಮಗ್ರ ಮೀನುಗಾರಿಕಾ ಬಂದರು (ಸ್ಮಾರ್ಟ್ ಮತ್ತು ಇಂಟಿಗ್ರೇಟೆಡ್ ಫಿಶಿಂಗ್ ಹಾರ್ಬರ್)ಗಳನ್ನು ಅಭಿವೃದ್ಧಿಪಡಿಸುವುದು ಚರ್ಚೆಯ ಪ್ರಮುಖ ವಿಷಯವಾಗಿತ್ತು

ಸುಸ್ಥಿರ ಮೀನುಗಾರಿಕೆಯಲ್ಲಿ ಭಾರತವನ್ನು ಅಗ್ರಸ್ಥಾನದಲ್ಲಿ ಇರಿಸಲು ಜಾಗತಿಕ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಜಂಟಿ ಕಾರ್ಯದರ್ಶಿ ಶ್ರೀ ಸಾಗರ್ ಮೆಹ್ರಾ ಅವರು ಒತ್ತಿ ಹೇಳಿದರು. ಅದರ ಜೊತೆಗೆ, ಈ ಕೆಳಗಿನವುಗಳ ಅನುಷ್ಠಾನಕ್ಕೆ ಸ್ಮಾರ್ಟ್ ಮೀನುಗಾರಿಕಾ ಬಂದರುಗಳ ಅಗತ್ಯವನ್ನೂ ಅವರು ಪ್ರತಿಪಾದಿಸಿದರು:

1. ಡಿಜಿಟಲ್ ಮೂಲಸೌಕರ್ಯಗಳು: ಬಂದರು ಕಾರ್ಯಾಚರಣೆಗಳನ್ನು ವ್ಯವಸ್ಥಿತಗೊಳಿಸಲು ನೈಜ-ಸಮಯದ ದತ್ತಾಂಶ ನಿಗಾ ವ್ಯವಸ್ಥೆ, ಸ್ವಯಂಚಾಲಿತ ಮೀನು ನಿರ್ವಹಣೆ ವ್ಯವಸ್ಥೆಗಳು ಮತ್ತು ಡಿಜಿಟಲ್ ಮಾರುಕಟ್ಟೆ ಸ್ಥಳಗಳ ಬಳಕೆ.
2. ಸುಸ್ಥಿರ ಕ್ರಮಗಳು: ಪರಿಸರದ ಮೇಲಿನ ನಕಾರಾತ್ಮಕ ಪರಿಣಾಮಗಳನ್ನು ತಗ್ಗಿಸಲು ಹಸಿರು ಇಂಧನ ಬಳಕೆ, ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳು ಮತ್ತು ಪರಿಸರ ಸ್ನೇಹಿ ನಿರ್ಮಾಣ ತಂತ್ರಗಳ ಅಳವಡಿಕೆ
3. ಸಮಗ್ರ ಸೌಲಭ್ಯಗಳು: ಮೌಲ್ಯ ಸರಪಳಿಯನ್ನು ಹೆಚ್ಚಿಸಲು ಶೈತ್ಯಾಗಾರ, ಶೀತಲ ಘಟಕಗಳು, ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳು ಮತ್ತು ಆಧುನಿಕ ಹರಾಜು ವೇದಿಕೆಗಳನ್ನು ಒದಗಿಸುವುದು
4.  ಸಮುದಾಯ ಅಭಿವೃದ್ಧಿ: ಸಮಾನ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳನ್ನು ಖಾತ್ರಿಪಡಿಸುತ್ತಾ ಮೀನುಗಾರರಿಗೆ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯ  ಬಗ್ಗೆ ಗಮನಹರಿಸುವುದು

