ʻಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2025ʼ(PMRBP) ಪ್ರಶಸ್ತಿಗಳಿಗೆ ನಾಮನಿರ್ದೇಶನಗಳಿಗಾಗಿ ಕರೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪುನರುಚ್ಚರಿಸುತ್ತಿದೆ. ಪ್ರಶಸ್ತಿಗಾಗಿ ಅರ್ಜಿಗಳ ಪಡೆಯುವಿಕೆ ಏಪ್ರಿಲ್ 1, 2025 ರಂದು ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2025ಕ್ಕೆ ನಿಗದಿಪಡಿಸಲಾಗಿದೆ. ʻಪಿಎಂಆರ್‌ಬಿಪಿʼ ಪ್ರಶಸ್ತಿಗೆ ಎಲ್ಲಾ ನಾಮನಿರ್ದೇಶನಗಳನ್ನು https://awards.gov.in ಆನ್‌ಲೈನ್ ಪೋರ್ಟಲ್ ಮೂಲಕ ಸಲ್ಲಿಸಬೇಕು.
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯು ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸಿದ 5 ರಿಂದ 18 ವರ್ಷ ವಯಸ್ಸಿನ ಮಕ್ಕಳ ಅಸಾಧಾರಣ ಸಾಧನೆಗಳನ್ನು ಆಚರಿಸಲು ಒಂದು ವಿಶಿಷ್ಟ ಮನ್ನಣೆಯಾಗಿದೆ. ಕಠಿಣ ಸಂದರ್ಭಗಳಲ್ಲಿಯೂ ಸಹ ತೀವ್ರ ಮಟ್ಟದ ಶೌರ್ಯವನ್ನು ಪ್ರದರ್ಶಿಸಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಯಾವುದೇ ನಾಗರಿಕರು, ಶಾಲೆ, ಸಂಸ್ಥೆಯು ಅರ್ಹರೆಂದು ಭಾವಿಸುವ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಬಹುದು. ಮಕ್ಕಳು ಸ್ವಯಂ-ನಾಮನಿರ್ದೇಶನದ ಮೂಲಕವೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಪ್ರಕ್ರಿಯೆಯ ವಿವರಗಳು ಈ ಕೆಳಗಿನಂತಿವೆ:
- ಕೊನೆಯ ದಿನಾಂಕ: 31 ಜುಲೈ 2025
- ಮೋಡ್: ಆನ್ಲೈನ್ ನಲ್ಲಿ ಮಾತ್ರ
- ಪೋರ್ಟಲ್: https://awards.gov.in
ಅರ್ಜಿದಾರರು ಪ್ರಾಥಮಿಕ ವೈಯಕ್ತಿಕ ವಿವರಗಳು ಮತ್ತು ಪ್ರಶಸ್ತಿಯ ವರ್ಗವನ್ನು ಭರ್ತಿ ಮಾಡಬೇಕಾಗುತ್ತದೆ, ನಂತರ ಇತ್ತೀಚಿನ ಭಾವಚಿತ್ರ ಮತ್ತು ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಸಾಧನೆ ಮತ್ತು ಅದರ ಪ್ರಭಾವದ ಬಗ್ಗೆ 500 ಪದಗಳವರೆಗೆ ಬರಹವನ್ನು ಸಹ ಸಲ್ಲಿಸಬೇಕಾಗುತ್ತದೆ.
ಶಾಲೆಗಳು, ಯುವಕರ ಸಂಘಗಳು, ಸರ್ಕಾರೇತರ ಸಂಸ್ಥೆಗಳು, ಪಂಚಾಯತ್ ಗಳು, ವ್ಯಕ್ತಿಗಳು ಮತ್ತು ಇತರರು ಈ ಕೊನೆಯ ತಿಂಗಳನ್ನು ಸಂಭಾವ್ಯ ನಾಮನಿರ್ದೇಶಿತರನ್ನು ಗುರುತಿಸಲು ಮತ್ತು ಬೆಂಬಲಿಸಲು ಬಳಸಿಕೊಳ್ಳುವಂತೆ ಸಚಿವಾಲಯವು ಪ್ರೋತ್ಸಾಹಿಸುತ್ತದೆ. ಭಾರತದ ಅತ್ಯಂತ ಕಿರಿಯ ಪ್ರಯತ್ನಶೀಲರಿಗೆ ಅವರು ಅರ್ಹವಾದ ಮನ್ನಣೆಯನ್ನು ನೀಡುವುದನ್ನು ನಾವೆಲ್ಲರೂ ಒಟ್ಟಾಗಿ ಖಚಿತಪಡಿಸಿಕೊಳ್ಳೋಣ.
भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं
ऑडियो बुक : भारत 1885 से 1950 (इतिहास पर एक दृष्टि)
Matribhumi Samachar Kannad

