Wednesday, December 10 2025 | 07:09:44 AM
Breaking News

ಸಾಗರಮಾಲಾ ಯೋಜನೆಯ ಕರಾವಳಿ ಸಮುದಾಯ ಅಭಿವೃದ್ಧಿ ಉಪಕ್ರಮದಡಿಯಲ್ಲಿ ಕರ್ನಾಟಕಕ್ಕೆ 6 ಯೋಜನೆಗಳು ಮಂಜೂರು

Connect us on:

ಸಾಗರಮಾಲಾ ಯೋಜನೆಯ ಕರಾವಳಿ ಸಮುದಾಯ ಅಭಿವೃದ್ಧಿ ಘಟಕದಡಿಯಲ್ಲಿ, ಕರ್ನಾಟಕಕ್ಕೆ 6 ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ.

ಸಾಗರಮಾಲಾ ಕಾರ್ಯಕ್ರಮದ ಅಡಿಯಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುಕೂಲವಾಗುವಂತೆ ಎಲ್ಲಾ ಕರಾವಳಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ ಸಮುದ್ರ ಮತ್ತು ಜಲಮಾರ್ಗ ಸಾರಿಗೆ ಸಮಿತಿಗಳನ್ನು ರೂಪಿಸಲು ಸಚಿವಾಲಯವು ಅನುಕೂಲ ಮಾಡಿಕೊಟ್ಟಿದೆ.

ಸಾಗರಮಾಲಾ ಯೋಜನೆಯಡಿ ಕರ್ನಾಟಕದಲ್ಲಿ ಮಂಜೂರಾದ ಕರಾವಳಿ ಸಮುದಾಯ ಅಭಿವೃದ್ಧಿ ಯೋಜನೆಗಳು ಹೀಗಿವೆ:

ಕ್ರಮ ಸಂಖ್ಯೆ ಯೋಜನೆಯ ಹೆಸರು ರಾಜ್ಯ / ಕೇಂದ್ರಾಡಳಿತ ಪ್ರದೇಶ ಯೋಜನೆಯ ವೆಚ್ಚ (ಕೋಟಿ ರೂ.ಗಳಲ್ಲಿ)
1 ಉಡುಪಿಯ ಮಲ್ಪೆಯಲ್ಲಿ ಅಸ್ತಿತ್ವದಲ್ಲಿರುವ ಮೀನುಗಾರಿಕಾ ಬಂದರಿನ ಆಧುನೀಕರಣ ಸೇರಿದಂತೆ ಮೂರನೇ ಹಂತದ ವಿಸ್ತರಣೆ. ಕರ್ನಾಟಕ 50.00
2 ಉತ್ತರ ಕನ್ನಡದ ಅಮದಳ್ಳಿಯಲ್ಲಿ ಅಸ್ತಿತ್ವದಲ್ಲಿರುವ ಮೀನುಗಾರಿಕಾ ಬಂದರಿನ ಆಧುನೀಕರಣ. ಕರ್ನಾಟಕ

 

19.00
3 ಕರಾವಳಿ ಜಿಲ್ಲೆಗಳ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ – ಹಂತ I – ಕರ್ನಾಟಕ ಕರ್ನಾಟಕ 1.53
4 ಕುಳಾಯಿಯಲ್ಲಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಕರ್ನಾಟಕ 196.51
5 ಉಡುಪಿಯ ಹೆಜಮಾಡಿ ಕೋಡಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಕರ್ನಾಟಕ 139
6 ಕರಾವಳಿ ಜಿಲ್ಲೆಗಳ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ – ಹಂತ II – ಕರ್ನಾಟಕ ಕರ್ನಾಟಕ 2.18

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಜೂರಾದ ಯೋಜನೆಗಳ ವಿವರಗಳು ಹೀಗಿವೆ:

ಕ್ರಮ ಸಂಖ್ಯೆ ಯೋಜನೆಯ ಹೆಸರು ಯೋಜನೆಯ ಪ್ರಕಾರ ಯೋಜನೆಯ ಸ್ಥಳ ಒಟ್ಟು ಅಂದಾಜು ವೆಚ್ಚ (ಕೋಟಿ ರೂ.ಗಳಲ್ಲಿ)
1 ಕರ್ನಾಟಕ ರಾಜ್ಯದಲ್ಲಿ ಬಂದರು ಮತ್ತು ಕಡಲ ವಲಯದಲ್ಲಿ ಸಾಗರಮಾಲಾ-ಡಿಡಿಯು ಜಿಕೆವೈ ಸಮನ್ವಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಎರಡನೇ ಹಂತದ ಅನುಷ್ಠಾನ. ಕೌಶಲ್ಯ ಅಭಿವೃದ್ಧಿ ದಕ್ಷಿಣ ಕನ್ನಡ 2.18
2 ಮಂಗಳೂರು ಮೀನುಗಾರಿಕಾ ಬಂದರಿನ ಆಧುನೀಕರಣ ಮತ್ತು ಮೇಲ್ದರ್ಜೆ ಮೀನುಗಾರಿಕೆ ಬಂದರು ದಕ್ಷಿಣ ಕನ್ನಡ 37.47
3 ಕುಳಾಯಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಮೀನುಗಾರಿಕೆ ಬಂದರು ಮಂಗಳೂರು, ದಕ್ಷಿಣ ಕನ್ನಡ 196.51

ಸಾಗರಮಾಲಾ ಕಾರ್ಯಕ್ರಮದ ಅಡಿಯಲ್ಲಿ ಕರಾವಳಿ ಸಮುದಾಯ ಅಭಿವೃದ್ಧಿ ಉಪಕ್ರಮವು ಮೀನುಗಾರಿಕೆ, ಜಲಚರ ಸಾಕಣೆ, ಶೀತಲ ಸರಪಳಿ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿ, ಸ್ಥಳೀಯ ಪ್ರವಾಸೋದ್ಯಮ ಮತ್ತು ಮನರಂಜನಾ ಸೌಲಭ್ಯಗಳಲ್ಲಿ ಮೌಲ್ಯವರ್ಧನೆಯ ಮೂಲಕ ಕರಾವಳಿ ಸಮುದಾಯಗಳ ಸಾಮಾಜಿಕ-ಆರ್ಥಿಕ ಯೋಗಕ್ಷೇಮವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವುದು, ಬಡತನವನ್ನು ಕಡಿಮೆ ಮಾಡುವುದು ಮತ್ತು ಕರಾವಳಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಬದಲಾಗುತ್ತಿರುವ ಆರ್ಥಿಕ ಭೂದೃಶ್ಯದಲ್ಲಿ ಅಭಿವೃದ್ಧಿ ಹೊಂದಲು ಕೌಶಲ್ಯ, ಮೂಲಸೌಕರ್ಯ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಕರಾವಳಿ ಸಮುದಾಯಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.

ಲೋಕಸಭೆಯಲ್ಲಿಂದು ಶ್ರೀ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರ ಪ್ರಶ್ನೆಗೆ ಸಚಿವರು ಈ ಮಾಹಿತಿ ನೀಡಿದ್ದಾರೆ.

About Matribhumi Samachar

Check Also

ಕರ್ನಾಟಕದಲ್ಲಿ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಉಪಕ್ರಮಗಳಲ್ಲಿ ಗಮನಾರ್ಹ ಪ್ರಗತಿ

ಕರ್ನಾಟಕದಾದ್ಯಂತ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಯೋಜನೆಗಳಲ್ಲಿ ಗಮನಾರ್ಹ ಪ್ರಗತಿಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ …