Thursday, January 22 2026 | 04:13:56 AM
Breaking News

ಆಧುನೀಕರಣಕ್ಕೆ ದೊಡ್ಡ ಉತ್ತೇಜನ: ಭಾರತೀಯ ರೈಲ್ವೆ 11 ವರ್ಷಗಳಲ್ಲಿ 42,600ಕ್ಕೂ ಹೆಚ್ಚು ಎಲ್‌ ಎಚ್‌ ಬಿ ಬೋಗಿಗಳನ್ನು ತಯಾರಿಸಿದೆ

Connect us on:

ಭಾರತೀಯ ರೈಲ್ವೆಯು ಲಿಂಕ್ ಹಾಫ್‌ ಮನ್ ಬುಷ್ (ಎಲ್‌ ಎಚ್‌ ಬಿ) ಬೋಗಿಗಳ ಉತ್ಪಾದನೆಯಲ್ಲಿ ಸ್ಥಿರವಾಗಿ ಪ್ರಗತಿ ಸಾಧಿಸಿದೆ, ಇವುಗಳನ್ನು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ, ಹೆಚ್ಚು ಆರಾಮದಾಯಕ ಪ್ರಯಾಣ ಮತ್ತು ಉತ್ತಮ ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷ 2025-26 ರಲ್ಲಿ (ನವೆಂಬರ್ 2025 ರವರೆಗೆ), ಒಟ್ಟು 4,224ಕ್ಕೂ ಹೆಚ್ಚು ಎಲ್‌.ಎಚ್‌.ಬಿ ಬೋಗಿಗಳನ್ನು ತಯಾರಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ತಯಾರಿಸಲಾದ 3,590 ಬೋಗಿಗಳಿಗೆ ಹೋಲಿಸಿದರೆ ಇದು ಶೇ.18 ರಷ್ಟು ಹೆಚ್ಚಳವಾಗಿದೆ. ಉತ್ಪಾದನೆಯಲ್ಲಿನ ಈ ಹೆಚ್ಚಳವು ರೈಲ್ವೆ ಘಟಕಗಳಲ್ಲಿ ಉತ್ಪಾದನಾ ಸಾಮರ್ಥ್ಯದ ನಿರಂತರ ಬಲವರ್ಧನೆ ಮತ್ತು ಸುಧಾರಿತ ಉತ್ಪಾದನಾ ಯೋಜನೆಯನ್ನು ಪ್ರತಿಬಿಂಬಿಸುತ್ತದೆ.

ಈ ಅವಧಿಯಲ್ಲಿ ಕಾರ್ಖಾನೆವಾರು ಕಾರ್ಯಕ್ಷಮತೆಯ ಪ್ರಕಾರ, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್), ಇದು 1,659 ಎಲ್‌ ಎಚ್‌ ಬಿ ಬೋಗಿಗಳನ್ನು ತಯಾರಿಸಿದೆ, ನಂತರ ರಾಯ್ ಬರೇಲಿಯ ಮಾಡರ್ನ್ ಕೋಚ್ ಫ್ಯಾಕ್ಟರಿ (ಎಂಸಿಎಫ್) 1,234 ಬೋಗಿಗಳು ಮತ್ತು ಕಪುರ್ತಲಾ ರೈಲು ಕೋಚ್ ಫ್ಯಾಕ್ಟರಿ (ಆರ್‌ ಸಿ ಎಫ್)  1,331 ಬೋಗಿಗಳನ್ನು ತಯಾರಿಸಿವೆ. ಇವು ಒಟ್ಟಾಗಿ ಎಲ್‌ ಎಚ್‌ ಬಿ ಬೋಗಿ ಉತ್ಪಾದನೆಯಲ್ಲಿ ಒಟ್ಟಾರೆ ಬೆಳವಣಿಗೆಗೆ ಕಾರಣವಾಗಿವೆ.

ದೀರ್ಘಾವಧಿಯ ಹೋಲಿಕೆಗಳು ಕಳೆದ ಕೆಲವು ವರ್ಷಗಳಲ್ಲಿ ಸಾಧಿಸಿದ ಅಗಾಧ ಪ್ರಗತಿಯನ್ನು ಬಹಿರಂಗಪಡಿಸುತ್ತವೆ. 2014 ಮತ್ತು 2025 ರ ನಡುವೆ, ಭಾರತೀಯ ರೈಲ್ವೆ 42,600 ಕ್ಕೂ ಹೆಚ್ಚು ಎಲ್‌ ಎಚ್‌ ಬಿ ಬೋಗಿಗಳನ್ನು ಉತ್ಪಾದಿಸಿವೆ, ಇದು 2004 ಮತ್ತು 2014 ರ ನಡುವೆ ತಯಾರಿಸಲಾದ 2,300 ಬೋಗಿಗಳಿಗಿಂತ 18 ಪಟ್ಟು ಹೆಚ್ಚಾಗಿದೆ. ಈ ಹೆಚ್ಚಳವು ಸುಧಾರಿತ ಸುರಕ್ಷತಾ ಮಾನದಂಡಗಳು ಮತ್ತು ಕಡಿಮೆ ನಿರ್ವಹಣಾ ಅವಶ್ಯಕತೆಗಳೊಂದಿಗೆ ಎಲ್‌ ಎಚ್‌ ಬಿ ಬೋಗಿಗಳ ಹೆಚ್ಚಿದ ಅಳವಡಿಕೆಯ ಮೂಲಕ ಪ್ರಯಾಣಿಕರ ರೋಲಿಂಗ್ ಸ್ಟಾಕ್ ಅನ್ನು ಆಧುನೀಕರಿಸುವತ್ತ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತದೆ.

ಭಾರತೀಯ ರೈಲ್ವೆಯು ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಮೂಲಕ ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ‘ಆತ್ಮನಿರ್ಭರ ಭಾರತ’ ಮತ್ತು ‘ಮೇಕ್ ಇನ್ ಇಂಡಿಯಾ’ ಉಪಕ್ರಮಗಳ ಗುರಿಗಳಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತಿದೆ. ದೇಶದ ಬೆಳೆಯುತ್ತಿರುವ ಚಲನಶೀಲತೆಯ ಅವಶ್ಯಕತೆಗಳನ್ನು ಪೂರೈಸಲು ಮತ್ತು ಪ್ರಯಾಣಿಕರಿಗೆ ಸುರಕ್ಷಿತ, ಸುಗಮ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವಗಳನ್ನು ಒದಗಿಸಲು ಸಂಸ್ಥೆಯು ತನ್ನ ಉತ್ಪಾದನಾ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುವತ್ತ ಗಮನಹರಿಸಿದೆ.

About Matribhumi Samachar

Check Also

ಭಾರತದ ರಾಷ್ಟ್ರಪತಿ ಒಡಿಶಾದ ರಾಯರಂಗಪುರದಲ್ಲಿ # ಸ್ಕಿಲ್ ದ ನೇಶನ್ ಎ.ಐ. ಸವಾಲಿಗೆ ಚಾಲನೆ ನೀಡಿದರು ಮತ್ತು ಇಗ್ನೋ ಪ್ರಾದೇಶಿಕ ಕೇಂದ್ರ ಹಾಗು ಕೌಶಲ್ಯ ಕೇಂದ್ರವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು (ಜನವರಿ 1, 2026) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು …