Sunday, January 25 2026 | 05:47:25 AM
Breaking News

ಪಿಎಂ-ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ವಿವಿಧ ಘಟಕಗಳ ಅನುಷ್ಠಾನಕ್ಕಾಗಿ ಕಾರ್ಯಾಚರಣಾ ಮಾರ್ಗಸೂಚಿ – ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಬಿಡುಗಡೆ

Connect us on:

ಪ್ರಧಾನಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ನವೀಕರಿಸಬಹುದಾದ ಇಂಧನ ಸೇವಾದಾತ ಕಂಪೆನಿ (RESCO) ಮಾದರಿಗಳು/ ಬಳಕೆ ಆಧಾರಿತ ಒಟ್ಟುಗೂಡಿಸುವಿಕೆ ಮಾದರಿ (ಯುಎಲ್‌ಎ) ಮಾದರಿಗಳಿಗಾಗಿ ‘ಪಾವತಿ ಭದ್ರತಾ ಕಾರ್ಯವಿಧಾನ’ ಮತ್ತು ‘ಕೇಂದ್ರ ಹಣಕಾಸು ನೆರವು’ ಘಟಕದ ಅನುಷ್ಠಾನಕ್ಕಾಗಿ ಯೋಜನಾ ಮಾರ್ಗಸೂಚಿಗಳನ್ನು ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಪ್ರಕಟಿಸಿದೆ.

ಈ ಯೋಜನೆಯು ಗ್ರಾಹಕರಿಗೆ ಮೇಲ್ಛಾವಣಿ ಸೌರ ಸ್ಥಾವರಗಳನ್ನು ಅಳವಡಿಸಿಕೊಳ್ಳಲು ಎರಡು ಪರ್ಯಾಯ ಅನುಷ್ಠಾನ ಮಾದರಿಗಳನ್ನು ನೀಡುತ್ತದೆ: ಮೊದಲನೆಯದು, ರೆಸ್ಕೋ (ನವೀಕರಿಸಬಹುದಾದ ಇಂಧನ ಸೇವಾದಾತ ಕಂಪೆನಿ) ಮಾದರಿ – ಇದರಡಿ ಸೇವಾದಾತ ಕಂಪೆನಿಗಳು ಸೌರ ಮೇಲ್ಛಾವಣಿಗಳ ಅಳವಡಿಕೆಗೆ ಹೂಡಿಕೆ ಮಾಡಲಿದ್ದು, ಗ್ರಾಹಕರು ಅಳವಡಿಕೆ ವೆಚ್ಚವನ್ನು ಭರಿಸದೇ, ಬಳಸುವ ವಿದ್ಯುತ್‌ ಗೆ ಮಾತ್ರ ಪಾವತಿ ಮಾಡಬಹುದಾಗಿರುತ್ತದೆ; ಇನ್ನು ಎರಡನೆಯದು – ಬಳಕೆ ಆಧಾರಿತ ಒಗ್ಗೂಡುವಿಕೆ (ಯುಎಲ್ಎ) ಮಾದರಿ, ಇದರಡಿ ಪ್ರಸರಣಾ ಕಂಪೆನಿ (ಡಿಸ್ಕಾಂ) ಗಳು  ಅಥವಾ ರಾಜ್ಯ ಸ್ವಾಮ್ಯದ ಘಟಕಗಳು ನಿವಾಸಿಗಳ ಪರವಾಗಿ ವೈಯಕ್ತಿಕವಾಗಿ ಅವರ ಮನೆಗಳ ಮೇಲೆ ಸೌರ ಮೇಲ್ಛಾವಣಿ ಯೋಜನೆಯನ್ನು ಅನುಷ್ಠಾನ ಮಾಡಲಿದೆ.

ಈ ಯೋಜನೆ ಅಂಶದಡಿಯಲ್ಲಿ, ವಸತಿ ವಲಯದಲ್ಲಿ ರೆಸ್ಕೋ-ಆಧಾರಿತ ಗ್ರಿಡ್-ಸಂಪರ್ಕಿತ ಮೇಲ್ಛಾವಣಿ ಸೌರ ಮಾದರಿಗಳಲ್ಲಿ ಅಪಾಯ-ಮುಕ್ತ ಹೂಡಿಕೆಗಳಿಗಾಗಿ ಪಾವತಿ ಭದ್ರತಾ ಕಾರ್ಯವಿಧಾನ (PSM) ಗಾಗಿ ₹100 ಕೋಟಿ ಕಾರ್ಪಸ್ ನಿಧಿಯನ್ನು ಮೀಸಲಿಡಲಾಗಿದೆ; ಸಚಿವಾಲಯದ ಸೂಕ್ತ ಅನುಮೋದನೆಯ ನಂತರ ಇತರ ಅನುದಾನಗಳು, ನಿಧಿಗಳು ಮತ್ತು ಬೇರೆ ಬೇರೆ ಮೂಲಗಳಿಂದ ಇದಕ್ಕೆ ಪೂರಕ ನಿಧಿ ಒದಗಿಸಬಹುದಾಗಿದೆ.

ಈ ಮಾರ್ಗಸೂಚಿಗಳು ರಾಷ್ಟ್ರೀಯ ಪೋರ್ಟಲ್ (https://www.pmsuryaghar.gov.in/) ಮೂಲಕ ಗ್ರಾಹಕರು ಕೈಗೊಂಡಿರುವ ಅಸ್ತಿತ್ವದಲ್ಲಿರುವ ಅನುಷ್ಠಾನ ವಿಧಾನಕ್ಕೆ (ಕ್ಯಾಪೆಕ್ಸ್ ಮೋಡ್) ಹೆಚ್ಚುವರಿಯಾಗಿವೆ ಮತ್ತು ಈ ಪರ್ಯಾಯ ಮಾದರಿಗಳು ರಾಷ್ಟ್ರೀಯ ಪೋರ್ಟಲ್ ಆಧಾರಿತ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿರಲಿವೆ ಎಂದು ಸ್ಪಷ್ಟಪಡಿಸಲಾಗಿದೆ.

ಯೋಜನೆಯ ಮಾರ್ಗಸೂಚಿಗಳನ್ನು ಇಲ್ಲಿ ಪಡೆಯಬಹುದು.

About Matribhumi Samachar

Check Also

ಬಿ.ಎಸ್.ಎನ್.ಎಲ್ ನಿಂದ ದೇಶಾದ್ಯಂತ ಎಲ್ಲಾ ವಲಯಗಳಲ್ಲಿ ವಾಯ್ಸ್ ಓವರ್ ವೈಫೈ (VoWiFi) ಸೇವೆ ಪ್ರಾರಂಭ

ಭಾರತದ ಪ್ರಮುಖ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾದಾತ ಸಂಸ್ಥೆಯಾದ ಭಾರತ್ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್), ಹೊಸ ವರ್ಷದಂದು ವೈ-ಫೈ …