Tuesday, December 30 2025 | 12:12:22 AM
Breaking News

ತಮಿಳುನಾಡಿನಲ್ಲಿ 1,853 ಕೋಟಿ ರೂ. ವೆಚ್ಚದಲ್ಲಿ ಪರಮಕುಡಿ-ರಾಮನಾಥಪುರಂ ವಿಭಾಗದ (ಎನ್‌ ಎಚ್‌ 87) ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಪುಟ ಅನುಮೋದನೆ

Connect us on:

ತಮಿಳುನಾಡಿನಲ್ಲಿ ಪರಮಕುಡಿ – ರಾಮನಾಥಪುರಂ ವಿಭಾಗದ (46.7 ಕಿ.ಮೀ) ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಹೈಬ್ರಿಡ್ ಆನ್ಯುಯಿಟಿ ಮೋಡ್ (ಎಚ್‌ ಎ ಎಂ) ನಲ್ಲಿ ಅಭಿವೃದ್ಧಿಪಡಿಸಲಾಗುವುದು, ಇದರ ಒಟ್ಟು ಬಂಡವಾಳ ವೆಚ್ಚ 1,853 ಕೋಟಿ ರೂ.

ಪ್ರಸ್ತುತ, ಮಧುರೈ, ಪರಮಕುಡಿ, ರಾಮನಾಥಪುರಂ, ಮಂಟಪಂ, ರಾಮೇಶ್ವರಂ ಮತ್ತು ಧನುಷ್ಕೋಡಿ ನಡುವಿನ ಸಂಪರ್ಕವು ಅಸ್ತಿತ್ವದಲ್ಲಿರುವ ದ್ವಿಪಥ ರಾಷ್ಟ್ರೀಯ ಹೆದ್ದಾರಿ 87 (ಎನ್‌ ಎಚ್-87) ಮತ್ತು ಸಂಬಂಧಿತ ರಾಜ್ಯ ಹೆದ್ದಾರಿಗಳ ಮೇಲೆ ಅವಲಂಬಿತವಾಗಿದೆ, ಇದು ಹೆಚ್ಚಿನ ಸಂಚಾರ ಪ್ರಮಾಣದಿಂದಾಗಿ, ವಿಶೇಷವಾಗಿ ಜನನಿಬಿಡ ಪ್ರದೇಶಗಳು ಮತ್ತು ಕಾರಿಡಾರ್‌ ನಾದ್ಯಂತದ ಪ್ರಮುಖ ಪಟ್ಟಣಗಳಲ್ಲಿ ಗಮನಾರ್ಹ ದಟ್ಟಣೆ‌ ಉಂಟಾಗುತ್ತದೆ. ಈ ಸವಾಲುಗಳನ್ನು ಪರಿಹರಿಸಲು, ಯೋಜನೆಯು ಪರಮಕುಡಿಯಿಂದ ರಾಮನಾಥಪುರಂವರೆಗಿನ ಸುಮಾರು 46.7 ಕಿಮೀ ಎನ್‌ ಎಚ್‌-87 ಅನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುತ್ತದೆ. ಇದು ಅಸ್ತಿತ್ವದಲ್ಲಿರುವ ಕಾರಿಡಾರ್‌ ನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಪರಮಕುಡಿ, ಸತಿರಕುಡಿ, ಅಚುಂದನ್ವಾಯಲ್ ಮತ್ತು ರಾಮನಾಥಪುರಂನಂತಹ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳ ಚಲನಶೀಲತೆಯ ಅಗತ್ಯಗಳನ್ನು ಪೂರೈಸುತ್ತದೆ.

ಈ ಯೋಜನೆಯು 5 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು (ಎನ್ ಎಚ್-38, ಎನ್ ಎಚ್-85, ಎನ್ ಎಚ್-36, ಎನ್ ಎಚ್-536, ಮತ್ತು ಎನ್ ಎಚ್-32) ಮತ್ತು 3 ರಾಜ್ಯ ಹೆದ್ದಾರಿಗಳೊಂದಿಗೆ (ಎಸ್ ಎಚ್‌-47, ಎಸ್ ಎಚ್‌-29, ಎಸ್ ಎಚ್‌-34) ಸಂಯೋಜಿಸುತ್ತದೆ, ಇದು ದಕ್ಷಿಣ ತಮಿಳುನಾಡಿನಾದ್ಯಂತ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಲಾಜಿಸ್ಟಿಕ್ಸ್ ಕೇಂದ್ರಗಳಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ನವೀಕರಿಸಿದ ಕಾರಿಡಾರ್ 2 ಪ್ರಮುಖ ರೈಲು ನಿಲ್ದಾಣಗಳು (ಮಧುರೈ ಮತ್ತು ರಾಮೇಶ್ವರಂ), 1 ವಿಮಾನ ನಿಲ್ದಾಣ (ಮಧುರೈ) ಮತ್ತು 2 ಸಣ್ಣ ಬಂದರುಗಳೊಂದಿಗೆ (ಪಂಬನ್ ಮತ್ತು ರಾಮೇಶ್ವರಂ) ಸಂಪರ್ಕ ಸಾಧಿಸುವ ಮೂಲಕ ಬಹು-ಮಾದರಿ ಏಕೀಕರಣವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಪ್ರದೇಶದಾದ್ಯಂತ ಸರಕು ಮತ್ತು ಪ್ರಯಾಣಿಕರ ವೇಗದ ಚಲನೆಗೆ ಅನುಕೂಲವಾಗುತ್ತದೆ.

