Saturday, December 13 2025 | 02:15:11 AM
Breaking News

ಎಚ್ ಎಂ ಪಿ ವಿ ಕುರಿತು ಇತ್ತೀಚಿನ ಮಾಹಿತಿ

Connect us on:

ಭಾರತದಲ್ಲಿನ ಉಸಿರಾಟದ ಕಾಯಿಲೆಗಳ ಪ್ರಸ್ತುತ ಪರಿಸ್ಥಿತಿ ಮತ್ತು ಚೀನಾದಲ್ಲಿ ಎಚ್‌ಎಂಪಿವಿ ಪ್ರಕರಣಗಳ ಮಾಧ್ಯಮ ವರದಿಗಳ ನಂತರ ದೇಶದಲ್ಲಿನ ಎಚ್‌ಎಂಪಿವಿ ಪ್ರಕರಣಗಳ ಸ್ಥಿತಿಗತಿ ಹಾಗೂ ಅವುಗಳ ನಿರ್ವಹಣೆಗಾಗಿ ಕೈಗೊಂಡಿರುವ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲೀಲಾ ಶ್ರೀವಾಸ್ತವ ಅವರು ನಿನ್ನೆ ವರ್ಚುವಲ್ ಮಾದರಿಯಲ್ಲಿ ರಾಜ್ಯಗಳು/ಕೇಂದ್ರಾಳಿತ ಪ್ರದೇಶಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಕಾರ್ಯದರ್ಶಿ (ಎ ಎಚ್ ಆರ್) ಡಾ.ರಾಜೀವ್ ಬಹ್ಲ್‌, ಡಿ ಜಿ ಎಚ್ ಎಸ್ ನ ಡಾ (ಪ್ರೊ) ಅತುಲ್ ಗೋಯೆಲ್ ; ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳು, ಎನ್ ಸಿಡಿಸಿ, ಐಡಿಎಸ್ ಪಿ, ಐಸಿಎಂಆರ್, ಎನ್ ಐ ವಿ ಮತ್ತು ಐ ಡಿ ಎಸ್ ಪಿ ಯ ರಾಜ್ಯ ಕಣ್ಗಾವಲು ಘಟಕಗಳ ತಜ್ಞರು ಸಭೆಯಲ್ಲಿ ಉಪಸ್ಥಿತರಿದ್ದರು.

ಐ ಡಿ ಎಸ್ ಪಿ ಯ ದತ್ತಾಂಶವು ದೇಶದಲ್ಲಿ ಎಲ್ಲಿಯೂ ಐ ಎಲ್ಐ/ಎಸ್ಎಆರ್ ಐ ಪ್ರಕರಣಗಳಲ್ಲಿ ಯಾವುದೇ ಅಸಾಮಾನ್ಯ ಏರಿಕೆಯನ್ನು ಸೂಚಿಸುವುದಿಲ್ಲ ಎಂದು ಸಭೆಯಲ್ಲಿ ಪುನರುಚ್ಚರಿಸಲಾಯಿತು. ಇದು  ಐಸಿಎಂಆರ್ ಸೆಂಟಿನೆಲ್ ನಿಗಾ ದತ್ತಾಂಶದಿಂದ ದೃಢೀಕರಿಸಲ್ಪಟ್ಟಿದೆ.

2001 ರಿಂದ ಜಾಗತಿಕವಾಗಿ ಪ್ರಸ್ತುತವಾಗಿರುವ ಎಚ್ ಎಂಪಿವಿ ಯಿಂದ ಸಾರ್ವಜನಿಕರಿಗೆ ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಒತ್ತಿ ಹೇಳಿದರು. ಅವರು ಐಎಲ್ ಐ/ಎಸ್ ಎಆರ್ ಐ ಕಣ್ಗಾವಲು ಬಲಪಡಿಸಲು ಮತ್ತು ಪರಿಶೀಲಿಸಲು ರಾಜ್ಯಗಳಿಗೆ ಸಲಹೆ ನೀಡಿದರು. ಚಳಿಗಾಲದ ತಿಂಗಳುಗಳಲ್ಲಿ ಉಸಿರಾಟದ ಕಾಯಿಲೆಗಳ ಹೆಚ್ಚಳವು ಸಾಮಾನ್ಯವಾಗಿ ಕಂಡುಬರುತ್ತದೆ ಎಂದು ಅವರು ಪುನರುಚ್ಚರಿಸಿದರು. ಉಸಿರಾಟದ ಕಾಯಿಲೆ ಪ್ರಕರಣಗಳಲ್ಲಿ ಯಾವುದೇ ಸಂಭವನೀಯ ಉಲ್ಬಣವಾದರೆ ಅದನ್ನು ಎದುರಿಸಲು ದೇಶವು ಉತ್ತಮ ರೀತಿಯಲ್ಲಿ ಸನ್ನದ್ಧವಾಗಿದೆ  ಎಂದು ಅವರು ಹೇಳಿದ್ದಾರೆ.

ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್ ಎಂ ಪಿ ವಿ) ಅನೇಕ ಉಸಿರಾಟದ ವೈರಸ್‌ಗಳಲ್ಲಿ ಒಂದಾಗಿದ್ದು, ಈ ಸೋಂಕು ಎಲ್ಲಾ ವಯಸ್ಸಿನ ಜನರಲ್ಲಿ ವಿಶೇಷವಾಗಿ ಚಳಿಗಾಲದಲ್ಲಿ ಮತ್ತು ವಸಂತಕಾಲದ ಆರಂಭದಲ್ಲಿ ಕಂಡುಬರುತ್ತದೆ. ವೈರಸ್ ಸೋಂಕು ಸಾಮಾನ್ಯವಾಗಿ ಸೌಮ್ಯವಾದ ಮತ್ತು ಸ್ವಯಂ-ಸೀಮಿತಗೊಳಿಸುವ ಸ್ಥಿತಿಯಾಗಿದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಅಂತಹ ರೋಗಿಗಳು ಸ್ವತಃ ತಾವಾಗಿಯೇ ಚೇತರಿಸಿಕೊಳ್ಳಲಿದ್ದಾರೆ. ಐಸಿಎಂಆರ್- ವಿ ಆರ್ ಡಿ ಎಲ್ ಪ್ರಯೋಗಾಲಯಗಳಲ್ಲಿ ಸಾಕಷ್ಟು ರೋಗಪತ್ತೆ ಸೌಲಭ್ಯಗಳು ಲಭ್ಯವಿವೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯುವುದು; ತೊಳೆಯದ ಕೈಗಳಿಂದ ಅವರ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿಕೊಳ್ಳುವುದನ್ನು ತಪ್ಪಿಸುವುದು; ರೋಗದ ಗುಣ ಲಕ್ಷಣಗಳನ್ನು ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕ ಮಾಡದಂತೆ ತಡೆಯುವುದು; ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು ಸೇರಿದಂತೆ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟುವ ಬಗ್ಗೆ ಜನಸಂಖ್ಯೆಯಲ್ಲಿ ಐಇಸಿ ಮತ್ತು ಜಾಗೃತಿಯನ್ನು ಹೆಚ್ಚಿಸಲು ರಾಜ್ಯಗಳಿಗೆ ಸಲಹೆ ನೀಡಲಾಯಿತು.

About Matribhumi Samachar

Check Also

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಸಭೆಯಲ್ಲಿ ವಿಶೇಷ ಚರ್ಚೆ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವದ …