ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ (ಸ್ವತಂತ್ರ ಉಸ್ತುವಾರಿ), ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವರಾದ ಡಾ.ಜಿತೇಂದ್ರ ಸಿಂಗ್ ಅವರು ಇಂದು ಬೆಂಗಳೂರಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಗೌರವಾನ್ವಿತ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಈ ಪರಿಶೀಲನಾ ಸಭೆಯಲ್ಲಿ ಇಸ್ರೋದ ನಿರ್ಗಮಿತ ಅಧ್ಯಕ್ಷ ಡಾ.ಎಸ್.ಸೋಮನಾಥ್, ನೂತನ ಅಧ್ಯಕ್ಷ ಡಾ.ವಿ.ನಾರಾಯಣನ್, ಇಸ್ರೋ ಮಿಷನ್ ನಿರ್ದೇಶಕರು ಉಪಸ್ಥಿತರಿದ್ದರು.
ಶ್ರೀ ಜಿತೇಂದ್ರ ಸಿಂಗ್ ಅವರಿಗೆ ಹಿರಿಯ ಅಧಿಕಾರಿಗಳು ಇಸ್ರೋದ ಮುಂಬರುವ ಪ್ರಮುಖ ಬಾಹ್ಯಾಕಾಶ ಕಾರ್ಯಾಚರಣೆಗಳ ಕುರಿತು ಮಾಹಿತಿ ನೀಡಿದರು. ಇಸ್ರೋ 2025 ರ ಮೊದಲಾರ್ಧದಲ್ಲಿ ಎರಡು ಜಿ ಎಸ್ ಎಲ್ ವಿ ಮಿಷನ್, ಜಾಗತಿಕ ಗ್ರಾಹಕರಿಗಾಗಿ ಎಲ್ ವಿ ಎಂ 3 ನ ಒಂದು ವಾಣಿಜ್ಯ ಮಿಷನ್ ಸೇರಿದಂತೆ ಪ್ರಮುಖ ಬಾಹ್ಯಾಕಾಶ ಮಿಷನ್ ಗಳನ್ನು ಹೊಂದಿದೆ. ಇದರೊಂದಿಗೆ ಗಗನಯಾನ್ ನ ಮೊದಲ ಮಾನವರಹಿತ ಆರ್ಬಿಟಲ್ ಮಿಷನ್ ಸಹ ಇರುತ್ತದೆ.
ವರ್ಷದ ಮೊದಲ ಮಿಷನ್, GSLV-F15/NVS-02 ಎನ್ ವಿ ಎಸ್ ಸರಣಿಯ ಎರಡನೇ ನ್ಯಾವಿಗೇಷನ್ ಉಪಗ್ರಹ NVS-02 ಅನ್ನು ಉಡಾವಣೆ ಮಾಡುತ್ತದೆ. ಈ ಉಪಗ್ರಹವು ಸ್ಥಾನೀಕರಣ, ನ್ಯಾವಿಗೇಷನ್ ಮತ್ತು ಸಮಯ ಸೇವೆಗಳನ್ನು ಒದಗಿಸುವಲ್ಲಿ NavIC ಸಮೂಹವನ್ನು ಹೆಚ್ಚಿಸುತ್ತದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಪರಮಾಣು ಗಡಿಯಾರದ ಸಂಯೋಜನೆಯ ಹೊರತಾಗಿ, ಎನ್ ವಿ ಎಸ್ ಸರಣಿಯು ಎಲ್1 ಬ್ಯಾಂಡ್ ನಲ್ಲಿ ಸಂಕೇತಗಳನ್ನು ಸಹ ಒಳಗೊಂಡಿದೆ. ಶ್ರೀಹರಿಕೋಟಾದ ಉಡಾವಣಾ ಸಂಕೀರ್ಣದಲ್ಲಿ ಉಡಾವಣಾ ವಾಹನದ ಜೋಡಣೆಯು ಮುಂದುವರಿದ ಹಂತದಲ್ಲಿದೆ ಮತ್ತು ಉಡಾವಣೆಯನ್ನು ಜನವರಿ 2025 ರ ಕೊನೆಯ ವಾರದಲ್ಲಿ ನಿಗದಿಪಡಿಸಲಾಗಿದೆ.

