ಸ್ಥೂಲತೆ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ಗಳ ಏಕೀಕೃತ ವಿಧಾನಗಳ ಅಂತಾರಾಷ್ಟ್ರೀಯ ಸಮ್ಮೇಳನವು, ಸೆಂಟ್ರಲ್ ಆಯುರ್ವೇದ ರಿಸರ್ಚ್ ಇನ್‌ಸ್ಟಿಟ್ಯೂಟ್ (CARI), ಬೆಂಗಳೂರು ಹಾಗೂ ಐ.ಐ.ಎಸ್.ಸಿ ಮತ್ತು ನಿಮ್ಹಾನ್ಸ್‌ಗಳ ಸಹಯೋಗದಲ್ಲಿ, 2025 ಡಿಸೆಂಬರ್ 1 ರಂದು ಐ.ಐ.ಎಸ್.ಸಿ ಬೆಂಗಳೂರಿನಲ್ಲಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ಸಿ.ಸಿ.ಆರ್.ಎ.ಎಸ್ ನ 57ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಡಾ. ಬಿ.ಎನ್. ಗಂಗಾಧರ, ಮಾಜಿ ಅಧ್ಯಕ್ಷರು, ಎನ್.ಎಂ.ಸಿ ಹಾಗೂ ನ್ಯಾಷನಲ್ ಆಯುಷ್ ಚೇರ್, ಪ್ರೊಫೆಸರ್ ಎಮೆರಿಟಸ್, ನಿರ್ಮಾನ್ಸ್ ಅವರಿಂದ ಉದ್ಘಾಟಿಸಲಾಯಿತು. ಪ್ರೊ. ನವಕಾಂತ ಭಟ್, ಡೀನ್, ಐಐಎಸ್‌ಸಿ ಮತ್ತು ಡಾ. ಕೌಸ್ತುಭ ಉಪಾಧ್ಯಾಯ, ಸಲಹೆಗಾರ (ಆಯು.), ಆಯುಷ್ ಸಚಿವಾಲಯ, ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಮ್ಮೇಳನವು ಆಯುರ್ವೇದ, ಆಧುನಿಕ ವೈದ್ಯಕೀಯ ಮತ್ತು ಸಂಬಂಧಿತ ವೈಜ್ಞಾನಿಕ ಕ್ಷೇತ್ರಗಳ ತಜ್ಞರನ್ನು ಒಂದೇ ವೇದಿಕೆಗೆ ತಂದು, ಮೆಟಾಬಾಲಿಕ್ ರೋಗಗಳ ನಿರ್ವಹಣೆಯಲ್ಲಿ ಉದಯೋನ್ಮುಖ ಸವಾಲುಗಳ ಕುರಿತು ಚರ್ಚಿಸಲು ಅವಕಾಶ ಒದಗಿಸಿತು. ರಾಷ್ಟ್ರ ಮಟ್ಟದ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ವಕ್ತಾರರ ಭಾಗವಹಿಸುವಿಕೆ, ಸಾಕ್ಷ್ಯಾಧಾರಿತ ಏಕೀಕೃತ ಆರೋಗ್ಯ ಸೇವೆಗೆ ಭಾರತ ಸರ್ಕಾರ ನೀಡುತ್ತಿರುವ ಆದ್ಯತೆಯನ್ನು ಪುನರ್‌ರೇಖೆಸಿತು.

ಸಿ.ಸಿ.ಆರ್.ಎ.ಎಸ್ ಮಹಾನಿರ್ದೇಶಕರಾದ ಡಾ. ರಬಿನಾರಾಯಣ ಆಚಾರ್ಯ ಅವರು, ಡಿಸೆಂಬರ್ 1 ಮತ್ತು 2 ರಂದು ನಡೆಯುವ ಚರ್ಚೆಗಳು ಆಯುರ್ವೇದ ಮತ್ತು ಆಧುನಿಕ ಜೀವವೈದ್ಯಕೀಯ ಸಂಶೋಧನೆಗಳ ಮಧ್ಯೆ ಸೇತುವೆ ನಿರ್ಮಿಸುವಲ್ಲಿ ಮಾರ್ಗದರ್ಶಿಯಾಗಲಿವೆ ಎಂದು ಅಭಿಪ್ರಾಯ ಪಟ್ಟರು. ಸಿ.ಸಿ.ಆರ್.ಎ.ಎಸ್ ಉಪ ಮಹಾನಿರ್ದೇಶಕರಾದ ಡಾ. ಶ್ರೀಕಾಂತ್ ಎನ್ ಅವರು ಸಮ್ಮೇಳನದ ಅವಲೋಕನ ಮತ್ತು ಸಂಸ್ಥೆಯ ಪಯಣವನ್ನು ಪರಿಚಯಿಸಿದರು.

ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಮತ್ತು ಕಾರೀ ಮುಖ್ಯಸ್ಥೆ , ಡಾ. ಸುಲೋಚನ ಭಟ್ ಅವರು, ವೈಜ್ಞಾನಿಕ ಸಂವಾದಗಳು, ಕಾರ್ಯಾಗಾರಗಳು ಹಾಗೂ ಚರ್ಚೆಗಳು ಏಕೀಕೃತ ಆರೈಕೆ, ಅನುವಾದಾತ್ಮಕ ಸಂಶೋಧನೆ ಮತ್ತು ಆರೋಗ್ಯ ನೀತಿ ರೂಪಿಸುವ ಹೊಸ ಮಾದರಿಗಳಿಗೆ ದಾರಿತೋರುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಿ.ಸಿ.ಆರ್.ಎ.ಎಸ್ ನೌಕರರ ಸನ್ಮಾನ, CARI ಬೆಂಗಳೂರು ಇಂಕ್ಯುಬೇಷನ್ ಕೇಂದ್ರದ ಉದ್ಘಾಟನೆ, 10 ಪುಸ್ತಕಗಳು, ಒಂದು ಜರ್ನಲ್ ವಿಶೇಷ ಸಂಚಿಕೆ, ಒಂದು ಯೋಜನಾ ಫ್ಲಯರ್ ಹಾಗೂ ಸಿ.ಸಿ.ಆರ್.ಎ.ಎಸ್ ನ ಕುಲಗೀತೆಯ ಬಿಡುಗಡೆ ನೆರವೇರಿತು.
Matribhumi Samachar Kannad

