ನಾಗಾಲ್ಯಾಂಡ್ ನ ಹಾರ್ನ್ ಬಿಲ್ ಉತ್ಸವದ ಉತ್ಸಾಹಭರಿತ ಮನೋಭಾವವನ್ನು ಶ್ಲಾಘಿಸಿದ್ದಾರೆ, ಇದು ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಅದರ ಬುಡಕಟ್ಟು ಪರಂಪರೆಯ ಶಾಶ್ವತ ಚೈತನ್ಯದ ಪ್ರಬಲ ಪ್ರತಿಬಿಂಬವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಬಣ್ಣಿಸಿದ್ದಾರೆ.
ಇಂದು ಈಶಾನ್ಯವು ಹೊಸ, ಆತ್ಮವಿಶ್ವಾಸದ ಭಾರತದ ಮುಖವನ್ನು ಪ್ರತಿನಿಧಿಸುತ್ತದೆ ಎಂದು ನಾಗಾಲ್ಯಾಂಡ್ ನ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ರಾಜ್ಯವು ಕೇವಲ ಉತ್ಸವವನ್ನು ಆಯೋಜಿಸುವುದಿಲ್ಲ; ಅದು ಆಚರಣೆಯನ್ನು ಸ್ವತಃ ಸಾಕಾರಗೊಳಿಸುತ್ತದೆ, ಹಬ್ಬಗಳ ನಾಡು ಎಂಬ ಹೆಮ್ಮೆಯ ಶೀರ್ಷಿಕೆಯನ್ನು ನಿಜವಾಗಿಯೂ ಸಮರ್ಥಿಸುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ಎಕ್ಸ್ ತಾಣದ ಸಂದೇಶಕ್ಕೆ ಸ್ಪಂದಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ;
“ಈ ಆಕರ್ಷಕ ಲೇಖನದಲ್ಲಿ, ಕೇಂದ್ರ ಸಚಿವರಾದ ಶ್ರೀ @JM_Sindia ಅವರು ನಾಗಾಲ್ಯಾಂಡ್ ನ ಹಾರ್ನ್ ಬಿಲ್ ಉತ್ಸವವನ್ನು ಮಾನವ ಚೈತನ್ಯದ ಕೆಲಿಡೋಸ್ಕೋಪ್ ಮತ್ತು ಪ್ರಾಚೀನ ಮತ್ತು ಸಮಕಾಲೀನತೆಯ ಅದ್ಭುತ ಸಂಗಮ ಎಂದು ಬಣ್ಣಿಸಿದ್ದಾರೆ. ಈಶಾನ್ಯ ಭಾರತವು ಬೆಳಗಿದಾಗ ಮಾತ್ರ ನಮ್ಮ ದೇಶವು ಉದಯಿಸುತ್ತದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಹೊಸ, ಆತ್ಮವಿಶ್ವಾಸದ ಭಾರತದ ಮುಖವಾಗಿ ಈಶಾನ್ಯವನ್ನು ಎತ್ತಿ ತೋರಿಸುತ್ತಾ, ನಾಗಾಲ್ಯಾಂಡ್ ಹಬ್ಬಗಳನ್ನು ಕೇವಲ ಆಚರಿಸುವುದಿಲ್ಲ – ಅದು ಆಚರಣೆಯನ್ನು ಸಾಂಸ್ಕೃತಿಕವಾಗಿ ಸಾಕಾರಗೊಳಿಸುತ್ತದೆ, ಅದನ್ನು ಹಬ್ಬಗಳ ನಾಡು ಎಂದು ಏಕೆ ಕರೆಯಲಾಗುತ್ತದೆ ಎಂಬುದನ್ನು ನಿಜವಾಗಿಯೂ ಸಮರ್ಥಿಸುತ್ತದೆ ಎಂದು ಸಚಿವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.”
Matribhumi Samachar Kannad

