Friday, December 12 2025 | 02:02:29 AM
Breaking News

ಗುರು ಪೂರ್ಣಿಮೆಯಂದು ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)-ವಿಆರ್ ಐಎಫ್ ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟಿಸಿದ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ: ‘ಕಲಿಕೆಯ ದೀಪಸ್ತಂಭ’ವೆಂದು ಬಣ್ಣನೆ

Connect us on:

ಗುರುಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ಕೇಂದ್ರ ಸಂವಹನ ಮತ್ತು ಈಶಾನ್ಯ ರಾಜ್ಯಗಳ ಪ್ರದೇಶಾಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬೆಂಗಳೂರಿನಲ್ಲಿ ಇಂದು ವಿಟಿಯು-ವಿಆರ್ ಐಎಫ್ ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಉದ್ಘಾಟಿಸಿದರು. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮತ್ತು ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ (ಟಿಸಿಒಇ) ಇಂಡಿಯಾದ ಜಂಟಿ ಉಪಕ್ರಮವಾಗಿದ್ದು. ವಿಆರ್ ಐಎಫ್ ಪೂರಕ ವ್ಯವಸ್ಥೆಯಾದ ಈ ಕೇಂದ್ರವು 5ಜಿ, 6ಜಿ, ಎಐ (ಕೃತಕ ಬುದ್ಧಿಮತ್ತೆ), ಕ್ವಾಂಟಮ್ ಸಂವಹನ ಮತ್ತು ದೂರಸಂಪರ್ಕ ಭದ್ರತೆಯಲ್ಲಿ ಅತ್ಯಾಧುನಿಕ ಸಂಶೋಧನಾ ತಾಣವಾಗಲು ಸಜ್ಜಾಗಿದೆ. ಭಾರತದ ಗುರು-ಶಿಷ್ಯ ಪರಂಪರೆಗೆ ಗೌರವ ಸಲ್ಲಿಸಿದ ಸಚಿವರು, ನಾವೀನ್ಯತೆ, ಉದ್ಯಮ ಸಂಪರ್ಕಗಳು ಮತ್ತು ರಾಷ್ಟ್ರೀಯ ಸೇವೆಗಳಲ್ಲಿ ಶೈಕ್ಷಣಿಕ ಕಠಿಣತೆಯನ್ನು ಬೆರೆಸುವ ಮಹತ್ವವನ್ನು ಒತ್ತಿ ಹೇಳಿದರು.

ಗುರುಗಳು, ಎಂಜಿನಿಯರಿಂಗ್ ಪರಂಪರೆ ಮತ್ತು ಭಾರತದ ಜ್ಞಾನ ತತ್ವಗಳನ್ನು ಗೌರವಿಸುವುದು

ಭಾರತದ ಪ್ರಾಚೀನ ಗುರು-ಶಿಷ್ಯ ಪರಂಪರೆಗೆ ಗೌರವ ಸಲ್ಲಿಸಿದ ಸಚಿವರು, “ಇದು ಕೇವಲ ಉದ್ಘಾಟನೆಯಲ್ಲ, ಮುಂದಿನ ಪೀಳಿಗೆಗೆ ದಾರಿ ತೋರುವ ಪ್ರತಿಯೊಬ್ಬ ಗುರುವಿಗೆ ಸಲ್ಲಿಸುವ ಗೌರವ” ಎಂದು ಹೇಳಿದರು. ಶಾಲೆಯಿಂದ ಹಾರ್ವರ್ಡ್ ಮತ್ತು ಸ್ಟ್ಯಾನ್ಫೋರ್ಡ್ನಂತಹ ಜಾಗತಿಕ ಸಂಸ್ಥೆಗಳವರೆಗಿನ ಜೀವನದ ಪಯಣದಲ್ಲಿ ಶಿಕ್ಷಕರ ಮಹತ್ವದ ಪಾತ್ರವನ್ನು ಸಚಿವರು ಉಲ್ಲೇಖಿಸಿದರು ಮತ್ತು ಗುರುಗಳು ನೀಡುವ ಮೂಲ್ಯ ಮತ್ತು ಸಿದ್ಧಾಂತದ ಆಳವಾದ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸಿದರು. ಬಲವಾದ ವೈಯಕ್ತಿಕ ಉದಾಹರಣೆಯನ್ನು ನೀಡಿದ ಸಚಿವರು, ತಮ್ಮ ಮುತ್ತಜ್ಜ ಮಾಧವರಾವ್ ಸಿಂಧಿಯಾ, ಒಂದು ಶತಮಾನದ ಹಿಂದೆ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರೊಂದಿಗೆ ಸಹಕರಿಸಿ ಗ್ವಾಲಿಯರ್ಗೆ ಮಹತ್ವದ ಅಣೆಕಟ್ಟು ತಂತ್ರಜ್ಞಾನವನ್ನು ತಂದುಕೊಟ್ಟರು ಎಂದು ಸ್ಮರಿಸಿದರು.ಆ ಮೂಲಕ ಎಂಜಿನಿಯರಿಂಗ್ ದಂತಕಥೆ ಎಂದು ಕರೆಯಲ್ಪಡುವ ಮತ್ತು ವಿಟಿಯುನ ಹೆಸರೇ ಅವರೊಂದಿಗೆ ಹೊಸ ಪೀಳಿಗೆಯ ಸಂಪರ್ಕವನ್ನು ಸ್ಥಾಪಿಸಿದೆ ಎಂದು ಅವರು ವಿವರಿಸಿದರು.

