Wednesday, December 31 2025 | 06:46:36 AM
Breaking News

ವಿಕಸಿತ ಭಾರತ @2047ರ ನಿಟ್ಟಿನಲ್ಲಿ 100-ದಿನಗಳ ಕ್ರಿಯಾ ಯೋಜನೆಯಡಿಯಲ್ಲಿ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ವಲಯದಲ್ಲಿ ಸುರಕ್ಷತಾ ಮಾನದಂಡಗಳನ್ನು ಬಲಪಡಿಸಲಾಗುವುದು

Connect us on:

ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ಕೇಂದ್ರ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ (ಡಿಸಿಪಿಸಿ)ಯ ರಾಷ್ಟ್ರವ್ಯಾಪಿ ತರಬೇತಿ ಉಪಕ್ರಮದ ಭಾಗವಾಗಿ, ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ (ಸಿಐಪಿಇಟಿ) ಸಂಸ್ಥೆಯು ಜನವರಿ 30-31, 2025 ರಂದು ಬೆಂಗಳೂರು ಸಿಐಪಿಇಟಿ: ಎಸ್.ಎ.ಆರ್.ಪಿ. – ಎಪಿ.ಡಿ.ಡಿ.ಆರ್.ಎಲ್. ನಲ್ಲಿ ಪ್ರಮುಖ ಅಪಘಾತ ಅಪಾಯದ (ಎಂ.ಎ.ಹೆಚ್)  ಘಟಕಗಳಿಗಾಗಿ “ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಕೈಗಾರಿಕಾ ಸುರಕ್ಷತೆ” ಕುರಿತು ಎರಡು ದಿನಗಳ ವಸತಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ತರಬೇತಿ ಕಾರ್ಯಕ್ರಮದಲ್ಲಿ, ಕರ್ನಾಟಕದ ಕೆಮಿಕಲ್ಸ್ ಮತ್ತು ಪೆಟ್ರೋಕೆಮಿಕಲ್ಸ್ ವಲಯಗಳ 60 ಎಂ.ಎ.ಹೆಚ್. ಘಟಕಗಳಿಂದ 127 ಪ್ರತಿನಿಧಿಗಳು ಭಾಗವಹಿಸಿದ್ದರು.  ಅಪಾಯಕಾರಿ ಪರಿಸರದಲ್ಲಿ ಸುರಕ್ಷಿತ ಕೆಲಸದ ಸ್ಥಳಕ್ಕಾಗಿ ಉತ್ತಮ ಅಭ್ಯಾಸಗಳು, ಪ್ರಕ್ರಿಯೆ ಸುರಕ್ಷತೆ ನಿರ್ವಹಣೆ, ಅಪಾಯಕಾರಿ ವಸ್ತುಗಳನ್ನು ಸಾಗಿಸುವ ಸುವರ್ಣ ನಿಯಮಗಳು, ಪರಿಸರ ರಕ್ಷಣೆ ಮತ್ತು ಸೋರಿಕೆ ತಡೆಗಟ್ಟುವಿಕೆ, ಅಣಕು-ಅಪ್ ಡ್ರಿಲ್, ಕೈಗಾರಿಕಾ ವಿಷಶಾಸ್ತ್ರ, ಸುಧಾರಿತ ಅಪಾಯದ ಮೌಲ್ಯಮಾಪನಗಳು ಮುಂತಾದ ವಿಷಯಗಳ ಕುರಿತು ಒಟ್ಟು 17 ತಾಂತ್ರಿಕ ಪ್ರಾತ್ಯಕ್ಷಿಕೆ – ವಿವರಣಾ ಅವಧಿಗಳನ್ನು ನಡೆಸಲಾಯಿತು.  ಇದರಲ್ಲಿ ಸಿಐಪಿಇಟಿ, ಉದ್ಯಮ ತಜ್ಞರು ಮತ್ತು ವಿಷಯದ ತಜ್ಞರು  ವಿವಿಧ ಗೌರವಾನ್ವಿತ ಸಂಸ್ಥೆಗಳ ವಿಷಯ ತಜ್ಞರು ವಿಷಯದ ಬಗ್ಗೆ ವಿವರವಾದ ಒಳನೋಟವನ್ನು ನೀಡಿದರು.

ಡಿಸಿಪಿಸಿ ಯ ಈ ತರಬೇತಿ ಉಪಕ್ರಮವು ವಿಕಸಿತ ಭಾರತ @ 2047ರ ನಿಟ್ಟಿನಲ್ಲಿ 100-ದಿನಗಳ ಕ್ರಿಯಾ ಯೋಜನೆ ಅಡಿಯಲ್ಲಿ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ವಲಯಗಳಾದ್ಯಂತ ಕೈಗಾರಿಕಾ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕಾರ್ಯಕ್ರಮವು “ಕೆಲಸದ ಸ್ಥಳದಲ್ಲಿ ಅಪಾಯಕಾರಿ ರಾಸಾಯನಿಕಗಳ ಸುರಕ್ಷಿತ ನಿರ್ವಹಣೆ ಮತ್ತು ಅಪಾಯಕಾರಿ ರಾಸಾಯನಿಕಗಳೊಂದಿಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡುವುದು, ಹಾಗೂ ಬೃಹತ್ ಘಟಕಗಳ ಒಳಗೆ ಸುರಕ್ಷತಾ ಅರಿವು ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ ಭಾರತದಾದ್ಯಂತ ಅಪಘಾತ ಅಪಾಯ (ಎಂ.ಎ.ಹೆಚ್) ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡುವುದು”

ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ವಲಯದಲ್ಲಿ ಸುರಕ್ಷತೆ, ಸುಸ್ಥಿರತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರದ ಬದ್ಧತೆಯನ್ನು ಈ ಉಪಕ್ರಮವು ಒತ್ತಿಹೇಳುತ್ತದೆ.  ಇದು ಸುರಕ್ಷಿತ ಮತ್ತು ಪರಿಸರ ಜವಾಬ್ದಾರಿಯುತ ಕೈಗಾರಿಕಾ ಚೌಕಟ್ಟನ್ನು ಅಭಿವೃದ್ಧಿಗೊಳಿಸಿ ಬೆಳೆಸುವ ಕಡೆಗೆ ಪೂರ್ವಭಾವಿ ಕ್ರಮ ವಿಧಾನವನ್ನು ಪ್ರತಿಬಿಂಬಿಸುತ್ತದೆ.

ಎಲ್ಲಾ 2393 ಎಂ.ಎ.ಹೆಚ್ ಘಟಕಗಳಿಗೆ ರಾಸಾಯನಿಕ ಸುರಕ್ಷತೆಯ ಕುರಿತು ತರಬೇತಿ ನೀಡಲು ಡಿಸಿಪಿಸಿ ಈ ಉಪಕ್ರಮವನ್ನು ತೆಗೆದುಕೊಂಡಿದೆ ಮತ್ತು ಭಾಗವಹಿಸುವಿಕೆಯನ್ನು ಗರಿಷ್ಠಗೊಳಿಸಲು ಕೈಗಾರಿಕಾ ಕ್ಲಸ್ಟರ್‌ಗಳಲ್ಲಿ ಇದನ್ನು ನಡೆಸಲಾಗುತ್ತದೆ.  ಒಟ್ಟಾರೆಯಾಗಿ, ಇಲಾಖೆಯು 5 ವರ್ಷಗಳ ಅವಧಿಯಲ್ಲಿ ಎಲ್ಲಾ ಎಂ.ಎ.ಹೆಚ್. ಘಟಕಗಳನ್ನು ಒಳಗೊಳ್ಳಲು ದೇಶಾದ್ಯಂತದ ಕೈಗಾರಿಕಾ ಸಮೂಹಗಳಲ್ಲಿ 48 ಅಂತಹ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಿದೆ.

About Matribhumi Samachar

Check Also

ಪಂಚಕುಲದಲ್ಲಿ ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಬ್ಕೊ) ಆಯೋಜಿಸುತ್ತಿರುವ ರಾಷ್ಟ್ರೀಯ ಸಹಕಾರಿ ಸಮ್ಮೇಳನವನ್ನು ಉದ್ದೇಶಿಸಿ ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಭಾಷಣ ಮಾಡಲಿದ್ದಾರೆ

ಹರಿಯಾಣದ ಪಂಚಕುಲದ ಇಂದ್ರಧನುಷ್ ಸಭಾಂಗಣದಲ್ಲಿ ಡಿಸೆಂಬರ್ 24, 2025 ರಂದು “ಸಹಕಾರದ ಮೂಲಕ ಸಮೃದ್ಧಿ – ಸುಸ್ಥಿರ ಕೃಷಿಯಲ್ಲಿ ಸಹಕಾರಿ …