ಭಾರತ ಸರ್ಕಾರವು ಕರ್ನಾಟಕದಲ್ಲಿ ‘ಸ್ವದೇಶ್ ದರ್ಶನ್ 2.0’, ಪ್ರಶಾದ್ ಮತ್ತು ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆ (ಎಸ್ ಎ ಎಸ್ ಸಿ ಐ) ಗಳ ಅಡಿಯಲ್ಲಿ ಹಲವಾರು ಯೋಜನೆಗಳನ್ನು ಮಂಜೂರು ಮಾಡಿದ್ದು, ಅನುಷ್ಠಾನದ ಹಂತದಲ್ಲಿವೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರಸಿಂಗ್ ಶೇಖಾವತ್ ತಿಳಿಸಿದ್ದಾರೆ.
ಇದರ ಜೊತೆಗೆ, ಪ್ರವಾಸೋದ್ಯಮ ಸಚಿವಾಲಯವು ಬೀದರ್ ಮತ್ತು ಉಡುಪಿಯನ್ನು ಕರ್ನಾಟಕದ ತಾಣಗಳಾಗಿ ಸಿಬಿಡಿಡಿ (ಸವಾಲು ಆಧಾರಿತ ಗಮ್ಯತಾಣ ಅಭಿವೃದ್ಧಿ) ಅಡಿಯಲ್ಲಿ ಗುರುತಿಸಲಾಗಿದೆ. ಆದಾಗ್ಯೂ, ಈ ತಾಣಗಳಲ್ಲಿ ಯಾವುದೇ ಯೋಜನೆಗೆ ಅನುಮೋದನೆ ನೀಡಲಾಗಿಲ್ಲ ಮತ್ತು ಅಗತ್ಯ ಅನುಮತಿಗಳನ್ನು ಪಡೆಯಲು ಕರ್ನಾಟಕ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಸ್ವದೇಶ್ ದರ್ಶನ್ 2.0 ಯೋಜನೆಯಡಿಯಲ್ಲಿ ಮಂಜೂರಾದ ಯೋಜನೆಗಳ ಪಟ್ಟಿ
| ಕ್ರ.ಸಂ | ಯೋಜನೆಯ ಹೆಸರು | ಮಂಜೂರಾದ ವರ್ಷ | ಮಂಜೂರಾದ ಮೊತ್ತ (ಕೋಟಿ.ರೂ.ಗಳಲ್ಲಿ) |
| 1 | ಹಂಪಿಯಲ್ಲಿ ‘ಟ್ರಾವೆಲರ್ಸ್ ನೂಕ್ಸ್ʼ ಸ್ಥಾಪನೆ | 2023-24 | 25.63 |
| 2 | ಮೈಸೂರಿನಲ್ಲಿ ಟಾಂಗಾ ಸವಾರಿಯ ಪಾರಂಪರಿಕ ಅನುಭವ ವಲಯ | 2023-24 | 2.71 |
| 3 | ಮೈಸೂರಿನಲ್ಲಿ ಪರಿಸರ ಅನುಭವ ವಲಯ | 2023-24 | 18.48 |
ಕರ್ನಾಟಕದಲ್ಲಿ SASCI ಯೋಜನೆಯಡಿಯಲ್ಲಿ ಮಂಜೂರಾದ ಯೋಜನೆಗಳ ಪಟ್ಟಿ
| ಕ್ರ.ಸಂ | ಯೋಜನೆಯ ಹೆಸರು | ಮಂಜೂರಾದ ವರ್ಷ | ಮಂಜೂರಾದ ಮೊತ್ತ (ಕೋಟಿ.ರೂ.ಗಳಲ್ಲಿ) |
| 1 | ಬೆಂಗಳೂರಿನ ತಾತಗುಣಿಯ ರೋರಿಚ್ ಮತ್ತು ದೇವಿಕಾ ರಾಣಿ ಎಸ್ಟೇಟ್ ನಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕೇಂದ್ರ | 2024-25 | 99.17 |
| 2 | ಬೆಳಗಾವಿಯ ಸವದತ್ತಿ ಯಲ್ಲಮ್ಮಗುಡ್ಡ ಅಭಿವೃದ್ಧಿ | 2024-25 | 100.00 |
ಕರ್ನಾಟಕಕ್ಕೆ ಪ್ರಶಾದ್ ಯೋಜನೆಯಡಿಯಲ್ಲಿ ಮಂಜೂರಾದ ಯೋಜನೆಗಳು
| ಕ್ರ.ಸಂ | ಯೋಜನೆಯ ಹೆಸರು | ಮಂಜೂರಾದ ವರ್ಷ | ಮಂಜೂರಾದ ಮೊತ್ತ (ಕೋಟಿ.ರೂ.ಗಳಲ್ಲಿ) |