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂ ಎಸ್ಎ‌ ವೈ) ಅಡಿಯಲ್ಲಿ 58 ಮೀನುಗಾರಿಕಾ ಬಂದರು (ಎಫ್ಎ ಚ್) ಗಳು ಮತ್ತು ಮೀನುಗಾರಿಕಾ ಕಾನೂನು ಕೇಂದ್ರ (ಎಫ್ ಎಲ್‌ ಸಿ) ಗಳ ನಿರ್ಮಾಣ / ಆಧುನೀಕರಣ / ನಿರ್ವಹಣೆಗಾಗಿ ಒಟ್ಟು ರೂ 3,184.28 ಕೋಟಿ ವೆಚ್ಚದ ಯೋಜನಾ ಪ್ರಸ್ತಾವನೆಗಳನ್ನು ಅನುಮೋದಿಸಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಈ ಯೋಜನೆಯಡಿ ದಮನ್ ಮತ್ತು ದಿಯುನಲ್ಲಿರುವ ವಣಕ್ಬರಾ, ಪುದುಚೇರಿಯ ಕಾರೈಕಲ್ ಮತ್ತು ಗುಜರಾತ್ನ ಜಖೌ ಗಳಲ್ಲಿರುವ 3 ಸ್ಮಾರ್ಟ್ ಮತ್ತು ಸಮಗ್ರ ಮೀನುಗಾರಿಕೆ ಬಂದರುಗಳು ಸೇರಿವೆ.

ಭಾರತದಲ್ಲಿ ನೀಲಿ ಬಂದರುಗಳನ್ನು ಬಲಪಡಿಸಲು ಎಫ್ಎಒದ ತಾಂತ್ರಿಕ ಸಹಕಾರ ಕಾರ್ಯಕ್ರಮ (ಟಿಸಿಪಿ) ಮೂಲಕ ನೆರವಿಗಾಗಿ ಮೀನುಗಾರಿಕೆ ಇಲಾಖೆಯು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಜಂಟಿ ಕಾರ್ಯದರ್ಶಿ ತಿಳಿಸಿದ್ದಾರೆ.

ಮೂರು ಪ್ರಮುಖ ಮೀನುಗಾರಿಕಾ ಬಂದರುಗಳು, ನಿರ್ದಿಷ್ಟವಾಗಿ ವನಕ್ಬರಾ, ಕಾರೈಕಲ್ ಮತ್ತು ಜಖೌ ಬಂದರುಗಳಿಗೆ ಈ ಟಿಸಿಪಿಯಿಂದ ಅನುಕೂಲವಾಗಲಿದೆ ಎಂದು ಹೈಬ್ರಿಡ್ ಮಾದರಿಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಭಾರತದ ಎಫ್ಎಒ ಪ್ರತಿನಿಧಿ ಶ್ರೀ ಕೊಂಡ ರೆಡ್ಡಿ ಚವ್ವಾ ಮಾಹಿತಿ ನೀಡಿದರು. ಟಿಸಿಪಿಯು ಹೂಡಿಕೆ ಯೋಜನೆಗಳನ್ನು ಗುರುತಿಸಲು ಮತ್ತು ರೂಪಿಸಲು ನಿರ್ದಿಷ್ಟ ಕಾರ್ಯತಂತ್ರ ಮತ್ತು ಕಾರ್ಯಾಚರಣೆಯ ಸಾಧನಗಳನ್ನು ಒದಗಿಸಲಿದ್ದು ಅದರ ಅನುಷ್ಠಾನದಿಂದ ಪ್ರಮುಖ ಸವಾಲುಗಳಿಗೆ ಪರಿಹಾರ ಸಿಗಲಿದೆ.

ಕೇಂದ್ರಾಡಳಿತ ಪ್ರದೇಶ ಪುದುಚೆರಿ, ಕೇಂದ್ರಾಡಳಿತ ಪ್ರದೇಶ ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ಹಾಗೂ ಗುಜರಾತ್ ಸರ್ಕಾರದ ಅಧಿಕಾರಿಗಳು, ಕ್ರಮವಾಗಿ ಕಾರೈಕಲ್, ವನಕ್ಬಾರಾ ಮತ್ತು ಜಖೌ ಗಳಲ್ಲಿ ಕೇಂದ್ರ ಸರ್ಕಾರವು ಮಂಜೂರು ಮಾಡಿರುವ ಸ್ಮಾರ್ಟ್ ಮತ್ತು ಸಮಗ್ರ ಮೀನುಗಾರಿಕೆ ಬಂದರಿನ ಅಭಿವೃದ್ಧಿಯ ಪ್ರಗತಿಯ ಕುರಿತು ವಿವರವಾದ ತಿಳಿಸಿದರು. ಈ ಮೂರು ಯೋಜನೆಗಳು ಸುಸ್ಥಿರ ಮತ್ತು ಸಮರ್ಥ ಕಾರ್ಯಾಚರಣೆಗಳಿಗೆ ಮಾದರಿಯಾಗುವ ಗುರಿ ಹೊಂದಿವೆ.

