Thursday, January 01 2026 | 05:17:57 AM
Breaking News

ಮಕರ ಸಂಕ್ರಾಂತಿ, ಉತ್ತರಾಯಣ ಮತ್ತು ಮಾಘ ಬಿಹು ಪ್ರಯುಕ್ತ ಸರ್ವರಿಗೂ ಪ್ರಧಾನಮಂತ್ರಿ ಶುಭಾಶಯ

Connect us on:

ಮಕರ ಸಂಕ್ರಾಂತಿ, ಉತ್ತರಾಯಣ ಮತ್ತು ಮಾಘ ಬಿಹು ಹಬ್ಬದ ಪ್ರಯುಕ್ತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

ಎಕ್ಸ್‌ ನಲ್ಲಿ ಪ್ರತ್ಯೇಕ ಪೋಸ್ಟ್‌ ಗಳಲ್ಲಿ ಅವರು ಹೀಗೆ ಬರೆದಿದ್ದಾರೆ:

“ಮಕರ ಸಂಕ್ರಾಂತಿ ಅಂಗವಾಗಿ ದೇಶದ ಸಮಸ್ತ ನಾಗರಿಕರಿಗೆ ಶುಭಾಶಯಗಳು. ಸೂರ್ಯನಿಗೆ ಸಮರ್ಪಿತವಾದ ಈ ಪವಿತ್ರ ಉತ್ತರಾಯಣ ಕಾಲವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಚೈತನ್ಯ ಮತ್ತು ಹೊಸ ಉತ್ಸಾಹವನ್ನು ತುಂಬಲಿ. ”

“ಈ ಪವಿತ್ರ ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಹಬ್ಬ ನಿಮ್ಮೆಲ್ಲರ ಜೀವನದಲ್ಲಿ ಹೊಸ ಉತ್ಸಾಹ, ಸಂತೋಷ ಮತ್ತು ಸಮೃದ್ಧಿ ನೀಡಲಿ….!!!”

“ಅಮೋಘ ಉತ್ತರಾಯಣ ನಿಮ್ಮದಾಗಲಿ! ಈ ಹಬ್ಬವು ಎಲ್ಲರ ಜೀವನದಲ್ಲೂ ಯಶಸ್ಸು ಮತ್ತು ಸಂತೋಷವನ್ನು ತರಲಿ.”

“ಮಾಘ ಬಿಹು ಶುಭಾಶಯಗಳು! ನಾವು ಪ್ರಕೃತಿಯ ಸಮೃದ್ಧಿ, ಸುಗ್ಗಿಯ ಸಂತಸ ಮತ್ತು ಒಗ್ಗಟ್ಟಿನ ಉತ್ಸಾಹವನ್ನು ಸಂಭ್ರಮಿಸುತ್ತೇವೆ. ಈ ಹಬ್ಬವು ಸಂತೋಷ ಮತ್ತು ಒಗ್ಗಟ್ಟಿನ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ.

“ಮಾಘ ಬಿಹು ಅಂಗವಾಗಿ ಶುಭ ಹಾರೈಕೆಗಳು! ಪ್ರಕೃತಿಯ ಸಮೃದ್ಧತೆ, ಸುಗ್ಗಿಯ ಸಂಭ್ರಮ ಮತ್ತು ಭ್ರಾತೃತ್ವದ ಮನೋಭಾವವನ್ನು ಆಚರಿಸುತ್ತೇವೆ. ಈ ಹಬ್ಬವು ಸಂತೋಷ ಮತ್ತು ಭ್ರಾತೃತ್ವದ ಮನೋಭಾವವನ್ನು ಇನ್ನಷ್ಟು ಉತ್ತೇಜಿಸಲಿ.”

 

भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं

सारांश कनौजिया की पुस्तकें

 

ऑडियो बुक : भारत 1885 से 1950 (इतिहास पर एक दृष्टि)

 

About Matribhumi Samachar

Check Also

ಪವಿತ್ರ ಪ್ರಕಾಶ್ ಉತ್ಸವದಂದು ಶ್ರೀ ಗುರು ಗೋವಿಂದ ಸಿಂಗ್ ಅವರಿಗೆ ಪ್ರಧಾನಮಂತ್ರಿ ಗೌರವ ನಮನ

ಇಂದು ಪವಿತ್ರ ಪ್ರಕಾಶ್ ಉತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ಗೋವಿಂದ ಸಿಂಗ್ ಅವರಿಗೆ …