ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಉಕ್ಕು ಉದ್ಯಮಕ್ಕಾಗಿ ‘ಪಿ.ಎಲ್.ಐ ಯೋಜನೆ 1.1’ ಅನ್ನು ಪ್ರಾರಂಭಿಸಲಿದ್ದಾರೆ ಮತ್ತು ಜನವರಿ ೦6, 2025 ರಂದು ಹೊಸದಿಲ್ಲಿಯ ಮೌಲಾನಾ ಆಜಾದ್ ರಸ್ತೆಯ ವಿಜ್ಞಾನ ಭವನದ ಹಾಲ್ ಸಂಖ್ಯೆ 1 ರಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅರ್ಜಿಗಳನ್ನು ಕರೆಯುತ್ತಾರೆ.
ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ – ಪಿ.ಎಲ್.ಐ.) ಪರಿಕಲ್ಪನೆಯನ್ನು 2020 ರ ಜಾಗತಿಕ ಲಾಕ್ ಡೌನ್ ಗಳ ಸಮಯದಲ್ಲಿ ಕಲ್ಪಿಸಲಾಗಿದೆ. ಇದು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಆರಂಭದಲ್ಲಿ ಈ ಯೋಜನೆಯನ್ನು ಮೂರು ವಲಯಗಳಲ್ಲಿ ಪ್ರಾರಂಭಿಸಲಾಯಿತು.ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ – ಪಿ.ಎಲ್.ಐ.)ಯೋಜನೆಯನ್ನು ನಂತರ ನವೆಂಬರ್ 2020 ರಲ್ಲಿ ಉಕ್ಕನ್ನು ಕೂಡ ವ್ಯಾಪ್ತಿಯಲ್ಲಿ ಸೇರಿಸಲು ವಿಸ್ತರಿಸಲಾಯಿತು.
ಸ್ಟೀಲ್ ಸಚಿವಾಲಯದ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ – ಪಿ.ಎಲ್.ಐ.) ಯೋಜನೆಯಲ್ಲಿ ₹27,106 ಕೋಟಿ ಹೂಡಿಕೆಯಲ್ಲಿ ಬದ್ಧತೆಯನ್ನು ಆಕರ್ಷಿಸಿದೆ. 14,760 ನೇರ ಉದ್ಯೋಗ ಮತ್ತು ಯೋಜನೆಯಲ್ಲಿ ಗುರುತಿಸಲಾದ 7.90 ಮಿಲಿಯನ್ ಟನ್ ‘ಸ್ಪೆಷಾಲಿಟಿ ಸ್ಟೀಲ್’ನ ಅಂದಾಜು ಉತ್ಪಾದನೆ ಲೆಕ್ಕ ಹಾಕಲಾಗಿದೆ. ನವೆಂಬರ್ 2024 ರ ಹೊತ್ತಿಗೆ, ಕಂಪನಿಗಳು ಈಗಾಗಲೇ ₹18,300 ಕೋಟಿ ಹೂಡಿಕೆ ಮಾಡಿ 8,660 ಉದ್ಯೋಗಗಳನ್ನು ಸೃಷ್ಟಿಸಿವೆ. ಕೇಂದ್ರ ಉಕ್ಕಿನ ಸಚಿವಾಲಯವು ಭಾಗವಹಿಸುವ ಕಂಪನಿಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದೆ ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ, ಹೆಚ್ಚಿನ ಭಾಗವಹಿಸುವಿಕೆಯನ್ನು ಆಕರ್ಷಿಸಲು ಯೋಜನೆಯನ್ನು ಮತ್ತೊಮ್ಮೆ ನಡೆಸಿಕೊಡುವ ಅವಕಾಶವಿದೆ.
भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं
ऑडियो बुक : भारत 1885 से 1950 (इतिहास पर एक दृष्टि)
Matribhumi Samachar Kannad