ಅಡೆತಡೆಗಳನ್ನು ನಿವಾರಿಸಲು ಮತ್ತು ನಿರ್ಮಾಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ನಡುವೆ ಸದೃಢ ಸಮನ್ವಯದ ಅಗತ್ಯವನ್ನು ಕಾರ್ಯದರ್ಶಿ ಒತ್ತಿ ಹೇಳಿದರು.

ಸಿಐಸಿಇಎಫ್ ನ ನಿರ್ದೇಶಕರಾದ ಶ್ರೀ.ಎನ್. ವೆಂಕಟೇಶ್ ಪ್ರಸಾದ್ ಅವರು ಮೀನುಗಾರಿಕೆ ಬಂದರುಗಳು ಮತ್ತು ಮೀನು ನಿಲುಗಡೆ ಕೇಂದ್ರಗಳಿಗಾಗಿ ತಾಣದ ಆಯ್ಕೆ, ಕಾರ್ಯಸಾಧ್ಯತಾ ಪೂರ್ವ ಅಧ್ಯಯನಗಳು, ಎಂಜಿನಿಯರಿಂಗ್ ತನಿಖೆಗಳು ಮತ್ತು ತಂತ್ರಜ್ಞಾನ-ಆರ್ಥಿಕ ಕಾರ್ಯಸಾಧ್ಯತಾ ವರದಿ (TEFRs) ಗಳ ತಯಾರಿಕೆ ಸೇರಿದಂತೆ ಪ್ರಸ್ತುತದ ಯೋಜನೆಗಳ ಸಮಗ್ರವಾಗಿ ತಿಳಿಸಿದರು.

ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಸಂಬಂಧಿತರ ಸಹಯೋಗದೊಂದಿಗೆ ಸಂಸ್ಥೆಯು ತನ್ನ ಪ್ರಯತ್ನಗಳಿಗೆ ವೇಗ ನೀಡುವಂತೆ  ಕೇಂದ್ರ ಕಾರ್ಯದರ್ಶಿ ಮನವಿ ಮಾಡಿದರು. ಕರಾವಳಿ ರಾಜ್ಯಗಳಾದ್ಯಂತ ಪುನರಾವರ್ತಿಸಬಹುದಾದ ನವೀನ ಮಾದರಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಸಿಐಸಿಇಎಫ್ ವಹಿಸಿಕೊಂಡಿದೆ.

ಜೀವನೋಪಾಯವನ್ನು ವರ್ಧಿಸಲು ಮತ್ತು ರಾಷ್ಟ್ರದ ಆರ್ಥಿಕತೆಯನ್ನು ವೃದ್ಧಿಸಲು ಸ್ಮಾರ್ಟ್ ಮೂಲಸೌಕರ್ಯ ಮತ್ತು ಸುಸ್ಥಿರ ಅಭ್ಯಾಸಗಳ ಮೂಲಕ ಭಾರತದ ಮೀನುಗಾರಿಕೆ ವಲಯವನ್ನು ರೂಪಾಂತರಿಸುವ ಬದ್ಧತೆಯೊಂದಿಗೆ ಸಭೆಯು ಸಂಪನ್ನಗೊಂಡಿತು.

About Matribhumi Samachar

Check Also

ಭಾರತದ ರಾಷ್ಟ್ರಪತಿ ಒಡಿಶಾದ ರಾಯರಂಗಪುರದಲ್ಲಿ # ಸ್ಕಿಲ್ ದ ನೇಶನ್ ಎ.ಐ. ಸವಾಲಿಗೆ ಚಾಲನೆ ನೀಡಿದರು ಮತ್ತು ಇಗ್ನೋ ಪ್ರಾದೇಶಿಕ ಕೇಂದ್ರ ಹಾಗು ಕೌಶಲ್ಯ ಕೇಂದ್ರವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು (ಜನವರಿ 1, 2026) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು …