Thursday, February 05 2026 | 10:22:21 PM
Breaking News

ಸ್ವದೇಶ್ ದರ್ಶನ್ 2.0 ಮತ್ತು ಪ್ರಸಾದ್‌ ಯೋಜನೆಗಳ ಅಡಿಯಲ್ಲಿ ಕರ್ನಾಟಕದ ಹಂಪಿ, ಮೈಸೂರು, ಬೀದರ್‌ ಮತ್ತಿತರ ತಾಣಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮಂಜೂರಾತಿ: ಕೇಂದ್ರ ಸಚಿವರಾದ ಶ್ರೀ ಗಜೇಂದ್ರಸಿಂಗ್‌ ಶೆಖಾವತ್

Connect us on:

ಸ್ವದೇಶ್ ದರ್ಶನ್ 2.0 ಮತ್ತು ಪ್ರಸಾದ್‌ ಯೋಜನೆಗಳ ಅಡಿಯಲ್ಲಿ ಕರ್ನಾಟಕದ ವಿಶ್ವವಿಖ್ಯಾತ ಹಂಪಿ, ಪಾರಂಪರಿಕ ನಗರಿ ಮೈಸೂರು, ಬೀದರ್‌ ಮತ್ತಿತರ ತಾಣಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಂಜೂರು ಮಾಡಲಾಗಿದೆ. ಈ ತಾಣಗಳ ಅಭಿವೃದ್ದಿಗಾಗಿ ಸ್ವದೇಶ್ ದರ್ಶನ್ 2.0 ಅಡಿಯಲ್ಲಿ 46.84 ಕೋಟಿ ರೂ.ಗಳು, ಪ್ರಸಾದ್‌ ಯೋಜನೆಯ ಅಡಿಯಲ್ಲಿ 86 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರಸಿಂಗ್‌ ಶೆಖಾವತ್‌ ತಿಳಿಸಿದ್ದಾರೆ.

ಕರ್ನಾಟಕದ ಶ್ರೀನಿವಾಸ ಸಾಗರ ಜಲಾಶಯ, ಯೋಗನಂದೀಶ್ವರ ದೇವಸ್ಥಾನ, ನಂದಿ ಬೆಟ್ಟ, ಸ್ಕಂದಗಿರಿ ಬೆಟ್ಟ ಮತ್ತು ರಂಗಸ್ಥಳಗಳ ಅಭಿವೃದ್ಧಿಗೆ ಯಾವುದೇ ಪ್ರಸ್ತಾವನೆಗಳು ಪರಿಗಣನೆಯಲ್ಲಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಯೋಜನಾ ಪ್ರಸ್ತಾವನೆಗಳನ್ನು ಸ್ವೀಕರಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ಸಚಿವಾಲಯದ ಯೋಜನೆಗಳ ಅಡಿಯಲ್ಲಿ ಶ್ರೀನಿವಾಸ ಸಾಗರ ಜಲಾಶಯ, ಯೋಗನಂದೀಶ್ವರ ದೇವಸ್ಥಾನ, ನಂದಿ ಬೆಟ್ಟಗಳು, ಸ್ಕಂದಗಿರಿ ಬೆಟ್ಟಗಳು ಮತ್ತು ರಂಗಸ್ಥಳಗಳ ಅಭಿವೃದ್ಧಿಗೆ ಯಾವುದೇ ಪ್ರಸ್ತಾವನೆಗಳು ಪರಿಗಣನೆಯಲ್ಲಿಲ್ಲ, ರಾಜ್ಯ ಪ್ರವಾಸೋದ್ಯಮ ನೀತಿಯ ಅಡಿಯಲ್ಲಿ ಪಟ್ಟಿ ಮಾಡುವುದು ಸೇರಿದಂತೆ ತಾಣಗಳ ಗುರುತಿಸುವಿಕೆ, ಅಭಿವೃದ್ಧಿ ಮತ್ತು ಪ್ರಚಾರವನ್ನು ಪ್ರಾಥಮಿಕವಾಗಿ ಆಯಾ ರಾಜ್ಯ ಸರ್ಕಾರವು ನಿರ್ವಹಿಸುತ್ತದೆ.