ಭಾರತದ ಟೆಲಿಕಾಂ ವಲಯ ಉತ್ತುಂಗಕ್ಕೇರಲು ಮತ್ತು ನಾವೀನ್ಯತೆ ಕ್ರಾಂತಿಯಲ್ಲಿ ಬೆಂಗಳೂರಿನ ಪಾತ್ರ

ಕೇಂದ್ರವನ್ನು ‘ಕಲಿಕೆಯ ದೀಪಸ್ತಂಭ’ ಎಂದು ಬಣ್ಣಿಸಿದ ಶ್ರೀ ಸಿಂಧಿಯಾ ಅವರು, ಶೈಕ್ಷಣಿಕ ತಜ್ಞರು, ನವೋದ್ಯಮಗಳು ಮತ್ತು ಟೆಲಿಕಾಂ ಉದ್ಯಮದ ನಾಯಕರ ಒಂದೆಡೆ ಸಮಾಗಮಗೊಳಿಸಿರುವ ವಿಟಿಯು ಅನ್ನು ರಾಷ್ಟ್ರೀಯ ನಾವೀನ್ಯತೆ ಎಂಜಿನ್ ಎಂದು ಶ್ಲಾಘಿಸಿದರು. 5ಜಿ, 6ಜಿ, ಕ್ವಾಂಟಮ್ ಸಂವಹನ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಸುರಕ್ಷಿತ ಟೆಲಿಕಾಂ ಮೂಲಸೌಕರ್ಯದಂತಹ ಅತ್ಯಾಧುನಿಕ ವಲಯಗಳ ಮೇಲೆ ವಿಶ್ವವಿದ್ಯಾಲಯ ಗಮನ ಹರಿಸುತ್ತಿರುವುದನ್ನು ಸಚಿವರು ಶ್ಲಾಘಿಸಿದರು, ಭಾರತವು ನಿರ್ದಿಷ್ಟ ಗುರಿಗಳನ್ನು ತಲುಪುವ ಜತೆಗೆ ಜಾಗತಿಕ ತಂತ್ರಜ್ಞಾನವನ್ನು ಮುನ್ನಡೆಸಲು ತಯಾರಿ ನಡೆಸುತ್ತಿದೆ ಎಂದು ಪ್ರತಿಪಾದಿಸಿದರು. ನಾವು 4ಜಿ ಯಲ್ಲಿ ಜಗತ್ತಿನ ಹಿಂದೆ ಸಾಗುತ್ತಿದ್ದೇವೆ, 5ಜಿಯಲ್ಲಿ ವಿಶ್ವದೊಂದಿಗೆ ಸಾಗುತ್ತಿದ್ದೇವೆ, ಆದರೆ ನಾವು 6ಜಿ ಯಲ್ಲಿ ಜಗತ್ತನ್ನು ಮುನ್ನಡೆಸುತ್ತಿದ್ದೇವೆ” ಎಂದು ಅವರು ಹೇಳಿದರು, ಜಾಗತಿಕ 6ಜಿ ಪೇಟೆಂಟ್ಗಳಲ್ಲಿ ಶೇ. 10ರಷ್ಟು ಕೊಡುಗೆ ನೀಡುವ ಸರ್ಕಾರದ ದೂರದೃಷ್ಟಿಯನ್ನು ಪುನರುಚ್ಚರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಅನುಕೂಲಕರ, ನಾವೀನ್ಯತೆ-ಆಧರಿತ ಸರ್ಕಾರದ ದೂರದೃಷ್ಟಿಯೊಂದಿಗೆ ಕೇಂದ್ರ ಸರ್ಕಾರವು ಹೊಂದಿಕೆಯಾಗುತ್ತದೆ ಎಂದು ಸಚಿವರು ಒತ್ತಿ ಹೇಳಿದರು ಮತ್ತು “ನಿಮ್ಮ ಕಲ್ಪನೆಯನ್ನು ವಿಸ್ತರಿಸಿ, ಅಡತಡೆಗಳನ್ನು ಮುರಿದು ಮುನ್ನುಗಿ, ಉತ್ತಮ ವಾತಾವರಣವನ್ನು ನಿರ್ಮಿಸಿ, ವ್ಯವಹಾರಕ್ಕಾಗಿ ಮಾತ್ರವಲ್ಲ, ಭಾರತಕ್ಕಾಗಿ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಾವೀನ್ಯತೆಯಲ್ಲಿ ಯುವ ಭಾರತದ ಪ್ರತಿಭಾ ಪ್ರದರ್ಶನ 

