ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ ಹಾಗೂ ಐಐಟಿ ಮದ್ರಾಸ್ ಪೂರ್ವ ವಿದ್ಯಾರ್ಥಿಗಳ ಸಂಘ ಜಂಟಿಯಾಗಿ ಪ್ರಮುಖ ಜಾಗತಿಕ ನಾವೀನ್ಯತೆ ಹಾಗೂ ಪೂರ್ವ ವಿದ್ಯಾರ್ಥಿಗಳ 6ನೇ ಆವೃತ್ತಿಯ ಸಂಗಮ್-2025 ಶೃಂಗಸಭೆಯನ್ನು ನಾಳೆ ಬೆಂಗಳೂರಿನ ಎಂಜಿ ರಸ್ತೆಯ ತಾಜ್ ನಲ್ಲಿ ಆಯೋಜಿಸಿದೆ.
ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಪ್ರಸ್ತುತ ನೀತಿ- ಪ್ರತಿಭಾ ಪಲಾಯನದಿಂದ ಪ್ರತಿಭಾ ಜೋಡಣೆವರೆಗೆ ವಿಷಯದ ಕುರಿತು ಮಾತನಾಡುವರು.
ಕಾರ್ಯಕ್ರಮದಲ್ಲಿ ನಾವೀನ್ಯತೆ ಹಾಗೂ ಉದ್ಯಮಶೀಲತೆಯಲ್ಲಿನ ಹೊಸತನಗಳ ಕುರಿತು ಚರ್ಚೆ ನಡೆಯಲಿದೆ. ಕೃತಕ ಬುದ್ಧಿಮತ್ತೆ (ಎಐ), ಬಯೋಟೆಕ್ನಾಲಜಿ, ಡ್ರೋನ್ಸ್, ರೊಬೊಟಿಕ್ಸ್, ಸೈಬರ್ ಸುರಕ್ಷತೆ, ಸ್ಟಾರ್ಟ್ಅಪ್, ಬಾಹ್ಯಾಕಾಶ ಹಾಗೂ ತಂತ್ರಜ್ಞಾನ ವಿಷಯಗಳ ಕುರಿತು ನಡೆಯುವ ಗೋಷ್ಠಿಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಭಾಗವಹಿಸುವವರಿಗೆ ಪ್ರಾಯೋಗಿಕ ಜ್ಞಾನ, ವಿಮರ್ಶಾತ್ಮಕ ಚಿಂತನೆ ಬೆಳವಣಿಗೆ ಹಾಗೂ ವೈಯಕ್ತಿಕ ಪ್ರಗತಿಯ ಉನ್ನತಿಯ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ.
‘ನೀವು. ಈಗ’ ಪರಿಕಲ್ಪನೆಯಡಿ ಉದ್ಯಮಿಗಳು, ಹೂಡಿಕೆದಾರರು, ಪೂರ್ವ ವಿದ್ಯಾರ್ಥಿಗಳು, ಬೋಧಕರು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡಂತೆ 500ಕ್ಕೂ ಅಧಿಕ ಜನ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ನಾಳೆಯ ಸಂಗಮ್ 2025 ಮುಖ್ಯ ಕಾರ್ಯಕ್ರಮದಲ್ಲಿ ಐಐಟಿ ಮದ್ರಾಸ್ ನಿರ್ದೇಶಕರಾದ ಪ್ರೊ. ವಿ. ಕಾಮಕೋಟಿ, ಎಕ್ಸಿಲಿಯರ್ ವೆಂಚರ್ಸ್ನ ಅಧ್ಯಕ್ಷರು ಹಾಗೂ ಇನ್ಫೋಸಿಸ್ ನ ಸಹ ಸಂಸ್ಥಾಪಕರಾದ ಶ್ರೀ ಕ್ರಿಸ್ ಗೋಪಾಲಕೃಷ್ಣನ್, ಇಸ್ರೋದ ಪ್ರಾಧ್ಯಾಪಕರು ಹಾಗೂ ಮಾಜಿ ಅಧ್ಯಕ್ಷರಾದ ಡಾ. ಎಸ್. ಸೋಮನಾಥ್, ಬೆಂಗಳೂರು ದಕ್ಷಿಣ ಸಂಸದ ಶ್ರೀ ತೇಜಸ್ವಿ ಸೂರ್ಯ ಹಾಗೂ ವಿವಿಧ ಕ್ಷೇತ್ರಗಳ ತಜ್ಞರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
Matribhumi Samachar Kannad

