Saturday, May 16 2026 | 08:35:09 PM
Breaking News

ಜೂನ್ 07, 2025 ರಂದು ನಿಮ್ಹಾನ್ಸ್ ನಲ್ಲಿ ನಡೆಯಲಿರುವ FSSAI ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಭಾಗವಹಿಸಲಿದ್ದಾರೆ

Connect us on:

ವಿಶ್ವ ಆಹಾರ ಸುರಕ್ಷತಾ ದಿನ 2025 ರ ಆಚರಣೆಯ ಪ್ರಯುಕ್ತ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI), ‘ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಸೇವಿಸಿ, ಸ್ಥೂಲಕಾಯ ತಡೆಯಿರಿ’ ಎಂಬ ವಿಷಯದ ಮೇಲೆ ದಿನಾಂಕ 07 ಜೂನ್ 2025 ರಂದು ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ (NIMHANS) ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಸ್ಥೂಲಕಾಯ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚುತ್ತಿರುವ ಸಮಸ್ಯೆಯನ್ನು, ನಮ್ಮ ಸಾಂಪ್ರದಾಯಿಕ, ಸುರಕ್ಷಿತ ಮತ್ತು ಸಂಪೂರ್ಣ ಪೌಷ್ಟಿಕ ಆಹಾರ ಪದ್ಧತಿಗಳ ಮೇಲೆ ಆಧಾರಿತವಾದ ತಡೆಗಟ್ಟುವ ಕ್ರಮಗಳ ಮೂಲಕ ಪರಿಹರಿಸಬೇಕೆಂದು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಈ ಕಾರ್ಯಕ್ರಮವು ಅನುಗುಣವಾಗಿದೆ.

ಕಾರ್ಯಕ್ರಮಕ್ಕೆ ಗೌರವಾನ್ವಿತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಆಗಮಿಸಲಿದ್ದು, ಅವರು ಮುಖ್ಯ ಭಾಷಣವನ್ನು ನೀಡಲಿದ್ದಾರೆ ಮತ್ತು ಪ್ರಮುಖ ಉಪಕ್ರಮಗಳನ್ನು ಅನಾವರಣಗೊಳಿಸಲಿದ್ದಾರೆ.

ಈ ಸಂದರ್ಭದಲ್ಲಿ, ಬೊಜ್ಜು ವಿರುದ್ಧ ರಾಷ್ಟ್ರೀಯ ಜಾಗೃತಿ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಇದರ ಜೊತೆಗೆ, ‘ಈಟ್ ರೈಟ್ ಸ್ಕೂಲ್’ ಕಾರ್ಯಕ್ರಮದ ಅಡಿಯಲ್ಲಿ ಪ್ರಮುಖ ಸಂಪನ್ಮೂಲವಾದ ‘ಈಟ್ ರೈಟ್ ಆಕ್ಟಿವಿಟಿ ಬುಕ್ – ಶಾಲೆಯಲ್ಲಿ ಸರಿಯಾಗಿ ತಿನ್ನಲು ನಿಮ್ಮ ಮಾರ್ಗದರ್ಶಿ’ (Eat Right Activity Book – Your Guide to Eat Right at School) ಅನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ಈ ಪುಸ್ತಕವು ಮಕ್ಕಳಿಗೆ ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಆಯ್ಕೆಗಳ ಕುರಿತು ಆರಂಭಿಕ ಶಿಕ್ಷಣ ನೀಡಲು ಸಹಕಾರಿಯಾಗಿದ್ದು, ಶಾಲಾ ಮಕ್ಕಳನ್ನು ಬದಲಾವಣೆಯ ಪ್ರಮುಖ ಪ್ರವರ್ತಕರನ್ನಾಗಿ ರೂಪಿಸುವ ಗುರಿ ಹೊಂದಿದೆ.

ಅಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ಆಹಾರ ಸುರಕ್ಷತಾ ಆಯುಕ್ತರು, FSSAI ನ ವೈಜ್ಞಾನಿಕ ಸಮಿತಿ ಹಾಗೂ ಸಮಿತಿಗಳ ಸದಸ್ಯರು, ಆಹಾರ ವ್ಯಾಪಾರ ನಿರ್ವಾಹಕರು, ಕೈಗಾರಿಕಾ ಸಂಘ ಗಳು, ಅಭಿವೃದ್ಧಿ ಪಾಲುದಾರರು ಮತ್ತು ದೇಶಾದ್ಯಂತದ FSSAI ನೌಕರರು ಸೇರಿದಂತೆ ಪ್ರಮುಖ ಪಾಲುದಾರರು ಆನ್ ಲೈನ್ ಮೂಲಕ ಭಾಗವಹಿಸಲಿದ್ದಾರೆ.

ಈ ಆಚರಣೆಯ ಮೂಲಕ, FSSAI ಎಲ್ಲಾ ನಾಗರಿಕರಿಗೆ ಸುರಕ್ಷಿತ ಆಹಾರ ಮತ್ತು ಆರೋಗ್ಯಕರ ಜೀವನವನ್ನು ಖಚಿತಪಡಿಸಿಕೊಳ್ಳುವ ತನ್ನ ಬದ್ಧತೆಯನ್ನು ಇನ್ನಷ್ಟು ಬಲಪಡಿಸಲು ಹೊರಟಿದೆ, ಜೊತೆಗೆ ಬೊಜ್ಜು ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಹೊಸ ವೇಗ ನೀಡುತ್ತಿದೆ.

About Matribhumi Samachar

Check Also

PM ಸೂರ್ಯ ಘರ್ ಸಬ್ಸಿಡಿ ದರಗಳ ಪಟ್ಟಿ 2026.

PM ಸೂರ್ಯ ಘರ್ ಯೋಜನೆ 2026: ಉಚಿತ ವಿದ್ಯುತ್ ಮತ್ತು ಸಬ್ಸಿಡಿ ಪಡೆಯುವ ಸಂಪೂರ್ಣ ಮಾರ್ಗದರ್ಶಿ

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ PM ಸೂರ್ಯ ಘರ್: ಮುಫ್ಟ್ ಬಿಜಲಿ ಯೋಜನೆಯು 2026ರ ಹೊತ್ತಿಗೆ ದೇಶದ ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಿ …