ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗಾಗಿ ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮತ್ತು ಒಡಿಶಾ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡುವಿನ ಒಡಂಬಡಿಕೆಗಾಗಿ ಒಡಿಶಾದ ಜನರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಈ ಯೋಜನೆಯು ಕೈಗೆಟುಕುವ ದರದಲ್ಲಿ ಅತ್ಯುನ್ನತ ಗುಣಮಟ್ಟದ ಆರೋಗ್ಯ ಸೇವೆಯನ್ನು, ವಿಶೇಷವಾಗಿ ನಾರಿ ಶಕ್ತಿ ಮತ್ತು ಒಡಿಶಾದ ಹಿರಿಯ ನಾಗರಿಕರಿಗೆ ಖಚಿತಪಡಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಅವರ ಎಕ್ಸ್ ಪೋಸ್ಟ್‌ಗೆ ಉತ್ತರವಾಗಿ, ಪ್ರಧಾನಮಂತ್ರಿ ಅವರು ಹೀಗೆ ಪೋಸ್ಟ್ ಮಾಡಿದ್ದಾರೆ:
“ಒಡಿಶಾದ ಜನರಿಗೆ ಅಭಿನಂದನೆಗಳು!
ಹಿಂದಿನ ಸರ್ಕಾರದ ಅವಧಿಯಲ್ಲಿ ಒಡಿಶಾದ ನನ್ನ ಸಹೋದರ – ಸಹೋದರಿಯರಿಗೆ ಆಯುಷ್ಮಾನ್ ಭಾರತ್‌ನ ಅನುಕೂಲಗಳನ್ನು ನಿರಾಕರಿಸಿರುವುದು ನಿಜಕ್ಕೂ ದುರದೃಷ್ಟಕರ. ಈ ಯೋಜನೆಯು ಕೈಗೆಟಕುವ ದರದಲ್ಲಿ ಉನ್ನತ ಗುಣಮಟ್ಟದ ಆರೋಗ್ಯ ಸೇವೆಯನ್ನು ಖಚಿತಪಡಿಸುತ್ತದೆ. ಇದು ವಿಶೇಷವಾಗಿ ನಾರಿ ಶಕ್ತಿ ಮತ್ತು ಒಡಿಶಾದ ಹಿರಿಯ ನಾಗರಿಕರಿಗೆ ಅನುಕೂಲಕರ.”
भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं
ऑडियो बुक : भारत 1885 से 1950 (इतिहास पर एक दृष्टि)
Matribhumi Samachar Kannad

