Sunday, December 07 2025 | 04:17:54 PM
Breaking News

ಭಾರತೀಯ ಹಜ್ ಸಮಿತಿ 2026ರ ಹಜ್ ಯಾತ್ರೆಗೆ ಅರ್ಜಿ ಪ್ರಕ್ರಿಯೆ ಆರಂಭಿಸಿದೆ

Connect us on:

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಹಜ್ ಸಮಿತಿಯು, ಮುಸ್ಲಿಂ ಸಮುದಾಯಕ್ಕೆ ಅತ್ಯಂತ ಪವಿತ್ರವಾದ ಹಜ್ ಯಾತ್ರೆ 2026 ಕ್ಕಾಗಿ ಅಧಿಕೃತವಾಗಿ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಹಜ್ ಯಾತ್ರೆಗೆ ಹೋಗಲಿಚ್ಛಿಸುವ ಯಾತ್ರಿಕರು ಅಧಿಕೃತ ಹಜ್ ಪೋರ್ಟಲ್ https://hajcommittee.gov.in ಮೂಲಕ ಅಥವಾ “HAJ SUVIDHA” ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಈ ಅಪ್ಲಿಕೇಶನ್ ಐಓಎಸ್ (iOS) ಮತ್ತು ಆಂಡ್ರಾಯ್ಡ್ (Android) ಬಳಕೆದಾರರಿಗೆ ಲಭ್ಯವಿದೆ. ಆನ್‌ ಲೈನ್ ಅರ್ಜಿ ಸಲ್ಲಿಕೆಯ ಅವಧಿಯು ಜುಲೈ 7, 2025 ರಿಂದ ಜುಲೈ 31, 2025 ರ ರಾತ್ರಿ 11:59 ರವರೆಗೆ ತೆರೆದಿರುತ್ತದೆ.

ಅರ್ಜಿದಾರರು ತಮ್ಮ ಅರ್ಜಿಗಳನ್ನು ಸಲ್ಲಿಸುವ ಮೊದಲು ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಸಂಪೂರ್ಣವಾಗಿ ಓದುವುದು ಕಡ್ಡಾಯವಾಗಿದೆ. ಅರ್ಜಿದಾರರು ಯಂತ್ರ ಓದಬಲ್ಲ (machine-readable) ಭಾರತೀಯ ಅಂತಾರಾಷ್ಟ್ರೀಯ ಪಾಸ್‌ ಪೋರ್ಟ್ ಹೊಂದುವುದು ಕಡ್ಡಾಯವಾಗಿದೆ. ಈ ಪಾಸ್‌ ಪೋರ್ಟ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನೀಡಿದ್ದಾಗಿರಬೇಕು ಮತ್ತು ಕನಿಷ್ಠ ಡಿಸೆಂಬರ್ 31, 2026 ರವರೆಗೆ ಮಾನ್ಯತೆ ಹೊಂದಿರಬೇಕು.

ಅರ್ಜಿದಾರರು ಅರ್ಜಿ ಸಲ್ಲಿಸುವ ಮೊದಲು ತಮ್ಮ ಸಿದ್ಧತೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕೆಂದು ಹಜ್ ಸಮಿತಿಯು ಸಲಹೆ ನೀಡುತ್ತದೆ. ಯಾತ್ರಿಕರ ಮರಣ ಅಥವಾ ಗಂಭೀರ ವೈದ್ಯಕೀಯ ತುರ್ತು ಪರಿಸ್ಥಿತಿಯಂತಹ ದುರದೃಷ್ಟಕರ ಘಟನೆಗಳನ್ನು ಹೊರತುಪಡಿಸಿ, ಬೇರೆ ಕಾರಣಗಳಿಗೆ ಅರ್ಜಿಯನ್ನು ರದ್ದುಪಡಿಸಿದರೆ ದಂಡ ವಿಧಿಸಲಾಗುತ್ತದೆ ಮತ್ತು ಇದರಿಂದ ಆರ್ಥಿಕ ನಷ್ಟ ಉಂಟಾಗಬಹುದು.

ಈ ಪ್ರಕಟಣೆಯು ಭಾರತ ಸರ್ಕಾರದ ಬೆಂಬಲ ಮತ್ತು ಸೌಲಭ್ಯಗಳೊಂದಿಗೆ, ಸಾವಿರಾರು ಭಾರತೀಯ ಮುಸ್ಲಿಮರು ತಮ್ಮ ಪವಿತ್ರ ಹಜ್ ಯಾತ್ರೆಯ ಆಧ್ಯಾತ್ಮಿಕ ಆಕಾಂಕ್ಷೆಯನ್ನು ಪೂರೈಸಿಕೊಳ್ಳಲು ಮತ್ತೊಂದು ಅವಕಾಶದ ಬಾಗಿಲು ತೆರೆದಿದೆ.

ಹೆಚ್ಚಿನ ಮತ್ತು ವಿವರವಾದ ಸೂಚನೆಗಳಿಗಾಗಿ,  ಅಧಿಕೃತ ವೆಬ್‌ಸೈಟ್ https://hajcommittee.gov.in ಗೆ ಭೇಟಿ ನೀಡಿ.

About Matribhumi Samachar

Check Also

ಗುಜರಾತಿನ ವಾವ್-ಥರಾಡ್ ಜಿಲ್ಲೆಯಲ್ಲಿ ಬನಾಸ್ ಡೈರಿಯು ಹೊಸದಾಗಿ ನಿರ್ಮಿಸಿರುವ ಬಯೋ-ಸಿ ಎನ್‌ ಜಿ ಮತ್ತು ರಸಗೊಬ್ಬರ ಘಟಕವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಉದ್ಘಾಟಿಸಿದರು ಮತ್ತು 150 ಟನ್ ಹಾಲಿನ ಪುಡಿ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತಿನ ವಾವ್-ಥರಾಡ್ ಜಿಲ್ಲೆಯಲ್ಲಿ ಬನಾಸ್ ಡೈರಿ …