Friday, September 18 2026 | 08:48:07 PM
Breaking News

ಸಂಸ್ಥಾಪನಾ ದಿನದಂದು ಭಾರತೀಯ ಕರಾವಳಿ ರಕ್ಷಣಾ ಪಡೆಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Connect us on:

ಭಾರತೀಯ ಕರಾವಳಿ ರಕ್ಷಣಾ ಪಡೆಗಳ ಸ್ಥಾಪನಾ ದಿನದಂದು, ನಮ್ಮ ವಿಶಾಲ ಕರಾವಳಿಯನ್ನು ರಕ್ಷಿಸುವಲ್ಲಿನ ಶೌರ್ಯ, ಸಮರ್ಪಣೆ ಮತ್ತು ನಿರಂತರ ಜಾಗರೂಕತೆಗಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಕರಾವಳಿ ರಕ್ಷಣಾ ಪಡೆಯನ್ನು ಶ್ಲಾಘಿಸಿದ್ದಾರೆ. ಸಮುದ್ರ ಭದ್ರತೆಯಿಂದ ವಿಪತ್ತು ಪ್ರತಿಕ್ರಿಯೆಯವರೆಗೆ, ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಗಳಿಂದ ಪರಿಸರ ರಕ್ಷಣೆಯವರೆಗೆ, ಭಾರತೀಯ ಕರಾವಳಿ ರಕ್ಷಣಾ ಪಡೆ ನಮ್ಮ ಸಮುದ್ರಗಳ ಅಸಾಧಾರಣ ಹಾಗೂ ವಿಶೇಷ ರಕ್ಷಕರಾಗಿದ್ದು, ನಮ್ಮ ನೀರು ಮತ್ತು ಜನರ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿಗಳು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

“ಇಂದು, ಅವರ ಸ್ಥಾಪನಾ ದಿನದಂದು, ನಮ್ಮ ವಿಶಾಲ ಕರಾವಳಿಯನ್ನು ಶೌರ್ಯ, ಸಮರ್ಪಣೆ ಮತ್ತು ನಿರಂತರ ಜಾಗರೂಕತೆಯಿಂದ ರಕ್ಷಿಸಿದ್ದಕ್ಕಾಗಿ ನಾವು ಭಾರತೀಯ ಕರಾವಳಿ ರಕ್ಷಣಾ ಪಡೆಗಳನ್ನು ಶ್ಲಾಘಿಸುತ್ತೇವೆ. ಕಡಲ ಭದ್ರತೆಯಿಂದ ವಿಪತ್ತು ಪ್ರತಿಕ್ರಿಯೆಯವರೆಗೆ, ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಗಳಿಂದ ಪರಿಸರ ರಕ್ಷಣೆಯವರೆಗೆ, ಭಾರತೀಯ ಕರಾವಳಿ ರಕ್ಷಣಾ ಪಡೆ ನಮ್ಮ ಸಮುದ್ರಗಳ ಅಸಾಧಾರಣ ರಕ್ಷಕರಾಗಿದ್ದು, ನಮ್ಮ ನೀರು ಮತ್ತು ಜನರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

@IndiaCoastGuard”

 

भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं

सारांश कनौजिया की पुस्तकें

 

ऑडियो बुक : भारत 1885 से 1950 (इतिहास पर एक दृष्टि)

 

About Matribhumi Samachar

Check Also

ಬಡತನ ಮತ್ತು ವ್ಯಸನದ ಅಸ್ಥಿರತೆಯಿಂದ ಘನತೆಯ ಜೀವನಕ್ಕೆ: ಉದಯಪುರದ ಯೋಗೇಶ್ ಚೇತರಿಕೆಯ ಸ್ಪೂರ್ತಿದಾಯಕ ಯಶೋಗಾಥೆ

ದುರ್ಬಲ ಮತ್ತು ಸವಾಲಿನ ಸನ್ನಿವೇಶಗಳಲ್ಲಿ ವಾಸಿಸುವ ವ್ಯಕ್ತಿಗಳಿಗೆ ಸಕಾಲಿಕ ಸಂಪರ್ಕ, ವೈದ್ಯಕೀಯ ಚಿಕಿತ್ಸೆ ಮತ್ತು ಪುನರ್ವಸತಿ ನೆರವು ದೊರೆತರೆ, ಅದು …