Friday, December 12 2025 | 10:16:24 PM
Breaking News

ಖಾದಿ ಮತ್ತು ಗ್ರಾಮೋದ್ಯೋಗ ವಲಯದಲ್ಲಿನ ಉತ್ಪಾದನಾ ಕಾರ್ಯಕ್ಷಮತೆ ಹೆಚ್ಚಳ; ಸುಶ್ರೀ ಶೋಭಾ ಕರಂದ್ಲಾಜೆ

Connect us on:

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಆಯೋಗದ ವಲಯ ಕಚೇರಿಯಲ್ಲಿ ಇಂದು ಖಾದಿ ಗ್ರಾಮೋದ್ಯೋಗ, ಸ್ಫೂರ್ತಿ ಮತ್ತು ಪಿಎಂಇಜಿಪಿ ಯೋಜನೆಯ ಕುಶಲಕರ್ಮಿಗಳೊಂದಿಗೆ ಸಂವಾದ ನಡೆಸಿದರು.

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದಾದ್ಯಂತ ಖಾದಿ ಮತ್ತು ಗ್ರಾಮೋದ್ಯೋಗ ವಲಯವು ರೂ. 1,16,599.75 ಕೋಟಿ ಉತ್ಪಾದನಾ ಕಾರ್ಯಕ್ಷಮತೆಯೊಂದಿಗೆ ರೂ. 1,70,551.37 ಕೋಟಿ ಮಾರಾಟದ ಜೊತೆಗೆ 1.94 ಕೋಟಿ ಜನರಿಗೆ ಉದ್ಯೋಗ ಒದಗಿಸುತ್ತಿದೆ. ಇದು ಖಾದಿ ಮತ್ತು ಗ್ರಾಮೋದ್ಯೋಗ ಕುಶಲಕರ್ಮಿಗಳ ಕಲ್ಯಾಣದೆಡೆಗಿನ ಸರ್ಕಾರದ ಬದ್ಧತೆಯನ್ನು ತಿಳಿಸುತ್ತದೆ ಎಂದರು.

ಕಳೆದ 11 ವರ್ಷಗಳಲ್ಲಿ, ಖಾದಿ ಮತ್ತು ಗ್ರಾಮೋದ್ಯೋಗ ವಲಯವು ಮಾರಾಟದಲ್ಲಿ ಶೇ. 447, ಉತ್ಪಾದನೆಯಲ್ಲಿ ಶೇ. 347 ಮತ್ತು ಉದ್ಯೋಗ ಸೃಷ್ಟಿಯಲ್ಲಿ ಶೇ. 49 ಹೆಚ್ಚಳ ಕಂಡಿದೆ. ಇದು ಕುಶಲಕರ್ಮಿಗಳ ಯೋಗಕ್ಷೇಮಕ್ಕೆ ಪ್ರಧಾನಮಂತ್ರಿಯವರ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಖಾದಿ ಮತ್ತು ಗ್ರಾಮೋದ್ಯೋಗ ವಲಯವು ಗ್ರಾಮೀಣ ಪ್ರದೇಶಗಳಲ್ಲಿನ ಸಾಂಪ್ರದಾಯಿಕ ಕೈಗಾರಿಕೆಗಳನ್ನು ಉಳಿಸುವ ಮತ್ತು ಬುಡಕಟ್ಟು ಜನಾಂಗದವರು, ಗುಡ್ಡಗಾಡು ಪ್ರದೇಶಗಳು, ವಿಶೇಷವಾಗಿ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ, ಮಹಿಳೆಯರು ಸೇರಿದಂತೆ ಬಡ ಕುಶಲಕರ್ಮಿಗಳ ಜೀವನೋಪಾಯವನ್ನು ಸುಧಾರಿಸುವ ಗುರಿ ಹೊಂದಿದೆ. 2024-25ನೇ ವರ್ಷದಲ್ಲಿ, ಕರ್ನಾಟಕದ 208 ಖಾದಿ ಸಂಸ್ಥೆಗಳು ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದ್ದು, ರೂ. 535.21 ಕೋಟಿ ಉತ್ಪಾದನಾ ಕಾರ್ಯಕ್ಷಮತೆ ಮತ್ತು ರೂ. 667.95 ಕೋಟಿ ಚಿಲ್ಲರೆ ಮಾರಾಟ ಕಾರ್ಯಕ್ಷಮತೆಯೊಂದಿಗೆ 21745 ಗ್ರಾಮೀಣ ಕುಶಲಕರ್ಮಿಗಳಿಗೆ ಉದ್ಯೋಗ ಒದಗಿಸಿದೆ ಎಂದು ತಿಳಿಸಿದರು.

