Monday, December 08 2025 | 05:39:25 PM
Breaking News

ಉತ್ತಮ ಕೌಶಲ್ಯ ಅಭಿವೃದ್ಧಿ ಪರಿಸರ ವ್ಯವಸ್ಥೆ ಭಾರತದ ಯುವಜನರನ್ನು ಉದಯೋನ್ಮುಖ ಉದ್ಯೋಗಾವಕಾಶಗಳಿಗೆ ಸಜ್ಜುಗೊಳಿಸುತ್ತದೆ – ಶ್ರೀ ಜಯಂತ್ ಚೌಧರಿ

Connect us on:

ಕೌಶಲ್ಯ ಅಭಿವೃದ್ಧಿಗಾಗಿ ಸಮಗ್ರ ಮತ್ತು ಸುರಕ್ಷಿತ ಮೂಲಸೌಕರ್ಯವನ್ನು ಬೆಳೆಸುವ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ (ಸ್ವತಂತ್ರ ನಿರ್ವಹಣೆ) ಶ್ರೀ ಜಯಂತ್ ಚೌಧರಿ ಅವರು ಇಂದು ಬೆಂಗಳೂರಿನ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ (ಎನ್.ಎಸ್.ಟ.ಐ.) (ಸಾಮಾನ್ಯ) ಯಲ್ಲಿ ಹೊಸದಾಗಿ ನಿರ್ಮಿಸಲಾದ ವಸತಿಗೃಹವನ್ನು ಉದ್ಘಾಟಿಸಿದರು. ಈ ಸೌಲಭ್ಯವು ತರಬೇತಿ ಪಡೆಯುವವರಿಗೆ ಸುರಕ್ಷಿತ ಮತ್ತು ಆರಾಮದಾಯಕವಾದ ವಸತಿ ವಾತಾವರಣವನ್ನು ಒದಗಿಸುವ ಗುರಿಯನ್ನು ಹೊಂದಿದೆ ಮತ್ತು ಯುವಕರನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಬಲಪಡಿಸುತ್ತದೆ.

ಉದ್ಘಾಟನಾ ಸಮಾರಂಭದಲ್ಲಿ ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (ಎಂ.ಎಸ್.ಡಿ.ಇ.) ಮಹಾನಿರ್ದೇಶಕಿ (ತರಬೇತಿ) ಶ್ರೀಮತಿ ತ್ರಿಶಲ್ಜಿತ್ ಸೇಥಿ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತೆ ಡಾ. ರಾಗಪ್ರಿಯ ಆರ್. ಐಎಎಸ್, ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು, ಸಿ.ಪಿ.ಡಬ್ಲ್ಯೂ.ಡಿ. ಬೆಂಗಳೂರಿನ ಎ.ಡಿ.ಜಿ ಶ್ರೀ ಎನ್.ಎನ್.ಎಸ್.ಎಸ್. ರಾವ್ ಮತ್ತು ಡಿ.ಜಿ.ಟಿ.ಯ ಉಪ ಮಹಾನಿರ್ದೇಶಕ (ದಕ್ಷಿಣ ವಲಯ) ಶ್ರೀ ಅನಿಲ್ ಕುಮಾರ್ ಮತ್ತು ಕರ್ನಾಟಕ ಆರ್‌.ಡಿ.ಎಸ್‌.ಡಿಇ.ಯ ಪ್ರಾದೇಶಿಕ ನಿರ್ದೇಶಕ ಶ್ರೀ ಎನ್.ಆರ್. ಅರವಿಂದನ್ ಸೇರಿದಂತೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ (ಎಂ.ಎಸ್.ಡಿ.ಇ.) ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಮತ್ತು ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ ಶ್ರೀ ಜಯಂತ್ ಚೌಧರಿ, “ವಿಕಸಿತ ಭಾರತ@2047 ರ ನಮ್ಮ ಸಂಕಲ್ಪದಲ್ಲಿ ಕೌಶಲ್ಯವು ಕೇಂದ್ರ ಸ್ಥಾನ ಪಡೆಯುತ್ತಿದ್ದಂತೆ, ನಮ್ಮ ಯುವಕರನ್ನು ಭವಿಷ್ಯಕ್ಕೆ ಸಿದ್ಧವಾಗಿರುವ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಲು ಉತ್ತಮ ಗುಣಮಟ್ಟದ ತರಬೇತಿ ಮೂಲಸೌಕರ್ಯದಲ್ಲಿ ಹೂಡಿಕೆಗಳು ಅತ್ಯಗತ್ಯವಾಗಿದೆ.

