ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಷಿ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆಯೋಜಿಸಲಾದ ರೈತರೊಂದಿಗೆ ಸಂವಾದ ಮತ್ತು ರೂ. 20,500 ಕೋಟಿ ಮೊತ್ತದ ನಿಧಿಯನ್ನು 9 ಕೋಟಿ 70 ಲಕ್ಷ ರೈತರ ಖಾತೆಗೆ ವರ್ಗಾಯಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರೈತರು ಕಿಸಾನ್ ಕ್ರೆಡಿಟ್ ಕಾರ್ಡ್, ಪಿಎಮ್-ಕುಸುಮ್, ಕೃಷಿ ಸಿಂಚಯದಂತಹ ಧನಸಹಾಯ ಲಭ್ಯವಿರುವ ಯೋಜನೆಗಳ ಸದುಪಯೋಗ ಪಡೆದು, ಕೃಷಿಯಲ್ಲಿ ಮುನ್ನಡೆ ಸಾಧಿಸಬೇಕು ಎಂದು ಹೇಳಿದರು.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವರ್ಷಕ್ಕೆ ₹ 6000 ಹಣವನ್ನು ಮೂರು ಕಂತುಗಳಲ್ಲಿ ರೈತರಿಗೆ ಅವರ ಖಾತೆಗೆ ನೇರವಾಗಿ ನೀಡುತ್ತಿದ್ದು, ರೈತರು ಆ ಹಣದಿಂದ ಕೃಷಿಗೆ ಉಪಯುಕ್ತ ಪರಿಕರಗಳ ಖರೀದಿ, ನೂತನ ತಂತ್ರಜ್ಞಾನ ಅಳವಡಿಕೆ ಮತ್ತು ಕುಟುಂಬದ ಉನ್ನತಿಗಾಗಿ ಬಳಕೆಮಾಡಿಕೊಳ್ಳಬೇಕಾಗಿ ಕರೆ ನೀಡಿದರು. ಸರಕಾರ ರೈತರ ನೆರವಿಗಾಗಿಯೇ ಸೂಕ್ತ ಹಾಗೂ ಬಲಿಷ್ಠ ಕಾನೂನು ವ್ಯವಸ್ಥೆ ರೂಪಿಸಿದ್ದು, ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದೆ.
ಒಪ್ಪಂದ ಕೃಷಿಯಲ್ಲಿ ಕಂಪನಿಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ರೈತರ ಮನೆ ಬಾಗಿಲಿಗೆ ಆಧುನಿಕ ತಂತ್ರಜ್ಞಾನ, ಮಾರ್ಗದರ್ಶನ ಮತ್ತು ಉತ್ತಮ ಬೆಲೆ ನೀಡುತ್ತದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ 1342 ರೈತ, ರೈತ ಮಹಿಳೆಯರು, ಕೃಷಿಸಖಿಯರು ಹಾಗೂ ವಿದ್ಯಾರ್ಥಿಗಳು ಹಾಗೂ ಕೃಷಿ ವಿಜ್ಞಾನಿಗಳು ಭಾಗವಹಿಸಿದ್ದರು.

Matribhumi Samachar Kannad

