Tuesday, July 28 2026 | 10:59:02 PM
Breaking News

ಪ್ರಧಾನಮಂತ್ರಿ ಅವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ – III ಗೌರವ ಪ್ರದಾನ

Connect us on:

ಸೈಪ್ರಸ್ ಅಧ್ಯಕ್ಷರಾದ ಮಾನ್ಯ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸೈಪ್ರಸ್ ಗೌರವವಾದ – “ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III” ಅನ್ನು ಪ್ರದಾನ ಮಾಡಿದರು.

1.4 ಶತಕೋಟಿ ಭಾರತೀಯರ ಪರವಾಗಿ ಈ ಗೌರವವನ್ನು ಸ್ವೀಕರಿಸಿದ ಪ್ರಧಾನಮಂತ್ರಿಯವರು, ಅಲ್ಲಿನ ಅಧ್ಯಕ್ಷರು, ಸರ್ಕಾರ ಮತ್ತು ಸೈಪ್ರಸ್ ಜನರಿಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತ ಮತ್ತು ಸೈಪ್ರಸ್ ನಡುವಿನ ಹಂಚಿತ ಮೌಲ್ಯಗಳು ಮತ್ತು ಪರಸ್ಪರ ನಂಬಿಕೆಯ ಮೇಲೆ ನಿರ್ಮಿಸಲ್ಪಟ್ಟ ದೀರ್ಘಕಾಲೀನ ಆತ್ಮೀಯ ಸಂಬಂಧಗಳಿಗೆ ಅವರು ಈ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ, ಜಾಗತಿಕ ಶಾಂತಿ ಮತ್ತು ಪ್ರಗತಿಗಾಗಿ ಭಾರತದ ದೃಷ್ಟಿಕೋನವಾದ “ವಸುಧೈವ ಕುಟುಂಬಕಂ” ಅಥವಾ “ಜಗತ್ತು ಒಂದು ಕುಟುಂಬ” ಎಂಬ ಭಾರತದ ಪ್ರಾಚೀನ ತತ್ವಶಾಸ್ತ್ರವನ್ನು ಈ ಪ್ರಶಸ್ತಿಯು ಗುರುತಿಸಿದೆ ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಸೈಪ್ರಸ್ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವ ಮತ್ತು ವೈವಿಧ್ಯಮಯ ವಲಯಗಳಿಗೆ ವಿಸ್ತರಿಸುವ ನವ ಬದ್ಧತೆಯಾಗಿ ಪ್ರಧಾನಮಂತ್ರಿ ಅವರು ಗೌರವವನ್ನು ಸ್ವೀಕರಿಸಿದ್ದಾರೆ. ಈ ಪ್ರಶಸ್ತಿಯು ಶಾಂತಿ, ಭದ್ರತೆ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸಮೃದ್ಧಿಗೆ ಉಭಯ ದೇಶಗಳ ಅಚಲ ಬದ್ಧತೆಯ ಸಂಕೇತವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

About Matribhumi Samachar

Check Also

ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ 2026: ಭಾರತೀಯ ಆರ್ಥಿಕತೆಯ ಹೊಸ ಯುಗಾರಂಭ!

ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ (UK) ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿ ಅತ್ಯಂತ ಐತಿಹಾಸಿಕ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ. ಉಭಯ ದೇಶಗಳ ನಡುವಿನ …