ಆದಾಗ್ಯೂ, ಪ್ರವಾಸೋದ್ಯಮ ಸಚಿವಾಲಯವು ತನ್ನ ಕೇಂದ್ರ ವಲಯದ ಯೋಜನೆಗಳಾದ ‘ಸ್ವದೇಶ್ ದರ್ಶನ್ (ಎಸ್‌.ಡಿ.)’, ‘ಸ್ವದೇಶ್ ದರ್ಶನ್ 2.0 (ಎಸ್‌.ಡಿ. 2.0)’, ‘ಸವಾಲು ಆಧಾರಿತ ಗಮ್ಯಸ್ಥಾನ ಅಭಿವೃದ್ಧಿ (ಸಿ.ಬಿ.ಡಿ.ಡಿ), ಸ್ವದೇಶ್ ದರ್ಶನ್ ಯೋಜನೆಯ ಉಪ-ಯೋಜನೆ ಮತ್ತು ‘ತೀರ್ಥಕ್ಷೇತ್ರ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆ ವೃದ್ಧಿ ಅಭಿಯಾನ (ಪ್ರಸಾದ್‌)’ ಮೂಲಕ ದೇಶದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಯ ಪ್ರಯತ್ನಗಳನ್ನು ಬೆಂಬಲಿಸುತ್ತೆ. ಯೋಜನೆಯ ಮಾರ್ಗಸೂಚಿಗಳೊಂದಿಗೆ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸಿನ ನೆರವು ನೀಡುವುದು, ಕಾಲಕಾಲಕ್ಕೆ ಅವರಿಂದ ಯೋಜನೆಯ ಪ್ರಸ್ತಾವನೆಗಳನ್ನು ಸ್ವೀಕರಿಸುವುದು, ನಿಧಿಯ ಲಭ್ಯತೆ ಇತ್ಯಾದಿಗಳನ್ನು ಇದು ಒಳಗೊಂಡಿದೆ. ಈ ಯೋಜನೆಗಳ ಅಡಿಯಲ್ಲಿ ಮಂಜೂರು ಮಾಡಲಾದ ಯೋಜನೆಗಳು ಐತಿಹಾಸಿಕ ತಾಣಗಳು, ಧಾರ್ಮಿಕ ಪ್ರವಾಸೋದ್ಯಮ, ಪರಿಸರ ಮತ್ತು ಗುಡ್ಡಗಾಡು ಪ್ರವಾಸೋದ್ಯಮ ಇತ್ಯಾದಿಗಳಿಗೆ ಸಂಬಂಧಿಸಿದವುಗಳನ್ನು ಒಳಗೊಂಡಿವೆ ಮತ್ತು ಮಂಜೂರು ಮಾಡಲಾದ ಯೋಜನೆಗಳ ಅಡಿಯಲ್ಲಿ ಒಳಗೊಂಡಿರುವ ಘಟಕಗಳು ಯೋಜನೆಯ ಅಗತ್ಯಕ್ಕೆ ಅನುಗುಣವಾಗಿ ಬದಲಾಗುತ್ತವೆ ಮತ್ತು ನೈರ್ಮಲ್ಯ ಸೌಲಭ್ಯಗಳು, ಸಂಕೇತಗಳು, ಕೊನೆಯ ಮೈಲಿ ಸಂಪರ್ಕ, ವ್ಯಾಖ್ಯಾನ ಕೇಂದ್ರಗಳು, ಮಾಹಿತಿ ಕಿಯೋಸ್ಕ್‌ ಗಳು, ತಾಣ ಸುಧಾರಣೆಗಳು, ಪಾರ್ಕಿಂಗ್ ಇತ್ಯಾದಿಗಳನ್ನು ಒಳಗೊಂಡಿವೆ.

ಕರ್ನಾಟಕ ರಾಜ್ಯದಲ್ಲಿ ಸ್ವದೇಶ್ ದರ್ಶನ್ 2.0 ಯೋಜನೆಯಡಿಯಲ್ಲಿ ಮಂಜೂರಾದ ಯೋಜನೆಯ ವಿವರಗಳು:

ಕ್ರಮ ಸಂಖ್ಯೆ ಮಂಜೂರು ಮಾಡಿದ ವರ್ಷ ಗಮ್ಯಸ್ಥಾನ ಕೆಲಸದ ಹೆಸರು ಮಂಜೂರು ಮಾಡಿದ ಮೊತ್ತ (ಕೋಟಿ ರೂ.ಗಳಲ್ಲಿ)
1 2023-24 ಹಂಪಿ ‘ಪ್ರಯಾಣಿಕರ ಸ್ಥಳಗಳ’ ಸ್ಥಾಪನೆ 25.64
2 2023-24 ಮೈಸೂರು ಟೋಂಗಾ ಸವಾರಿ ಪರಂಪರೆಯ ಅನುಭವ ವಲಯ 2.72
4 2023-24 ಮೈಸೂರು ಪರಿಸರ ಅನುಭವ ವಲಯ 18.48

ಕರ್ನಾಟಕ ರಾಜ್ಯದಲ್ಲಿ ತೀರ್ಥಕ್ಷೇತ್ರ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆ ವೃದ್ಧಿ ಅಭಿಯಾನ (ಪ್ರಸಾದ್‌) ಯೋಜನೆಯಡಿ ಮಂಜೂರಾದ ಯೋಜನೆಯ ವಿವರಗಳು:

ಕ್ರ.ಸಂ. ಯೋಜನೆಯ ಹೆಸರು ಮಂಜೂರಾತಿ ವರ್ಷ ಮಂಜೂರಾತಿ ಮೊತ್ತ (ಕೋಟಿ ರೂ.ಗಳಲ್ಲಿ
1 ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದಲ್ಲಿ ಯಾತ್ರಾ ಸೌಲಭ್ಯಗಳ ಅಭಿವೃದ್ಧಿ 2023-24 45.38
2 ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ 2024-25 18.37
3 ಬೀದರ್ ಜಿಲ್ಲೆಯ ಪಾಪನಾಶ ದೇವಾಲಯದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ. 2024-25 22.25

ಲೋಕಸಭೆಯಲ್ಲಿ ಡಾ. ಕೆ ಸುಧಾಕರ್‌ ಅವರ ಪ್ರಶ್ನೆಗೆ ಒದಗಿಸಿರುವ ಲಿಖಿತ ಉತ್ತರದಲ್ಲಿ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರಸಿಂಗ್‌ ಶೆಖಾವತ್‌ ಈ ಮಾಹಿತಿ ನೀಡಿದ್ದಾರೆ.

About Matribhumi Samachar

Check Also

ಹುಬ್ಬಳ್ಳಿಯಲ್ಲಿ ಹೊಸ ಯುಐಡಿಎಐ ಆಧಾರ್ ಸೇವಾ ಕೇಂದ್ರದ ಉದ್ಘಾಟನೆ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು 29 ಡಿಸೆಂಬರ್ 2025ರಂದು ಹುಬ್ಬಳ್ಳಿಯ ಕೇಶವಪುರದಲ್ಲಿ ಹೊಸ ಯುಐಡಿಎಐ ಆಧಾರ್ ಸೇವಾ ಕೇಂದ್ರವನ್ನು ಉದ್ಘಾಟಿಸಿದೆ. …