Monday, January 12 2026 | 06:40:22 AM
Breaking News

ಎಚ್ ಎಂ ಪಿ ವಿ ಬಗ್ಗೆ ಇತ್ತೀಚಿನ ಮಾಹಿತಿ

Connect us on:

ಕರ್ನಾಟಕದಲ್ಲಿ ಕೆಲವು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್ ಎಂ ಪಿ ವಿ) ಪ್ರಕರಣಗಳು ಪತ್ತೆಯಾದ ಬಗ್ಗೆ ಮಾಧ್ಯಮ ವರದಿಗಳಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ -ಐಸಿಎಂಆರ್) ಕರ್ನಾಟಕದಲ್ಲಿ ಎರಡು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್ ಎಂ ಪಿ ವಿ) ಪ್ರಕರಣಗಳನ್ನು ಪತ್ತೆಹಚ್ಚಿದೆ. ದೇಶಾದ್ಯಂತ ಉಸಿರಾಟದ ಕಾಯಿಲೆಗಳನ್ನು ಮೇಲ್ವಿಚಾರಣೆ ಮಾಡಲು ಐಸಿಎಂಆರ್ ನಿರಂತರವಾಗಿ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ ಬಹು ಉಸಿರಾಟದ ವೈರಲ್ ರೋಗಕಾರಕಗಳ ಮೇಲಿನ ನಿರಂತರ ಕಣ್ಗಾವಲು ಮೂಲಕ ಎರಡೂ ಪ್ರಕರಣಗಳನ್ನು ಗುರುತಿಸಲಾಗಿದೆ.

ಎಚ್ ಎಂ ಪಿ ವಿ ಈಗಾಗಲೇ ಭಾರತ ಸೇರಿದಂತೆ ಜಾಗತಿಕವಾಗಿ ಹರಡುತ್ತಿದೆ ಮತ್ತು ಎಚ್ ಎಂಪಿವಿ ಯೊಂದಿಗೆ ಸಂಬಂಧಿಸಿದ ಉಸಿರಾಟದ ಕಾಯಿಲೆಗಳ ಪ್ರಕರಣಗಳು ವಿವಿಧ ದೇಶಗಳಲ್ಲಿ ವರದಿಯಾಗಿವೆ ಎಂದು ಒತ್ತಿ ಹೇಳಲಾಗಿದೆ. ಅಲ್ಲದೆ ಐಸಿಎಂಆರ್ ಮತ್ತು ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (ಐ ಡಿ ಎಸ್ ಪಿ) ನೆಟ್‌ವರ್ಕ್‌ನ ಪ್ರಸ್ತುತ ದತ್ತಾಂಶವನ್ನು ಆಧರಿಸಿ, ದೇಶದಲ್ಲಿ ಜ್ವರದಂತಹ ಅಸ್ವಸ್ಥತೆ (ಐಎಲ್ ಐ) ಅಥವಾ ತೀವ್ರ ಉಸಿರಾಟದ ಕಾಯಿಲೆ (ಎಸ್ ಎ ಆರ್ ಐ) ಪ್ರಕರಣಗಳಲ್ಲಿ ಯಾವುದೇ ಅಸಾಮಾನ್ಯ ಏರಿಕೆ ಕಂಡುಬಂದಿಲ್ಲ.

ಕಂಡುಬಂದಿರುವ ಎಚ್ ಎಂಪಿವಿ ಪ್ರಕರಣಗಳ ವಿವರಗಳು ಈ ಕೆಳಗಿನಂತಿವೆ.

  1. ಮೊದಲೇ ಇದ್ದ ಬ್ರಾಂಕೋಪ್ನ್ಯುಮೋನಿಯಾ ಕಾಯಿಲೆಯೊಂದಿಗೆ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾದ ನಂತರ 3 ತಿಂಗಳ ಹೆಣ್ಣು ಶಿಶುವಿನಲ್ಲಿ ಎಚ್ ಎಂಪಿವಿ ರೋಗಪತ್ತೆ ಮಾಡಲಾಗಿದೆ. ಆನಂತರ ಅಕೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ.
  2. ಮೊದಲೇ ಬ್ರಾಂಕೋಪ್ನ್ಯುಮೋನಿಯಾ ಹೊಂದಿದ್ದ 8 ತಿಂಗಳ ಗಂಡು ಮಗು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾದ ನಂತರ 2025ರ ಜನವರಿ 3 ರಂದು ಎಚ್ ಎಂಪಿವಿ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡು ಬಂದಿದೆ. ಮಗು ಈಗ ಚೇತರಿಸಿಕೊಳ್ಳುತ್ತಿದೆ.

ಭಾಧಿತ ರೋಗಿಗಳಲ್ಲಿ ಯಾರೊಬ್ಬರೂ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ.

ಕೇಂದ್ರ ಆರೋಗ್ಯ ಸಚಿವಾಲಯವು ಲಭ್ಯವಿರುವ ಎಲ್ಲಾ ನಿಗಾ ಚಾನೆಲ್‌ಗಳ ಮೂಲಕ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಐಸಿಎಂಆರ್ ವರ್ಷವಿಡೀ ಎಚ್ ಎಂ ಪಿ ವಿ ಹರಡುತ್ತಿರುವ ಟ್ರೆಂಡ್‌ಗಳ ನಿಗಾ ಕಾರ್ಯ ಮಾಡುವುದನ್ನು ಮುಂದುವರಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂ ಎಚ್‌ ಒ) ಈಗಾಗಲೇ ನಡೆಯುತ್ತಿರುವ ಕ್ರಮಗಳನ್ನು ಮತ್ತಷ್ಟು ತಿಳಿಸಲು ಚೀನಾದ ಪರಿಸ್ಥಿತಿಯ ಬಗ್ಗೆ ಸಮಯೋಚಿತ ನವೀಕರಣಗಳನ್ನು ಒದಗಿಸುತ್ತಿದೆ.

ಇತ್ತೀಚೆಗೆ ದೇಶಾದ್ಯಂತ ನಡೆಸಲಾದ ಸಿದ್ಧತಾ ಅಭ್ಯಾಸವು ಭಾರತವು ಉಸಿರಾಟದ ಕಾಯಿಲೆಗಳಲ್ಲಿ ಯಾವುದೇ ಸಂಭಾವ್ಯ ಹೆಚ್ಚಳವನ್ನು ನಿಭಾಯಿಸಲು ಸುಸಜ್ಜಿತವಾಗಿದೆ ಮತ್ತು ಅಗತ್ಯವಿದ್ದರೆ ಸಾರ್ವಜನಿಕ ಆರೋಗ್ಯ ಮಧ್ಯಸ್ಥಿಕೆಗಳನ್ನು ತ್ವರಿತವಾಗಿ ನಿಯೋಜಿಸಬಹುದೆಂದು ನಿರೂಪಿಸಿದೆ.

About Matribhumi Samachar

Check Also

ಶ್ರೀ ಎಸ್. ಸುರೇಶ್ ಕುಮಾರ್ ಅವರ ಸ್ಪೂರ್ತಿದಾಯಕ ಸೈಕ್ಲಿಂಗ್ ಸಾಧನೆಯನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲ್ ನಲ್ಲಿ ಪಯಣಿಸಿ ಯಶಸ್ವಿಯಾಗಿ ತಲುಪಿದ ಶ್ರೀ ಎಸ್. …