Saturday, December 06 2025 | 03:56:44 AM
Breaking News

ದೆಹಲಿ ಸರ್ಕಾರದ ಸುಸ್ಥಿರ ಸಾರಿಗೆ ಉಪಕ್ರಮದ ಅಡಿಯಲ್ಲಿ 200 ಎಲೆಕ್ಟ್ರಿಕ್ ಬಸ್ ಗಳಿಗೆ ಹಸಿರು ನಿಶಾನೆ ತೋರಲಿರುವ ಪ್ರಧಾನಮಂತ್ರಿ

Connect us on:

ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜೂನ್ 5 ರಂದು ಬೆಳಗ್ಗೆ 10:15ಕ್ಕೆ ನವದೆಹಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ವಿಶೇಷ ಮರ ನೆಡುವ ಉಪಕ್ರಮದ ನೇತೃತ್ವ ವಹಿಸಲಿದ್ದು, ಪರಿಸರ ನಿರ್ವಹಣೆ ಮತ್ತು ಹಸಿರು ಚಲನಶೀಲತೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಲಿದ್ದಾರೆ.

ಪ್ರಧಾನಮಂತ್ರಿ ಅವರು ಏಕ್ ಪೆಡ್ ಮಾ ಕೆ ನಾಮ್ ಉಪಕ್ರಮದ ಅಡಿಯಲ್ಲಿ ಆಲದ ಸಸಿಯನ್ನು ನೆಡಲಿದ್ದಾರೆ. ಇದು 700 ಕಿ.ಮೀ ಅರಾವಳಿ ಶ್ರೇಣಿಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ‘ಅರಾವಳಿ ಹಸಿರು ಗೋಡೆ ಯೋಜನೆಯ’ ಭಾಗವಾಗಿದೆ.

ಈ ಯೋಜನೆಯು ದೆಹಲಿ, ರಾಜಸ್ಥಾನ, ಹರಿಯಾಣ ಮತ್ತು ಗುಜರಾತ್ ಸೇರಿದಂತೆ ನಾಲ್ಕು ರಾಜ್ಯಗಳ 29 ಜಿಲ್ಲೆಗಳಲ್ಲಿ ಅರಾವಳಿ ಬೆಟ್ಟ ಶ್ರೇಣಿಯ ಸುತ್ತಲಿನ 5 ಕಿ.ಮೀ ಬಫರ್ ಪ್ರದೇಶದಲ್ಲಿ ಹಸಿರು ಹೊದಿಕೆಯನ್ನು ಹರಡುವ ಪ್ರಮುಖ ಉಪಕ್ರಮವಾಗಿದೆ. ಅರಣ್ಯೀಕರಣ, ಮರು ಅರಣ್ಯೀಕರಣ ಮತ್ತು ಜಲಮೂಲಗಳ ಪುನಃಸ್ಥಾಪನೆಯ ಮೂಲಕ ಅರಾವಳಿಗಳ ಜೀವವೈವಿಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ. ಇದು ಈ ಪ್ರದೇಶದ ಮಣ್ಣಿನ ಫಲವತ್ತತೆ, ನೀರಿನ ಲಭ್ಯತೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಸ್ಥಳೀಯ ಸಮುದಾಯಗಳಿಗೆ ಉದ್ಯೋಗ ಮತ್ತು ಆದಾಯ ಸೃಷ್ಟಿಯ ಅವಕಾಶಗಳನ್ನು ಒದಗಿಸುವ ಮೂಲಕ ಪ್ರಯೋಜನವನ್ನು ನೀಡುತ್ತದೆ.

ದೆಹಲಿ ಸರ್ಕಾರದ ಸುಸ್ಥಿರ ಸಾರಿಗೆ ಉಪಕ್ರಮದ ಅಡಿಯಲ್ಲಿ 200 ಎಲೆಕ್ಟ್ರಿಕ್ ಬಸ್ ಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ, ಸ್ವಚ್ಛ ನಗರ ಚಲನಶೀಲತೆಯನ್ನು ಉತ್ತೇಜಿಸಲಿದ್ದಾರೆ ಮತ್ತು ಪರಿಸರ ಸಮತೋಲನದ ಕಡೆಗೆ ರಾಷ್ಟ್ರದ ಸಾಮೂಹಿಕ ಜವಾಬ್ದಾರಿಯನ್ನು ಸಂಕೇತಿಸಲಿದ್ದಾರೆ.

 

भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं

सारांश कनौजिया की पुस्तकें

ऑडियो बुक : भारत 1885 से 1950 (इतिहास पर एक दृष्टि)

 

About Matribhumi Samachar

Check Also

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಗುಜರಾತ್‌ ನಲ್ಲಿ ‘ಅರ್ಥ್ ಶೃಂಗಸಭೆ – 2025’ ಉದ್ಘಾಟಿಸಿದರು

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ರಾಜಧಾನಿ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ …