Friday, December 05 2025 | 04:10:48 PM
Breaking News

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಮತ್ತು ಸಂಸತ್ ಸದಸ್ಯರು ಬನಾಸ್ ಡೈರಿಗೆ ಕ್ಷೇತ್ರ ಭೇಟಿ ನೀಡಲಿದ್ದಾರೆ

Connect us on:

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ನೇತೃತ್ವದ ಸಹಕಾರ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯು, ಡೈರಿ ಅಭಿವೃದ್ಧಿ, ಮರುಬಳಕೆ ಆರ್ಥಿಕತೆ, ಕೃಷಿ ಮೌಲ್ಯವರ್ಧನೆ, ಜಾನುವಾರು ಉತ್ಪಾದಕತೆ, ನೀರಿನ ಸಂರಕ್ಷಣೆ ಮತ್ತು ಗ್ರಾಮೀಣ ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವ ಕ್ಷೇತ್ರಗಳಲ್ಲಿ ಬನಾಸ್ ಡೈರಿ ಕೈಗೊಂಡ ಪ್ರಮುಖ ಉಪಕ್ರಮಗಳನ್ನು ಪರಿಶೀಲಿಸಲಿದೆ. ಡಿಸೆಂಬರ್ 4 ರಿಂದ 6 ರವರೆಗೆ ಬನಸ್ಕಾಂತದಲ್ಲಿರುವ ಬನಾಸ್ ಡೈರಿಗೆ ನೀಡುವ ಕ್ಷೇತ್ರ ಭೇಟಿಯು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಆಧರಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ ಸಹಕಾರ ಸಚಿವಾಲಯವು ಜಾರಿಗೆ ತಂದಿರುವ ಸಹಕಾರಿ ಮಾದರಿಯು ಸಹಕಾರದಿಂದ ಸಮೃದ್ಧಿ ಮತ್ತು ವಿಕಸಿತ ಭಾರತದ ರಾಷ್ಟ್ರೀಯ ಗುರಿಗಳಿಗೆ ಹೇಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತಿದೆ ಎಂಬುದನ್ನು ಪ್ರದರ್ಶಿಸುತ್ತದೆ. ಸಹಕಾರ ರಾಜ್ಯ ಸಚಿವರಾದ ಶ್ರೀ ಕ್ರಿಶನ್ ಪಾಲ್ ಗುರ್ಜರ್ ಮತ್ತು ಸಹಕಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಮುರಳೀಧರ್ ಮೊಹೋಲ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಸಹ ಭೇಟಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಸಹಕಾರಿ ಡೈರಿ ಅಭಿವೃದ್ಧಿ’ ಕ್ಷೇತ್ರದಲ್ಲಿ ಕೈಗೊಂಡ ಉಪಕ್ರಮಗಳನ್ನು ಪರಿಶೀಲಿಸಲು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಸಹಕಾರ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯ ಮೂರನೇ ಸಭೆಯು ಡಿಸೆಂಬರ್ 6, 2025 ರಂದು ಬನಸ್ಕಾಂತದ ಬನಾಸ್ ಡೈರಿಯಲ್ಲಿ ನಡೆಯಲಿದೆ.

ಈ ಭೇಟಿಯ ಸಮಯದಲ್ಲಿ, ಶ್ರೀ ಅಮಿತ್ ಶಾ ಅವರು ಡಿಸೆಂಬರ್ 6, 2025 ರಂದು ಸನಾದರ್‌ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಅಗತಲಾ ಬಯೋ-ಸಿ ಎನ್‌ ಜಿ ಮತ್ತು ರಸಗೊಬ್ಬರ ಘಟಕವನ್ನು ಉದ್ಘಾಟಿಸಲಿದ್ದಾರೆ. ಇದು ರೈತರ ಆದಾಯವನ್ನು ಹೆಚ್ಚಿಸುವುದಲ್ಲದೆ, ಹಸಿರು ಮತ್ತು ಶುದ್ಧ ಇಂಧನವನ್ನು ಉತ್ಪಾದಿಸಲು ಸಹಾಯ ಮಾಡುವ ಪ್ರಮುಖ ಮರುಬಳಕೆ-ಆರ್ಥಿಕ ಉಪಕ್ರಮವಾಗಿದೆ. ಸಾರ್ವಜನಿಕ ಸಭೆಯಲ್ಲಿ ಅವರು ಸನಾದರ್‌ ನಲ್ಲಿ ಅತ್ಯಾಧುನಿಕ 150 ಟಿಪಿಡಿ ಹಾಲಿನ ಪುಡಿ ಮತ್ತು ಶಿಶು ಆಹಾರ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಇದಕ್ಕೂ ಮುನ್ನ, ಸಂಸತ್ ಸದಸ್ಯರು ಪಾಲನ್ಪುರದ ಬನಾಸ್ ಡೈರಿಯ ಪ್ರಧಾನ ಕಚೇರಿಯಲ್ಲಿರುವ ಚೀಸ್, ಯು ಎಚ್‌ ಟಿ ಮತ್ತು ಪ್ರೋಟೀನ್ ಘಟಕಗಳು ಒಳಗೊಂಡಂತೆ ಸುಧಾರಿತ ಸಂಸ್ಕರಣಾ ಸೌಲಭ್ಯಗಳಿಗೆ ಭೇಟಿ ನೀಡಲಿದ್ದಾರೆ, ಅಲ್ಲಿ ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚಿನ ಪ್ರೋಟೀನ್ ಲಸ್ಸಿ, ಮಜ್ಜಿಗೆ ಮತ್ತು ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ.

ಹೆಚ್ಚುವರಿಯಾಗಿ, ನಿಯೋಗವು ರೈಯಾದಲ್ಲಿರುವ ಡಾಮಾ ವೀರ್ಯ ಕೇಂದ್ರ ಮತ್ತು ಭ್ರೂಣ ವರ್ಗಾವಣೆ ಪ್ರಯೋಗಾಲಯದಲ್ಲಿ ಜಾನುವಾರು-ಕೇಂದ್ರಿತ ಉಪಕ್ರಮಗಳನ್ನು ಪರಿಶೀಲಿಸುತ್ತದೆ.

ತಳಮಟ್ಟದ ಸಹಕಾರ ಸಂಘಗಳ ಪಾತ್ರವನ್ನು ಅರ್ಥಮಾಡಿಕೊಳ್ಳಲು, ನಿಯೋಗವು ಡಿಸೆಂಬರ್ 5, 2025 ರಂದು ದೀಸಾದಲ್ಲಿರುವ ಶೇರ್ಪುರ ಗ್ರಾಮ ಡೈರಿ ಸಹಕಾರ ಸಂಘ (ವಿಡಿಸಿಎಸ್) ಕ್ಕೆ ಭೇಟಿ ನೀಡಲಿದೆ, ನಂತರ ಥರಾಡ್‌ ನಲ್ಲಿರುವ ಬನಾಸ್ ಮಣ್ಣು ಪರೀಕ್ಷಾ ಪ್ರಯೋಗಾಲಯದ ಪರಿಶೀಲನೆಯನ್ನು ನಡೆಸಲಿದೆ.

ಸಂಸದೀಯ ನಿಯೋಗವು ಬನಾಸ್ ಡೈರಿ ನಿರ್ಮಿಸಿದ 319 ಅಮೃತ ಸರೋವರಗಳಲ್ಲಿ ಒಂದಾದ ಜೆರ್ಡಾ ಗ್ರಾಮದ ಅಮೃತ ಸರೋವರಕ್ಕೂ ಭೇಟಿ ನೀಡಲಿದೆ.

ಪರಿಸರ ಸುಸ್ಥಿರತೆಗೆ ಸಹಕಾರ ವಲಯದ ಬದ್ಧತೆಯನ್ನು ಪ್ರದರ್ಶಿಸುತ್ತಿರುವ ಬನಾಸ್ ಡೈರಿ ದೊಡ್ಡ ಪ್ರಮಾಣದ ಮರಬೆಳೆಸುವ ಚಟುವಟಿಕೆಗಳನ್ನು ಕೈಗೊಂಡಿದ್ದು, 9 ಕೋಟಿಗೂ ಹೆಚ್ಚು ಬೀಜದ ಉಂಡೆಗಳು ಮತ್ತು ಸಸಿಗಳನ್ನು ನೆಟ್ಟಿದೆ. ಕ್ಷೇತ್ರ ಭೇಟಿಯ ಸಮಯದಲ್ಲಿ, ಸಂಸತ್ ಸದಸ್ಯರು ಲುನಾವಾದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

About Matribhumi Samachar

Check Also

ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ 33ನೇ ಸಭೆಯು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು

ರಾಷ್ಟ್ರೀಯ ತೋಟಗಾರಿಕೆ ಮಂಡಳಿ (ಎನ್‌.ಹೆಚ್‌.ಬಿ) ನಿರ್ದೇಶಕರ ಮಂಡಳಿಯ 33ನೇ ಸಭೆ ಇಂದು ನವದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಕೃಷಿ ಮತ್ತು …