| 1 | ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಯಾತ್ರಾ ಸೌಲಭ್ಯಗಳ ಅಭಿವೃದ್ಧಿ | 2023-24 | 45.38 |
| 2 | ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ | 2024-25 | 18.37 |
| 3 | ಬೀದರ್ ಜಿಲ್ಲೆಯ ಪಾಪನಾಶ ದೇವಾಲಯದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ. | 2024-25 | 22.25 |
ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಲು, ಪ್ರವಾಸೋದ್ಯಮ ಸಚಿವಾಲಯವು ನಿಯತಕಾಲಿಕವಾಗಿ ರಾಜ್ಯ ಸರ್ಕಾರಗಳೊಂದಿಗೆ ವಿವಿಧ ಹಂತಗಳಲ್ಲಿ ಪರಿಶೀಲನಾ ಸಭೆಗಳ ಮೂಲಕ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸುತ್ತದೆ. ಮೇಲೆ ತಿಳಿಸಿದ ಯೋಜನೆಗಳ ಅಡಿಯಲ್ಲಿ ಪ್ರವಾಸೋದ್ಯಮ ಸಚಿವಾಲಯದ ಪರಿಗಣನೆಗೆ ಪ್ರಸ್ತುತ ಕರ್ನಾಟಕದ ಯಾವುದೇ ಹೆಚ್ಚುವರಿ ಯೋಜನೆಗಳಿಲ್ಲ.
ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಉತ್ತೇಜನವನ್ನು ಪ್ರಾಥಮಿಕವಾಗಿ ಸಂಬಂಧಪಟ್ಟ ರಾಜ್ಯ ಸರ್ಕಾರ /ಕೇಂದ್ರಾಡಳಿತ ಪ್ರದೇಶ ಆಡಳಿತಗಳು ಮಾಡುತ್ತವೆ. ಆದಾಗ್ಯೂ, ಪ್ರವಾಸೋದ್ಯಮ ಸಚಿವಾಲಯವು ತನ್ನ ‘ಸ್ವದೇಶ್ ದರ್ಶನ್ 2.0’, ಸ್ವದೇಶ್ ದರ್ಶನದ ಉಪ-ಯೋಜನೆಯಾದ ‘ಸವಾಲು ಆಧಾರಿತ ಗಮ್ಯತಾಣ ಅಭಿವೃದ್ಧಿʼ ಮತ್ತು ‘ತೀರ್ಥಕ್ಷೇತ್ರ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ, ಪರಂಪರೆ ವೃದ್ಧಿ ಅಭಿಯಾನ (ಪ್ರಶಾದ್)’ ಯೋಜನೆಗಳ ಮೂಲಕ ಈ ಪ್ರಯತ್ನಗಳನ್ನು ಪೂರೈಸುತ್ತದೆ. ಯೋಜನೆಯ ಪ್ರಸ್ತಾವನೆಗಳನ್ನು ಸ್ವೀಕರಿಸಿದ ನಂತರ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಹಣಕಾಸಿನ ನೆರವು ನೀಡುವ ಮೂಲಕ, ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳು ಮತ್ತು ಇತರ ಸೂಚನೆಗಳೊಂದಿಗೆ ಅದರ ಹೊಂದಾಣಿಕೆ, ಪರಸ್ಪರ ಆದ್ಯತೆ, ನಿಧಿಯ ಲಭ್ಯತೆ ಇತ್ಯಾದಿಗಳನ್ನು ಪೂರೈಸುತ್ತದೆ.
ಲೋಕಸಭೆಯಲ್ಲಿ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ಸಚಿವರು ಈ ಮಾಹಿತಿ ನೀಡಿದ್ದಾರೆ.
Matribhumi Samachar Kannad

