ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಗಾಗಿ ಉಮೀದ್ ಕೇಂದ್ರೀಯ ಜಾಲತಾಣವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು ಅವರು ಜೂನ್ 6, 2025 ರಂದು ಚಾಲನೆಗೊಳಿಸಿದರು, ಹಾಗೂ ಡಿಸೆಂಬರ್ 6, 2025 ರಂದು (ಶನಿವಾರ) ಅಧಿಕೃತವಾಗಿ ಅಪ್ ಲೋಡ್ ಗಳಿಗೆ ಅವಕಾಶ ಕೊನೆಗೊಳಿಸಿ ಅಂತಿಮವಾಗಿ ಮುಚ್ಚಲಾಯಿತು. ಉಮೀದ್ ಕಾಯ್ದೆ, 1995 ಮತ್ತು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನಗಳ ಪ್ರಕಾರ ಅದರ 6 ತಿಂಗಳ ಅವಧಿಯನ್ನು ಪೂರ್ಣಗೊಳಿಸಿತು.

ಅಂತಿಮ ಎಣಿಕೆಯಲ್ಲಿ, ಗಡುವು ಸಮೀಪಿಸುತ್ತಿದ್ದಂತೆ ತೀವ್ರತೆ ಗಮನಾರ್ಹವಾಗಿ ವೇಗಗೊಂಡಿತು. ಅನೇಕ ಪರಿಶೀಲನಾ ಸಭೆಗಳು, ತರಬೇತಿ ಕಾರ್ಯಾಗಾರಗಳು ಮತ್ತು ಕಾರ್ಯದರ್ಶಿ ಮಟ್ಟದಲ್ಲಿಯೂ ಸಹ ಉನ್ನತ ಮಟ್ಟದ ಮಧ್ಯಸ್ಥಿಕೆಗಳು ಪ್ರಕ್ರಿಯೆಗೆ ಹೊಸ ವೇಗವನ್ನು ನೀಡಿವೆ, ಇದು ಕೊನೆಯ ಗಂಟೆಗಳಲ್ಲಿ ಅಪ್ ಲೋಡ್ ಅನ್ನು ಹೆಚ್ಚಿಸಲು ಕಾರಣವಾಯಿತು.
- ಪೋರ್ಟಲ್ ನಲ್ಲಿ 5,17,040 ವಕ್ಫ್ ಆಸ್ತಿಗಳನ್ನು ದಾಖಲಾಗಿದೆ
- 2,16,905 ಆಸ್ತಿಗಳನ್ನು ಗೊತ್ತುಪಡಿಸಿದ ಅನುಮೋದಕರು ಅನುಮೋದಿಸಿದ್ದಾರೆ
- 2,13,941 ಆಸ್ತಿಗಳನ್ನು ತಯಾರಕರು ಸಲ್ಲಿಸಿದ್ದಾರೆ ಮತ್ತು ಗಡುವಿನ ವೇಳೆಗೆ ಮುಂದಿನ ಪ್ರಕ್ರಿಯೆಗಾಗಿ ಸರತಿಯಲ್ಲಿ (ಪೈಪ್ ಲೈನ್) ಉಳಿದಿದೆ.
- ಪರಿಶೀಲನೆಯ ಸಮಯದಲ್ಲಿ 10,869 ಆಸ್ತಿಗಳನ್ನು ಈಗಾಗಲೇ ತಿರಸ್ಕರಿಸಲಾಗಿದೆ


ಈ ಬೃಹತ್ ರಾಷ್ಟ್ರೀಯ ಪ್ರಕ್ರಿಯೆಯನ್ನು ಬೆಂಬಲಿಸಲು, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಮಂಡಳಿಗಳು ಮತ್ತು ಅಲ್ಪಸಂಖ್ಯಾತ ಇಲಾಖೆಗಳೊಂದಿಗೆ ನಿರಂತರ ಕಾರ್ಯಾಗಾರಗಳು ಮತ್ತು ತರಬೇತಿ ಅವಧಿಗಳನ್ನು ನಡೆಸಿತು. ವಕ್ಫ್ ಮಂಡಳಿಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳಿಗೆ ಅಪ್ ಲೋಡ್ ಪ್ರಕ್ರಿಯೆಗಾಗಿ ಪ್ರಾಯೋಗಿಕ ತರಬೇತಿಯನ್ನು ನೀಡಲು ದೆಹಲಿಯಲ್ಲಿ ಎರಡು ದಿನಗಳ ಮಾಸ್ಟರ್ ಟ್ರೈನರ್ ಕಾರ್ಯಾಗಾರವನ್ನು ಸಹ ನಡೆಸಲಾಯಿತು.
ಹಿರಿಯ ತಾಂತ್ರಿಕ ಮತ್ತು ಆಡಳಿತ ತಂಡಗಳನ್ನು ರಾಜ್ಯಾದ್ಯಂತ ನಿಯೋಜಿಸಲಾಯಿತು ಮತ್ತು ದೇಶಾದ್ಯಂತ 7 ವಲಯ ಸಭೆಗಳನ್ನು ನಡೆಸಲಾಯಿತು. ಅಪ್ ಲೋಡ್ ಗಳ ಸಮಯದಲ್ಲಿ ಉದ್ಭವಿಸುವ ಸಮಸ್ಯೆಗಳ ತಾಂತ್ರಿಕ ಬೆಂಬಲ ಮತ್ತು ತ್ವರಿತ ಪರಿಹಾರಕ್ಕಾಗಿ ಸಚಿವಾಲಯದ ಕಚೇರಿಯಲ್ಲಿ ಮೀಸಲಾದ ಸಹಾಯವಾಣಿಯನ್ನು ಸಹ ಸ್ಥಾಪಿಸಲಾಯಿತು.
ಪೋರ್ಟಲ್ ಅನ್ನು ಪ್ರಾರಂಭಿಸಿದಾಗಿನಿಂದ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಡಾ. ಚಂದ್ರಶೇಖರ್ ಕುಮಾರ್ ಅವರು 20+ ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ, ಅಸ್ತಿತ್ವದಲ್ಲಿರುವ ವಕ್ಫ್ ಆಸ್ತಿ ವಿವರಗಳನ್ನು ಸಕಾಲಿಕ ಮತ್ತು ನಿಖರವಾಗಿ ಅಪ್ ಲೋಡ್ ಮಾಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿರಂತರವಾಗಿ ಮಾರ್ಗದರ್ಶನ, ಪ್ರೇರಣೆ ಮತ್ತು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಹಂತದ ಫಲಿತಾಂಶ ಪೂರಿತ ಅಂತ್ಯವು ಉಮೀದ್ ಚೌಕಟ್ಟಿನ ಅಡಿಯಲ್ಲಿ ಭಾರತದಾದ್ಯಂತ ವಕ್ಫ್ ಆಸ್ತಿಗಳಿಗೆ ಪಾರದರ್ಶಕತೆ, ದಕ್ಷತೆ ಮತ್ತು ಏಕೀಕೃತ ಡಿಜಿಟಲ್ ನಿರ್ವಹಣೆಯನ್ನು ತರುವಲ್ಲಿ ಮಹತ್ವದ ಮೈಲಿಗಲ್ಲಾಗಿ ಗುರುತಿಸಲಾಗುತ್ತದೆ.
Matribhumi Samachar Kannad

