Saturday, December 06 2025 | 10:53:04 AM
Breaking News

2025ನೇ ಸಾಲಿನ ವಿಶೇಷಚೇತನ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನ ಮಾಡಿದ ಭಾರತದ ರಾಷ್ಟ್ರಪತಿ

Connect us on:

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು (2025 ಡಿಸೆಂಬರ್ 3) ನವದೆಹಲಿಯಲ್ಲಿಂದು ಅಂತಾರಾಷ್ಟ್ರೀಯ ವಿಶೇಷಚೇತನರ ದಿನದ ಸಂದರ್ಭದಲ್ಲಿ 2025ನೇ ಸಾಲಿನ ರಾಷ್ಟ್ರೀಯ ವಿಶೇಷಚೇತನರ ಸಬಲೀಕರಣ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಈ ವೇಳೆ ಮಾತನಾಡಿದ ರಾಷ್ಟ್ರಪತಿ, ದಿವ್ಯಾಂಗರು ಸಮಾನತೆಗೆ ಅರ್ಹರು ಎಂದು ಹೇಳಿದರು.ಸಮಾಜ ಮತ್ತು ದೇಶದ ಅಭಿವೃದ್ಧಿಯ ಪಯಣದಲ್ಲಿ ಅವರ ಸಮಾನ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು ದಾನದ ವಿಷಯಕ್ಕಿಂತ ಹೆಚ್ಚಾಗಿ ಎಲ್ಲಾ ಪಾಲುದಾರರ ಆದ್ಯ ಕರ್ತವ್ಯವಾಗಿದೆ. ದಿವ್ಯಾಂಗರ ಸಮಾನ ಪಾಲ್ಹೊಳ್ಳುವಿಕೆಯಿಂದ ಮಾತ್ರ ಸಮಾಜವನ್ನು ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಹೊಂದಿದೆ ಎಂದು ಪರಿಗಣಿಸಬಹುದು. ಅಂತಾರಾಷ್ಟ್ರೀಯ ವಿಶೇಷಚೇತನರ ದಿನ – 2025ರ ವಿಷಯವಾದ ‘ಸಾಮಾಜಿಕ ಪ್ರಗತಿಯನ್ನು ಮುನ್ನಡೆಸಲು ದಿವ್ಯಾಂಗರನ್ನು ಒಳಗೊಂಡ ಸಮಾಜಗಳನ್ನು ಬೆಳೆಸುವುದು’ ಸಹ ಈ ಪ್ರಗತಿಪರ ಕಲ್ಪನೆಯನ್ನು ಆಧರಿಸಿದೆ ಎಂದು ಅವರು ಒತ್ತಿ ಹೇಳಿದರು.

ನಮ್ಮ ದೇಶವು ಕಲ್ಯಾಣ ಮನಸ್ಥಿತಿಯನ್ನು ಮೀರಿ ವಿಶೇಷಚೇತನರಿಗಾಗಿ ಹಕ್ಕು-ಆಧಾರಿತ, ಘನತೆ-ಕೇಂದ್ರಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದೆ ಎಂದು ರಾಷ್ಟ್ರಪತಿಗಳು ಸಂತಹ ವ್ಯಕ್ತಪಡಿಸಿದರು. ನಮ್ಮ ರಾಷ್ಟ್ರೀಯ ಅಭಿವೃದ್ಧಿ ಪಯಣದಲ್ಲಿ ದಿವ್ಯಾಂಗರ ಸೇರ್ಪಡೆ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದರು. ವಿಶೇಷಚೇತನರಿಗೆ ವಿಶೇಷ ಗೌರವವನ್ನು ನೀಡುವ ಉದ್ದೇಶದಿಂದ 2015 ರಿಂದ “ದಿವ್ಯಾಂಗಜನ’’ ಎಂಬ ಪದವನ್ನು ಬಳಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದರು.

ಕೇಂದ್ರ ಸರ್ಕಾರವು ದಿವ್ಯಾಂಗ ಜನರ ಸೇರ್ಪಡೆ ಮತ್ತು ಸಬಲೀಕರಣಕ್ಕಾಗಿ ಪೂರಕ ವ್ಯವಸ್ಥೆಯನ್ನು ಬಲಪಡಿಸುತ್ತಿದೆ ಎಂದು ರಾಷ್ಟ್ರಪತಿ ಹೇಳಿದರು. ಸಂಕೇತ ಭಾಷಾ ಸಂಶೋಧನೆ ಮತ್ತು ತರಬೇತಿ, ಮಾನಸಿಕ ಆರೋಗ್ಯ ಪುನರ್ವಸತಿ ಮತ್ತು ಕ್ರೀಡಾ ತರಬೇತಿಯಂತಹ ವಿವಿಧ ಕ್ಷೇತ್ರಗಳಲ್ಲಿ ಅವರಿಗಾಗಿ ಹಲವು ರಾಷ್ಟ್ರೀಯ ಮಟ್ಟದ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಲಕ್ಷಾಂತರ ದಿವ್ಯಾಂಗರಿಗೆ ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದ್ದು, ಇದು ವಿಶೇಷ ಸೌಲಭ್ಯಗಳ ಪ್ರಯೋಜನ ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

ಸರ್ಕಾರದ ಜೊತೆಗೆ ಸಮಾಜವು ದಿವ್ಯಾಂಗರ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಜಾಗರೂಕರಾಗಿರಬೇಕು ಮತ್ತು ಸಕ್ರಿಯರಾಗಿರಬೇಕು ಎಂದು ರಾಷ್ಟ್ರಪತಿ ಹೇಳಿದರು. ಇದು ಸರ್ಕಾರದ ಪ್ರಗತಿಪರ ಪ್ರಯತ್ನಗಳನ್ನು ಬಲಪಡಿಸುತ್ತದೆ. ದಿವ್ಯಾಂಗರ ಘನತೆ, ಸ್ವಾವಲಂಬನೆ ಮತ್ತು ಸ್ವಾಭಿಮಾನವನ್ನು ಖಾತ್ರಿಪಡಿಸಿಕೊಳ್ಳುವುದು ಎಲ್ಲಾ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ನಾಗರಿಕರು ಸಾಮಾಜಿಕ ಮತ್ತು ರಾಷ್ಟ್ರೀಯ ಪ್ರಗತಿಗಾಗಿ ತಮ್ಮ ಪ್ರಯತ್ನಗಳಲ್ಲಿ ದಿವ್ಯಾಂಗರನ್ನು ಪಾಲುದಾರರನ್ನಾಗಿ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರಪತಿಗಳ ಪೂರ್ಣ ಭಾಷಣ ಓದಲು ಇಲ್ಲಿ ಕ್ಲಿಕ್ ಮಾಡಿ.

About Matribhumi Samachar

Check Also

ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ 33ನೇ ಸಭೆಯು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು

ರಾಷ್ಟ್ರೀಯ ತೋಟಗಾರಿಕೆ ಮಂಡಳಿ (ಎನ್‌.ಹೆಚ್‌.ಬಿ) ನಿರ್ದೇಶಕರ ಮಂಡಳಿಯ 33ನೇ ಸಭೆ ಇಂದು ನವದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಕೃಷಿ ಮತ್ತು …