ಯೋಜನೆ ಪೂರ್ಣಗೊಂಡ ನಂತರ, ಪರಮಕುಡಿ-ರಾಮನಾಥಪುರಂ ವಿಭಾಗವು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಪ್ರಮುಖ ಧಾರ್ಮಿಕ ಮತ್ತು ಆರ್ಥಿಕ ಕೇಂದ್ರಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ, ರಾಮೇಶ್ವರಂ ಮತ್ತು ಧನುಷ್ಕೋಡಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ವ್ಯಾಪಾರ ಮತ್ತು ಕೈಗಾರಿಕಾ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಈ ಯೋಜನೆಯು ಸುಮಾರು 8.4 ಲಕ್ಷ ಮಾನವ ದಿನಗಳ ಪ್ರತ್ಯಕ್ಷ ಮತ್ತು 10.45 ಲಕ್ಷ ಮಾನವ ದಿನಗಳ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳವಣಿಗೆ, ಪ್ರಗತಿ ಮತ್ತು ಸಮೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಕಾರಿಡಾರ್‌  ನಕ್ಷೆ

ಅನುಬಂಧ – 1: ಯೋಜನೆಯ ವಿವರಗಳು

ವೈಶಿಷ್ಟ್ಯ ವಿವರಗಳು
ಯೋಜನೆಯ ಹೆಸರು ಚತುಷ್ಪಥ ಪರಮಕುಡಿ – ರಾಮನಾಥಪುರಂ ವಿಭಾಗ
ಕಾರಿಡಾರ್ ಮಧುರೈ – ಧನುಷ್ಕೋಡಿ ಕಾರಿಡಾರ್ (ಎನ್‌ ಎಚ್-87)
ಉದ್ದ (ಕಿ.ಮೀ) 46.7
ಒಟ್ಟು ಸಿವಿಲ್ ವೆಚ್ಚ (ಕೋಟಿ ರೂ.) 997.63
ಭೂಸ್ವಾಧೀನ ವೆಚ್ಚ (ಕೋಟಿ ರೂ.) 340.94
ಒಟ್ಟು ಬಂಡವಾಳ ವೆಚ್ಚ (ಕೋಟಿ ರೂ.) 1,853.16
ಮೋಡ್ ಹೈಬ್ರಿಡ್ ಆನ್ಯಯಿಟಿ ಮೋಡ್ (ಎಚ್‌ ಎ ಎಂ)
ಸಂಪರ್ಕಿತ ಪ್ರಮುಖ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳು – ಎನ್ ಎಚ್-38, ಎನ್ ಎಚ್-85, ಎನ್ ಎಚ್-36, ಎನ್ ಎಚ್-536, ಮತ್ತು ಎನ್ ಎಚ್-32

ರಾಜ್ಯ ಹೆದ್ದಾರಿಗಳು – ಎಸ್‌ ಎಚ್-47, ಎಸ್‌ ಎಚ್ -29, ಎಸ್‌ ಎಚ್ -34

ಸಂಪರ್ಕಗೊಂಡಿರುವ ಆರ್ಥಿಕ / ಸಾಮಾಜಿಕ / ಸಾರಿಗೆ ಕೇಂದ್ರಗಳು ವಿಮಾನ ನಿಲ್ದಾಣಗಳು: ಮಧುರೈ, ರಾಮನಾದ್ (ನೌಕಾ ವಾಯು ನಿಲ್ದಾಣ)

ರೈಲು ನಿಲ್ದಾಣಗಳು: ಮಧುರೈ, ರಾಮೇಶ್ವರಂ

ಸಣ್ಣ ಬಂದರುಗಳು: ಪಂಬನ್, ರಾಮೇಶ್ವರಂ

ಸಂಪರ್ಕಗೊಂಡಿರುವ ಪ್ರಮುಖ ನಗರಗಳು / ಪಟ್ಟಣಗಳು ಮಧುರೈ, ಪರಮಕುಡಿ, ರಾಮನಾಥಪುರಂ, ರಾಮೇಶ್ವರಂ
ಉದ್ಯೋಗ ಸೃಷ್ಟಿಯ ಸಾಮರ್ಥ್ಯ 8.4 ಲಕ್ಷ ಮಾನವ ದಿನಗಳು (ಪ್ರತ್ಯಕ್ಷ) ಮತ್ತು 10.5 ಲಕ್ಷ ಮಾನವ ದಿನಗಳು (ಪರೋಕ್ಷ)
ಎಫ್‌ ವೈ-25 ರಲ್ಲಿ ವಾರ್ಷಿಕ ಸರಾಸರಿ ದೈನಂದಿನ ಸಂಚಾರ (ಎಎಡಿಟಿ) ಅಂದಾಜು 12,700 ಪ್ರಯಾಣಿಕ ಕಾರುಗಳು (ಪಿಸಿಯು)

About Matribhumi Samachar

Check Also

ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದಲ್ಲಿ ರೈತರ ದಿನಾಚರಣೆ

ಡಿಸೆಂಬರ್ 23, 2025 ರಂದು ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದ ಯಲಹಂಕ ಆವರಣದಲ್ಲಿ ರೈತರ ದಿನಾಚರಣೆಯನ್ನು ಆಚರಿಸಿಲಾಯಿತು. ಕಾರ್ಯಕ್ರಮಕ್ಕೆ …