ಕೇಂದ್ರಕ್ಕೆ ತಮ್ಮ ಭೇಟಿಯ ಸಮಯದಲ್ಲಿ, ಸಚಿವರು ಹದಿಹರೆಯದವರಿಂದ ಹಿಡಿದು ಇಪ್ಪತ್ತರ ವಯಸ್ಸಿನ ಆಜು ಬಾಜಿನಲ್ಲಿರುವ ಕಾಲೇಜು ವಿದ್ಯಾರ್ಥಿಗಳವರೆಗೆ ಯುವ ಮನಸ್ಸುಗಳ ನಾವೀನ್ಯತೆಗಳನ್ನು ಪ್ರದರ್ಶಿಸುವ ಆಕರ್ಷಕ ಪ್ರದರ್ಶನವನ್ನು ವೀಕ್ಷಿಸಿದರು. ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿಗಳಿಂದ ಹಿಡಿದು ರಕ್ಷಣಾ ವಲಯದಲ್ಲಿನ ಪರಿಹಾರಗಳು ಮತ್ತು ಎಆರ್/ವಿಅರ್ ಮತ್ತು ಟೆಲಿಕಾಂನಲ್ಲಿನ ಪರಿಣಾಮಕಾರಿ ಅನ್ವಯಿಕೆಗಳವರೆಗೆ, ಪ್ರದರ್ಶನಗಳು ಭಾರತದ ಉದಯೋನ್ಮುಖ ತಂತ್ರಜ್ಞಾನ ಪ್ರತಿಭೆಯ ಆಳ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುವಂತಿದ್ದವು, ಶ್ರೀ ಸಿಂಧಿಯಾ ನಾವೀನ್ಯಕಾರರೊಂದಿಗೆ ಆತ್ಮೀಯವಾಗಿ ಸಂವಾದದಲ್ಲಿ ತೊಡಗಿದ್ದರು, ಅವರ ಸೃಜನಶೀಲತೆ ಮತ್ತು ದೃಢಸಂಕಲ್ಪವನ್ನು ಶ್ಲಾಘಿಸಿದರು. ಈ ಯುವ ಬದಲಾವಣೆಯ ಹರಿಕಾರರ ಉತ್ಸಾಹ ಮತ್ತು ಜಾಣ್ಮೆಯು ಭಾರತವು ಕೇವಲ ಅಳವಡಿಸಿಕೊಳ್ಳುವುದಲ್ಲದೆ, ಜಾಗತಿಕ ತಂತ್ರಜ್ಞಾನದ ಮುಂದಿನ ಅಲೆಯನ್ನು ವ್ಯಾಖ್ಯಾನಿಸುವ ಭವಿಷ್ಯದಲ್ಲಿ ನನಗೆ ನಂಬಿಕೆ ಇದೆ ಎಂದು ಪುನರುಚ್ಚರಿಸಿದರು.

About Matribhumi Samachar

Check Also

ಪರೀಕ್ಷಾ ಪೇ ಚರ್ಚಾ (ಪಿಪಿಸಿ 2026) ಇದರ 9ನೇ ಆವೃತ್ತಿಯು ಜನವರಿ 2026ರಲ್ಲಿ ನಡೆಯಲಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಶಿಷ್ಟ ಸಂವಾದಾತ್ಮಕ ಕಾರ್ಯಕ್ರಮವಾದ ಪರೀಕ್ಷಾ ಪೇ ಚರ್ಚಾ (ಪಿಪಿಸಿ), ಇದರ 9ನೇ ಆವೃತ್ತಿಯು …