Wednesday, December 10 2025 | 02:13:12 PM
Breaking News

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಬೆಂಗಳೂರಿನಲ್ಲಿ ನಡೆದ ಐಐಟಿ ಮದ್ರಾಸ್‌ನ ಸಂಗಮ್ 2025 ಜಾಗತಿಕ ಅನ್ವೇಷಣೆ ಮತ್ತು ಹಳೆಯ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ ಭಾಗವಹಿಸಿದರು

Connect us on:

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಇಂದು ಬೆಂಗಳೂರಿನಲ್ಲಿ ನಡೆದ ಐಐಟಿ ಮದ್ರಾಸ್ ಸಂಗಮ್ 2025 ಜಾಗತಿಕ ನಾವೀನ್ಯತೆ ಮತ್ತು ಪೂರ್ವ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಮಾತನಾಡಿ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ದೂರದೃಷ್ಟಿ ಹಾಗೂ ಬದ್ಧತೆಗಳನ್ನು ಉಲ್ಲೇಖಿಸಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಭಾರತವನ್ನು 2047ರೊಳಗಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ದೃಷ್ಟಿಕೋನವನ್ನು ತಿಳಿಸಿದರು. ಈ ದೃಷ್ಟಿಕೋನದಲ್ಲಿ ಐದು ಪ್ರಮುಖ ಬದ್ಧತೆಗಳಿವೆ: ಅಭಿವೃದ್ಧಿಶೀಲ ಭಾರತದ ಸಂಕಲ್ಪ, ವಸಾಹತು ಚಿಂತನೆಗೆ ವಿದಾಯ, ಇತಿಹಾಸ ಹಾಗೂ ಸಂಸ್ಕೃತಿಗೆ ಮೌಲ್ಯ, ರಾಷ್ಟ್ರದ ಏಕತೆ ಹಾಗೂ ಅಖಂಡತೆಗೆ ಬದ್ಧತೆ ಮತ್ತು ಸಮಗ್ರ ಪಾಲ್ಗೊಳ್ಳುವಿಕೆ.

ಸರ್ಕಾರದ ಮಹತ್ವದ ಯೋಜನೆಗಳನ್ನು ವಿವರಿಸಿದ ಕೇಂದ್ರ ಸಚಿವರು, ದಶಕದ ಹಿಂದೆ ಭಾರತ ಹಿಂದುಳಿದ ಆರ್ಥಿಕತೆಗಳಲ್ಲಿ ಒಂದಾಗಿತ್ತು. ಆದರೆ, ಕಳೆದ 11 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಹಲವು ಮಹತ್ವದ ಕಾರ್ಯಕ್ರಮಗಳ ಮೂಲಕ ಈ ತಡೆಗೋಡೆಯನ್ನು ದಾಟಿದರು. ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್, ಲೋಕಲ್ ಟು ಗ್ಲೋಬಲ್, ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ ಮಿಷನ್, ಜಲ್ ಜೀವನ್ ಮಿಷನ್ ಮುಂತಾದ ಕಾರ್ಯಕ್ರಮಗಳು ಒಂದು ಹಾರದ ಮುತ್ತುಗಳಿದ್ದಂತೆ – ಒಂದು ಮುತ್ತು ಕಡಿಮೆಯಾದರೂ, ಆ ಹಾರ ಸಂಪೂರ್ಣವಾಗದು. ಇವುಗಳನ್ನು ಸಮಾಜದ ತಳಭಾಗದ ವ್ಯಕ್ತಿಯವರೆಗೆ ತಲುಪಿಸಲು ಪ್ರಯತ್ನಿಸಲಾಗಿದೆ.

ಸ್ಥಿರತೆ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಟ, ಎಲ್ಲರಿಗೂ ಉತ್ತಮ ಗುಣಮಟ್ಟದ ಜೀವನದ ಅವಕಾಶ ನೀಡುವ ಗುರಿ, ಇವುಗಳ ಸಮ್ಮಿಲಿತ ಜೋಡಣೆಯೇ ಭಾರತದ ಬೆಳವಣಿಗೆಯ ಇಂದಿನ ಪಯಣವನ್ನು ವಿವರಿಸುತ್ತವೆ. ವಿಶ್ವದ 11ನೇ ಅತಿದೊಡ್ಡ ಜಿಡಿಪಿಯಿಂದ ಇಂದು (2025ರಲ್ಲಿಗೆ) 5ನೇ ಸ್ಥಾನಕ್ಕೇರಿದ ಭಾರತ, ಈ ವರ್ಷಾಂತ್ಯದೊಳಗೆ 4ನೇ ಸ್ಥಾನಕ್ಕೇರಲಿದೆ ಮತ್ತು 2027ರ ಹೊತ್ತಿಗೆ 3ನೇ ಅತಿದೊಡ್ಡ ಆರ್ಥಿಕತೆ ಆಗಬಹುದು ಎಂದು ಹೇಳಿದರು.

ನಾವೀನ್ಯತೆ ಬೆಳೆಸುವ ಸರ್ಕಾರದ ಬದ್ಧತೆ ವಿವರಿಸಿದ ಸಚಿವರು, ಹಿಂದಿನ ಬಜೆಟ್‌ನಲ್ಲಿ ಆಳವಾದ ತಂತ್ರಜ್ಞಾನ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲು ₹10,000 ಹಂಚಿಕೆ ಮಾಡಲಾಗಿತ್ತು ಎಂದು ಗಮನ ಸೆಳೆದರು. ನಾವೀನ್ಯತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಮತ್ತಷ್ಟು ಬೆಂಬಲಿಸಲು ಈಗ ಹೆಚ್ಚುವರಿಯಾಗಿ ₹10,000 ಕೋಟಿ ಮಂಜೂರು ಮಾಡಲಾಗಿದೆ.