ಎನ್‌.ಎಸ್‌.ಟಿ.ಐ. ಬೆಂಗಳೂರಿನಲ್ಲಿ ಇಂದು ನಡೆದ ಹಾಸ್ಟೆಲ್ ಉದ್ಘಾಟನೆಯು ಪ್ರೋತ್ಸಾಹದಾಯಕ ಮತ್ತು ಅಂತರ್ಗತ ಸ್ಥಳವನ್ನು ಒದಗಿಸುವತ್ತ ಒಂದು ಹೆಜ್ಜೆಯಾಗಿದೆ. ಇಲ್ಲಿ ತರಬೇತಿ ಪಡೆಯುವವರು ಯಾವುದೇ ಅಡೆತಡೆಗಳಿಲ್ಲದೆ ಕಲಿಯಬಹುದು, ನಾವೀನ್ಯತೆ ಪಡೆಯಬಹುದು ಮತ್ತು ಉದ್ಯಮ 4.0 ಗಾಗಿ ಸಿದ್ಧರಾಗಬಹುದು. ಸಂಸ್ಥೆಯ ಅಭ್ಯರ್ಥಿಗಳೊಂದಿಗೆ ನನ್ನ ಸಂವಾದದ ಸಮಯದಲ್ಲಿ ಕಲಿಯುವವರ ಉತ್ಸಾಹ ಮತ್ತು ಬದ್ಧತೆಯನ್ನು ನಾನು ನೋಡಿದೆ ಮತ್ತು ಅಂತಹ ಉಪಕ್ರಮಗಳಿಂದ ಅವರನ್ನು ಮತ್ತಷ್ಟು ಪ್ರೇರೇಪಿಸಲು ನಾವು ಆಶಿಸುತ್ತೇವೆ.”

ಸುಮಾರು ₹11.06 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾದ ಹಾಸ್ಟೆಲ್ 3,423.23 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ ಮತ್ತು 60 ಪ್ರಶಿಕ್ಷಣಾರ್ಥಿಗಳಿಗೆ ಅವಕಾಶ ಕಲ್ಪಿಸಬಹುದಾದ ಮೂರು ಮಹಡಿಗಳಲ್ಲಿ ಇಬ್ಬರಿಗೆ ಒಂದು ಕೊಠಡಿಯಂತೆ 30 ಕೊಠಡಿಗಳನ್ನು ನಿರ್ಮಿಸಲಾಗಿದೆ. ಸೌಕರ್ಯ, ಭದ್ರತೆ ಮತ್ತು ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಈ ಸೌಲಭ್ಯವು ಅಧ್ಯಯನ ಕೊಠಡಿಗಳು, ಸಾಮುದಾಯಿಕ ಪ್ರದೇಶಗಳು ಮತ್ತು ಮನರಂಜನಾ ಸ್ಥಳಗಳಂತಹ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿದೆ. ಇದರ ಆಧುನಿಕ, ಇಂಧನ-ಸಮರ್ಥ ವಿನ್ಯಾಸವು ವಿಶ್ವ ದರ್ಜೆಯ ಕೌಶಲ್ಯ ಅಭಿವೃದ್ಧಿ ಮೂಲಸೌಕರ್ಯವನ್ನು ವಿಸ್ತರಿಸುವ ಮತ್ತು ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಅನುಕೂಲಕರ ಕಲಿಕಾ ವಾತಾವರಣವನ್ನು ಸಕ್ರಿಯಗೊಳಿಸುವ ಸರ್ಕಾರದ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ.

ತರಬೇತಿ ಮಹಾ ನಿರ್ದೇಶನಾಲಯ (ಡಿಜಿಟಿ), ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ (ಎಂ.ಎಸ್.ಡಿ.ಇ.) ಅಡಿಯಲ್ಲಿ ಪ್ರಮುಖ ಸಂಸ್ಥೆಯಾದ ಎನ್.ಎಸ್.ಟ.ಐ. ಬೆಂಗಳೂರು, ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಸುಧಾರಿತ ವೃತ್ತಿಪರ ತರಬೇತಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಾಸ್ಟೆಲ್ ಸೇರ್ಪಡೆಯು ದೇಶಾದ್ಯಂತದ ಪ್ರಶಿಕ್ಷಣಾರ್ಥಿಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ. ಇದು ಭಾರತದ ಕೌಶಲ್ಯ ಭಾರತ ಮಿಷನ್ ಅನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಮೈಲಿಗಲ್ಲು, ಭಾರತದ ಯುವಜನರನ್ನು ಉದಯೋನ್ಮುಖ ಉದ್ಯೋಗಾವಕಾಶಗಳಿಗೆ ಅಗತ್ಯವಾದ ಸಾಮರ್ಥ್ಯಗಳೊಂದಿಗೆ ಸಜ್ಜುಗೊಳಿಸುವ ಮತ್ತು ಅಂತಿಮವಾಗಿ ದೇಶದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ದೃಢವಾದ ಕೌಶಲ್ಯ ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

About Matribhumi Samachar

Check Also

ಸಶಸ್ತ್ರ ಪಡೆಗಳ ಧ್ವಜ ದಿನದಂದು ಸಶಸ್ತ್ರ ಪಡೆಗಳಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ

ಸಶಸ್ತ್ರ ಪಡೆಗಳ ಧ್ವಜ ದಿನದ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರಧಾನಮಂತ್ರಿ ಅವರು ತಮ್ಮ ಹೃದಯಾಂತರಾಳದ …