ಇಸ್ರೋ-ನಾಸಾ ಜಂಟಿ ಕಾರ್ಯಾಚರಣೆಯ ಉಡಾವಣೆ, NISAR (ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್) ಅನ್ನು ಜಿ ಎಸ್ ಎಲ್ ವಿ –ಎಫ್ 16 ಮಿಷನ್ ನಲ್ಲಿ ಯೋಜಿಸಲಾಗಿದೆ. NISAR ಒಂದು ಸುಧಾರಿತ ಮೈಕ್ರೋವೇವ್ ರಿಮೋಟ್ ಸೆನ್ಸಿಂಗ್ ಉಪಗ್ರಹವಾಗಿದ್ದು, ಡ್ಯುಯಲ್ ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೇಡಾರ್ ಜೊತೆಗೆ ಸ್ವೀಪ್-ಎಸ್ ಎ ಆರ್ ತಂತ್ರಜ್ಞಾನವನ್ನು ಹೊಂದಿದೆ. ಈ ಉಪಗ್ರಹವು 12 ದಿನಗಳಲ್ಲಿ ಇಡೀ ಜಗತ್ತನ್ನು ನಕ್ಷೆ ಮಾಡುತ್ತದೆ. NISAR ಸುಧಾರಿತ ರಾಡಾರ್ ಚಿತ್ರಣವನ್ನು ಹೊಂದಿದ್ದು, ಇದು ಕೃಷಿಗೆ ಸಂಬಂಧಿಸಿದ ಭೂಮಿಯ ಚಿತ್ರಣಗಳು, ಭೂಕಂಪಗಳು, ಭೂಕುಸಿತಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ವಿಶಿಷ್ಟ ಡೇಟಾವನ್ನು ಒದಗಿಸುತ್ತದೆ, ಶ್ರೀಹರಿಕೋಟಾದಲ್ಲಿ ಜಿ ಎಸ್ ಎಲ್ ವಿ ವಾಹನಗಳ ವ್ಯವಸ್ಥೆಗಳು ಅಂತಿಮ ಜೋಡಣೆಗೆ ಸಿದ್ಧವಾಗುತ್ತಿವೆ ಮತ್ತು NISAR ಉಪಗ್ರಹವು ಅಂತಿಮ ಹಂತದ ಪರೀಕ್ಷೆಗೆ ಒಳಗಾಗುತ್ತಿದೆ.
ಎಲ್ ವಿ ಎಂ 3-ಎಂ5 ಉಡಾವಣೆಯು ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮತ್ತು ಅಮೆರಿಕಾದ ಎಸ್ ಎಸ್ ಟಿ ಸ್ಪೇಸ್ ಮೊಬೈಲ್ ಇಂಕ್ ನಡುವಿನ ವಾಣಿಜ್ಯ ಒಪ್ಪಂದದ ಅಡಿಯಲ್ಲಿ ಬ್ಲೂ ಬರ್ಡ್ ಬ್ಲಾಕ್-2 ಉಪಗ್ರಹಗಳನ್ನು ಉಡಾವಣೆ ಮಾಡಲು ಮೀಸಲಾದ ವಾಣಿಜ್ಯ ಮಿಷನ್ ಆಗಿದೆ. ಎಲ್ ವಿ ಎಂ 3 ವಾಹನ ವ್ಯವಸ್ಥೆಗಳು ಶ್ರೀಹರಿಕೋಟಾದಲ್ಲಿ ಲಭ್ಯವಿವೆ ಮತ್ತು ಮಾರ್ಚ್ 2025 ರಲ್ಲಿ ಉದ್ದೇಶಿತ ಉಡಾವಣೆಗಾಗಿ ವಾಹನ ಜೋಡಣೆಯನ್ನು ಪ್ರಾರಂಭಿಸಲಾಗಿದೆ.
ಈ ವರ್ಷವು ಗಗನಯಾನ್ ಕಾರ್ಯಕ್ರಮದ ಅಡಿಯಲ್ಲಿ ಮೊದಲ ಮಾನವರಹಿತ ಆರ್ಬಿಟ್ ಮಿಷನ್ ಗೆ ಸಾಕ್ಷಿಯಾಗಲಿದೆ. ಇದರಲ್ಲಿ ಹ್ಯೂಮನ್-ರೇಟೆಡ್ ಎಲ್ ವಿ ಎಂ 3 ವಾಹನವು (HLVM3) ಕಕ್ಷೆಯ ಮಾಡ್ಯೂಲ್ ಅನ್ನು ಭೂಮಿಯ ಕಕ್ಷೆಗೆ ಇಳಿಸಲು ಮಾನವ ಬಾಹ್ಯಾಕಾಶ ಹಾರಾಟದ ಕಾರ್ಯಾಚರಣೆಯನ್ನು ಮೌಲ್ಯೀಕರಿಸುತ್ತದೆ. ಕ್ರ್ಯೂ ಮಾಡ್ಯೂಲ್ ಆರ್ಬಿಟಲ್ ಮಾಡ್ಯೂಲ್ ನಿಂದ ಬೇರ್ಪಡುತ್ತದೆ, ಭೂಮಿಯ ವಾತಾವರಣವನ್ನು ಮರು-ಪ್ರವೇಶಿಸುತ್ತದೆ. ನಿಯಂತ್ರಿತ ಅವರೋಹಣದೊಂದಿಗೆ ಸಮುದ್ರದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಇಳಿಯುತ್ತದೆ. ನಂತರ ಅದನ್ನು ಅಲ್ಲಿಂದ ತೆಗೆದುಕೊಳ್ಳಲಾಗುತ್ತದೆ. ಈ ಕಾರ್ಯಾಚರಣೆಗಾಗಿ, ಉಡಾವಣಾ ವಾಹನ ಜೋಡಣೆಯನ್ನು ಶ್ರೀಹರಿಕೋಟಾದಲ್ಲಿ ಪ್ರಾರಂಭಿಸಲಾಗಿದೆ ಮತ್ತು ಆರ್ಬಿಟಲ್ ಮಾಡ್ಯೂಲ್ ಅಂತಿಮ ಹಂತದ ಸಿದ್ಧತೆಯಲ್ಲಿದೆ.
Matribhumi Samachar Kannad