ಪಿಎಂಇಜಿಪಿ ಅಡಿಯಲ್ಲಿ 4379 ಉದ್ಯಮಗಳಿಗೆ ರೂ. 132.41 ಕೋಟಿ ಮೌಲ್ಯದ ಸಬ್ಸಿಡಿ ಹಣ ವಿತರಣೆಯು ಕರ್ನಾಟಕದಲ್ಲಿ 43557 ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಕೆವಿಐಸಿ ಸ್ವಯಂ ಸುಸ್ಥಿರ ಉದ್ಯೋಗಾವಕಾಶ ನೀಡುವ ಮೂಲಕ ಭಾರತೀಯ ಆರ್ಥಿಕತೆಗೆ ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ. 2024-25ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಗ್ರಾಮೋದ್ಯೋಗ ವಿಕಾಸ ಯೋಜನೆ ಅಡಿಯಲ್ಲಿ ವಿವಿಧ ಗ್ರಾಮೋದ್ಯೋಗ ಕೈಗಾರಿಕೆಗಳಾದ ಹೊಲಿಗೆ ಯಂತ್ರಗಳು, ವಿದ್ಯುತ್ ಕುಂಬಾರಿಕೆ ಚಕ್ರಗಳು, ಸ್ವಯಂಚಾಲಿತ ಅಗರಬತ್ತಿ ಯಂತ್ರಗಳು, ಪಾದರಕ್ಷೆ ದುರಸ್ತಿ ಉಪಕರಣಗಳು, ಪಾದರಕ್ಷೆ ತಯಾರಿಸುವ ಯಂತ್ರಗಳು, ಪ್ಲಂಬರ್ ಮತ್ತು ಎಲೆಕ್ಟ್ರಿಷಿಯನ್ ಸೇರಿದಂತೆ ಒಟ್ಟು 1210 ಫಲಾನುಭವಿಗಳಿಗೆ 1916 ಉಪಕರಣಗಳು ಮತ್ತು ಸಲಕರಣೆಗಳನ್ನು ಕೆವಿಐಸಿ ವಿತರಿಸಿದ್ದು, ಇದರಿಂದ ತ್ವರಿತ ಬೆಳವಣಿಗೆಗೆ, ಗುಣಾತ್ಮಕ ಉತ್ಪನ್ನಗಳನ್ನು ಉತ್ಪಾದಿಸಲು, ಲಾಭದಾಯಕ ಜೀವನೋಪಾಯವನ್ನು ಮುಂದುವರಿಸಲು, ಮೇಕ್ ಇನ್ ಇಂಡಿಯಾದ ದೃಷ್ಟಿಕೋನಕ್ಕೆ ಉತ್ತೇಜನ ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಕುಶಲಕರ್ಮಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಪ್ರಮಾಣಪತ್ರಗಳನ್ನು ವಿತರಿಸಿದರು. ಎಂಎಸ್‌ಎಂಇ ಸಚಿವಾಲಯದ ಜಂಟಿ ಕಾರ್ಯದರ್ಶಿಯಾದ ಶ್ರೀ ವಿಪುಲ್ ಗೋಯೆಲ್, ಕೆವಿಐಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೂಪಾ ರಾಶಿ, ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಎಲ್ ಮದನ್ ಕುಮಾರ್ ಉಪಸ್ಥಿತರಿದ್ದರು.

About Matribhumi Samachar

Check Also

‘ನಿಮ್ಮ ಹಣ, ನಿಮ್ಮ ಹಕ್ಕು’ ಅಭಿಯಾನವು ಹಕ್ಕು ಪಡೆಯದ ಆಸ್ತಿಗಳ ಇತ್ಯರ್ಥದ ವೇಗವನ್ನು ಇನ್ನೂ ತೀವ್ರಗೊಳಿಸಿದೆ

ಬ್ಯಾಂಕ್ ಠೇವಣಿಗಳು, ವಿಮೆ, ಲಾಭಾಂಶಗಳು, ಷೇರುಗಳು, ಮ್ಯೂಚುವಲ್ ಫಂಡ್ ಮತ್ತು ಪಿಂಚಣಿ ಸೇರಿದಂತೆ ಹಕ್ಕು ಪಡೆಯದ ಹಣಕಾಸು ಸ್ವತ್ತುಗಳನ್ನು ಅವರ …