Tuesday, December 09 2025 | 03:19:27 PM
Breaking News

ಭಾರತದ ಪ್ರಧಾನಮಂತ್ರಿ ಮತ್ತು ಫ್ರಾನ್ಸ್ ಅಧ್ಯಕ್ಷರು ಜಂಟಿಯಾಗಿ ಐಟಿಇಆರ್ ಘಟಕಕ್ಕೆ ಭೇಟಿ ನೀಡಿದರು

Connect us on:

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರಾದ ಘನತೆವೆತ್ತ ಶ್ರೀ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಜಂಟಿಯಾಗಿ ಕ್ಯಾಡರಾಚೆಯಲ್ಲಿರುವ ಅಂತಾರಾಷ್ಟ್ರೀಯ ಥರ್ಮೋನ್ಯೂಕ್ಲಿಯರ್ ಪ್ರಾಯೋಗಿಕ ರಿಯಾಕ್ಟರ್ ಗೆ (ಐಟಿಇಆರ್) ಭೇಟಿ ನೀಡಿದ್ದಾರೆ. ನಾಯಕರನ್ನು ಐಟಿಇಆರ್ ಮಹಾನಿರ್ದೇಶಕರು ಸ್ವಾಗತಿಸಿದರು. ಈ ಭೇಟಿಯು ವಿಶಿಷ್ಟವಾಗಿದ್ದು, ವಿಶ್ವದ ಅತ್ಯಂತ ಮಹತ್ವಾಕಾಂಕ್ಷೆಯ ಸಮ್ಮಿಳನ ಇಂಧನ ಯೋಜನೆಗಳಲ್ಲಿ ಒಂದಾದ ಐಟಿಇಆರ್ ಗೆ ಯಾವುದೇ ರಾಷ್ಟ್ರದ ಮುಖ್ಯಸ್ಥರು ಅಥವಾ ಸರ್ಕಾರದ ಮುಖ್ಯಸ್ಥರ ಮೊದಲ ಭೇಟಿಯಾಗಿದೆ.

ಭೇಟಿಯ ಸಮಯದಲ್ಲಿ, ವಿಶ್ವದ ಅತಿದೊಡ್ಡ ಟೋಕಾಮಾಕ್ ಜೋಡಣೆ ಸೇರಿದಂತೆ ಐಟಿಇಆರ್ ನ ಪ್ರಗತಿಯನ್ನು ಉಭಯ ನಾಯಕರು ಶ್ಲಾಘಿಸಿದ್ದಾರೆ. ಈ ಐಟಿಇಆರ್ ಘಟಕದಲ್ಲಿ ಪ್ಲಾಸ್ಮಾವನ್ನು ಒಳಗೊಂಡು ಅದನ್ನು ನಿಯಂತ್ರಿಸುವ ಮೂಲಕ 500 ಮೆಗಾವ್ಯಾಟ್ ಸಮ್ಮಿಳನ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. ಈ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಐಟಿಇಆರ್ ಎಂಜಿನಿಯರ್ ಗಳು ಮತ್ತು ವಿಜ್ಞಾನಿಗಳ ಸಮರ್ಪಣೆಯನ್ನು ನಾಯಕರು ಶ್ಲಾಘಿಸಿದ್ದಾರೆ.

ಕಳೆದ ಎರಡು ದಶಕಗಳಲ್ಲಿ ಈ ಯೋಜನೆಗೆ ಕೊಡುಗೆ ನೀಡಿದ ಏಳು ಐಟಿಇಆರ್ ಸದಸ್ಯರಲ್ಲಿ ಭಾರತವೂ ಒಂದಾಗಿದೆ. ಸುಮಾರು 200 ಭಾರತೀಯ ವಿಜ್ಞಾನಿಗಳು ಮತ್ತು ಸಹವರ್ತಿಗಳು, ಮತ್ತು ಎಲ್ & ಟಿ, ಐನಾಕ್ಸ್ ಇಂಡಿಯಾ, ಟಿಸಿಎಸ್, ಟಿಸಿಇ, ಹೆಚ್ ಸಿ ಎಲ್ ಟೆಕ್ನಾಲಜೀಸ್ ನಂತಹ ಗಮನಾರ್ಹ ಉದ್ಯಮಗಾರರು ಐಟಿಇಆರ್ ಯೋಜನೆಯಲ್ಲಿ ತಮ್ಮ ಉದ್ಯೋಗಿಗಳನ್ನು ತೊಡಗಿಸಿಕೊಂಡಿದ್ದಾರೆ.

About Matribhumi Samachar

Check Also

ಫಲಿತಾಂಶಗಳ ಪಟ್ಟಿ: ರಷ್ಯಾ ಒಕ್ಕೂಟದ ಅಧ್ಯಕ್ಷರ ಅಧಿಕೃತ ಭಾರತ ಭೇಟಿ

ತಿಳುವಳಿಕಾ ಒಡಂಬಡಿಕೆಗಳು ಮತ್ತು ಒಪ್ಪಂದಗಳು. ವಲಸೆ ಮತ್ತು ಚಲನಶೀಲತೆ: ಒಂದು ದೇಶದ ನಾಗರಿಕರು ಇನ್ನೊಂದು ದೇಶದ ಭೂಭಾಗದಲ್ಲಿ ಕೈಗೊಳ್ಳುವ  ತಾತ್ಕಾಲಿಕ ಕಾರ್ಮಿಕ ಚಟುವಟಿಕೆಯ ಕುರಿತು ಭಾರತ ಗಣರಾಜ್ಯ …