ಕಳೆದ ಕೇಂದ್ರ ಸಚಿವ ಸಂಪುಟ ಸಭೆಯು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ₹1 ಲಕ್ಷ ಕೋಟಿ ಅನುಮೋದಿಸಿದೆ. ತಾಂತ್ರಿಕ ನಾವೀನ್ಯತೆ ಹೆಚ್ಚಿಸಲು ಇದನ್ನು 50 ವರ್ಷಗಳಲ್ಲಿ ಶೂನ್ಯ ಬಡ್ಡಿದರದ ಸಾಲವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು. ಭಾರತದ ಯುವಜನಾಂಗದ ಆಶಯಗಳು ಮತ್ತು ಇಚ್ಛೆಗಳು ಇಂದಿನ ವಿಶ್ವದೊಂದಿಗೆ ಹೋಲಿಸಿದರೆ ಹೆಚ್ಚು ಪ್ರಬಲವಾಗಿದೆ – ಇದು ನಾವೀನ್ಯತೆ, ಸಂಶೋಧನೆ, ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ, ತಂತ್ರಜ್ಞಾನ ಮತ್ತು ಭವಿಷ್ಯಯೋಗ್ಯ ಭಾರತವನ್ನು ರೂಪಿಸುತ್ತಿದೆ. ಎಐ, ಮೆಷಿನ್ ಕಲಿಕೆ, ದತ್ತಾಂಶಗಳ ವಿಮರ್ಶೆ ಮೊದಲಾದ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.

ಕೋವಿಡ್ ಸಮಯದಲ್ಲಿ ಭಾರತ ಕಾರ್ಯಗಳನ್ನು ಉಲ್ಲೇಖಿಸಿದ ಸಚಿವರು, ನಾವು ಪ್ರತಿಯೊಂದು ವಿಷಮ ಪರಿಸ್ಥಿತಿಯನ್ನು ಅವಕಾಶವಾಗಿ ಕಾಣುತ್ತೇವೆ. ಕೋವಿಡ್ ಸಂದರ್ಭದಲ್ಲಿ ಭಾರತದಲ್ಲಿ ಪಿಪಿಇ ಕಿಟ್‌ಗಳ ಕೊರತೆಯಾಗಿತ್ತು. ಆದರೆ, ಪ್ರಧಾನಮಂತ್ರಿ ಮೋದಿಯವರ ಮಾರ್ಗದರ್ಶನದಲ್ಲಿ ಡಿಆರ್‌ಡಿಒ, ಇಸ್ರೋ ಹಾಗೂ ಎಲ್ಲ ಕೈಗಾರಿಕೆಗಳು ಒಟ್ಟಾಗಿ ಕೆಲಸ ಮಾಡಿ, ಭಾರತವನ್ನು ಪಿಪಿಇ ಕಿಟ್ ಗಳ ಉತ್ಪಾದನೆಯಲ್ಲಿ ಎರಡನೇ ಅತಿದೊಡ್ಡ ದೇಶವನ್ನಾಗಿ ರೂಪಿಸಿದೆವು. ಅದನ್ನು ನಾವು ಇತರ ದೇಶಗಳಿಗೆ ಸಹ ಪೂರೈಸಿದೆವು. ಇದೇ ದಿಸೆಯಲ್ಲಿ ಭಾರತ 100 ಹಿಂದುಳಿದ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆ ಪೂರೈಸಿತು. ಇದಕ್ಕಾಗಿ ಇಂದಿಗೂ ಜಗತ್ತಿನ ಜನರು ಭಾರತಕ್ಕೆ ಕೃತಜ್ಞರಾಗಿದ್ದಾರೆ.

1965ರಲ್ಲಿ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು “ಜೈ ಜವಾನ್, ಜೈ ಕಿಸಾನ್” ಘೋಷವಾಕ್ಯ ನೀಡಿದ್ದರು. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು “ಜೈ ವಿಜ್ಞಾನ” ಸೇರಿಸಿದರು. 2019ರಲ್ಲಿ ಪ್ರಧಾನಮಂತ್ರಿ ಮೋದಿ ಅವರು “ಜೈ ಅನುಸಂಧಾನ” ಎಂಬ ಘೋಷವಾಕ್ಯವನ್ನು ಸೇರಿಸಿದರು. ಇವು ನಾವೀನ್ಯತೆಯ ಮೂಲಕ ಭಾರತದ ಘನತೆಯನ್ನು ತಿಳಿಸುತ್ತದೆ ಎಂದು ಹೇಳಿದರು.

ಅಮೃತ ಕಾಲದಲ್ಲಿ ತಾಯ್ನಾಡಿಗೆ ಸೇವೆ ಸಲ್ಲಿಸೋಣ, ಆತ್ಮನಿರ್ಭರ ಭಾರತ ನಿರ್ಮಿಸಿ, ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸೋಣ ಎಂದು ಸಚಿವರು ಹೇಳಿದರು.

About Matribhumi Samachar

Check Also

ಪರೀಕ್ಷಾ ಪೇ ಚರ್ಚಾ (ಪಿಪಿಸಿ 2026) ಇದರ 9ನೇ ಆವೃತ್ತಿಯು ಜನವರಿ 2026ರಲ್ಲಿ ನಡೆಯಲಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಶಿಷ್ಟ ಸಂವಾದಾತ್ಮಕ ಕಾರ್ಯಕ್ರಮವಾದ ಪರೀಕ್ಷಾ ಪೇ ಚರ್ಚಾ (ಪಿಪಿಸಿ), ಇದರ 9ನೇ ಆವೃತ್ತಿಯು …