Saturday, January 17 2026 | 04:47:51 AM
Breaking News

ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಬೆಂಗಳೂರು ಟೆಕ್ ಶೃಂಗಸಭೆ 2025

Connect us on:

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ಸ್ಥಾಪಿಸಲಾದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌.ಟಿ.ಪಿ.ಐ), ಕರ್ನಾಟಕ ಸರ್ಕಾರದೊಂದಿಗೆ ಸೇರಿ ಬೆಂಗಳೂರು ಟೆಕ್ ಶೃಂಗಸಭೆ 2025ರ (ಬಿ.ಟಿ.ಎಸ್‌-2025) 28ನೇ ಆವೃತ್ತಿಯನ್ನು ಜಂಟಿಯಾಗಿ ಆಯೋಜಿಸುತ್ತಿದೆ. ಈ ಕಾರ್ಯಕ್ರಮವು ನವೆಂಬರ್ 18 ರಿಂದ 20, 2025ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಎಸ್‌.ಟಿ.ಪಿ.ಐ ಬೆಂಗಳೂರು ಟೆಕ್ ಶೃಂಗಸಭೆ 2025ರ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅವುಗಳಲ್ಲಿ ಪ್ರಮುಖ ಕಾರ್ಯಕ್ರಮಗಳು ಈ ಕೆಳಗಿನಂತಿವೆ:

1. ಎಸ್‌.ಟಿ.ಪಿ.ಐ ಸಯುಜ್ ಸ್ಟಾರ್ಟ್‌ಅಪ್ ಪೆವಿಲಿಯನ್

ಭಾರತದಾದ್ಯಂತ ಎಸ್‌.ಟಿ.ಪಿ.ಐ ಮತ್ತು ಎಕ್ಸಲೆನ್ಸ್ ಕೇಂದ್ರಗಳ ಸುಮಾರು 150 ಸ್ಟಾರ್ಟ್‌ಅಪ್‌ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲಿವೆ. ಈ ಸ್ಟಾರ್ಟ್‌ಅಪ್‌ಗಳು ಎಸ್‌.ಟಿ.ಪಿ.ಐ ಸಯುಜ್ ವೇದಿಕೆಯ ಅಡಿಯಲ್ಲಿವೆ. ಇದು ಭಾರತೀಯ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗಾಗಿ ರೂಪಿಸಲಾದ ಕೃತಕ ಬುದ್ಧಿಮತ್ತೆ ಚಾಲಿತ ವೇದಿಕೆಯಾಗಿದ್ದು, ಸ್ಟಾರ್ಟ್‌ಅಪ್‌ಗಳು, ಮಾರ್ಗದರ್ಶಕರು, ಹೂಡಿಕೆದಾರರು, ಆರಂಭಿಕ ಬೆಂಬಲಿಗರು ಮತ್ತು ಇತರ ಪಾಲುದಾರರಿಗೆ ಸಂಪರ್ಕ ಸಾಧಿಸಲು ಮತ್ತು ಸಂಪನ್ಮೂಲಗಳನ್ನು ಒದಗಿಸಲು ಒಂದು ಡಿಜಿಟಲ್ ಇಂಟರ್‌ಫೇಸ್ ಅಡಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

2. ಭಾರತ-ಎ.ಐ. ಪ್ರಭಾವಿತ ಶೃಂಗಸಭೆ 2026ರ ಪೂರ್ವ ಕಾರ್ಯಕ್ರಮ 

ಕೃತಕ ಬುದ್ಧಿಮತ್ತೆಯ ನಾವೀನ್ಯತೆ ಕುರಿತು ಚರ್ಚೆ ಮತ್ತು ಸಹಯೋಗಗಳನ್ನು ಉತ್ತೇಜಿಸುವ ಗುರಿ ಹೊಂದಿರುವ ಭಾರತ-ಎ.ಐ. ಪ್ರಭಾವಿತ ಶೃಂಗಸಭೆ 2026ರ ಪೂರ್ವ ಕಾರ್ಯಕ್ರಮವನ್ನು ಎಸ್‌.ಟಿ.ಪಿ.ಐ ಆಯೋಜಿಸುತ್ತಿದೆ. ಭಾರತದ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಪ್ರಮುಖ ಸಹಾಯಕನಾಗಿ, ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್), ರಕ್ಷಣೆ ಮತ್ತು ಭದ್ರತೆ, ಸುಸ್ಥಿರತೆ, ಎಂ.ಎಸ್‌.ಎಂ.ಇ ಗಳು ಮತ್ತು ಕೈಗಾರಿಕೆ 4.0 ಮುಂತಾದ ವಲಯಗಳಾದ್ಯಂತ ಎ.ಐನಿಂದ ಉದ್ಭವಿಸುವ ಅವಕಾಶಗಳು, ಸವಾಲುಗಳು ಮತ್ತು ಬಳಕೆಯ ಸಂದರ್ಭಗಳ ಕುರಿತು ಚರ್ಚಿಸಲು ಎಸ್‌.ಟಿ.ಪಿ.ಐ ಡೊಮೇನ್ ತಜ್ಞರು, ಉದ್ಯಮದ ನಾಯಕರು, ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧಕರನ್ನು ಒಳಗೊಂಡ ಗೋಷ್ಠಿಗಳನ್ನು ಆಯೋಜಿಸಿದೆ.

3. ಎಸ್‌.ಟಿ.ಪಿ.ಐ ಹೂಡಿಕೆದಾರರ ಸಂಪರ್ಕ ಸಭೆ 

ಎಸ್‌.ಟಿ.ಪಿ.ಐ ಎಕ್ಸಲೆನ್ಸ್‍ ಕೇಂದ್ರಗಳ ಆಯ್ದ ಸ್ಟಾರ್ಟ್‌ಅಪ್‌ಗಳಿಗಾಗಿ ಪ್ರಮುಖ ಹೂಡಿಕೆದಾರರು, ಸಾಹಸೋದ್ಯಮ ಬಂಡವಾಳಶಾಹಿಗಳು ಮತ್ತು ನಿಧಿ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳಲು ಒಂದು ಮೀಸಲಾದ ವೇದಿಕೆಯನ್ನು ಒದಗಿಸಲಾಗಿದೆ. ಇದು ಸಹಯೋಗ ಮತ್ತು ಹೂಡಿಕೆ ಅವಕಾಶಗಳನ್ನು ಉತ್ತೇಜಿಸುತ್ತದೆ.

4. 2024-2025ನೇ ಸಾಲಿನ ಎಸ್‌.ಟಿ.ಪಿ.ಐ ಮಾಹಿತಿ ತಂತ್ರಜ್ಞಾನ ರಫ್ತು ಪ್ರಶಸ್ತಿಗಳು

ಕಳೆದ ಹಲವು ವರ್ಷಗಳಿಂದ, ಎಸ್‌.ಟಿ.ಪಿ.ಐ ಐ.ಟಿ. ರಫ್ತು ಪ್ರಶಸ್ತಿಗಳು ಐ.ಟಿ./ಐ.ಟಿ.ಇ.ಎಸ್/ಇ.ಎಸ್‌.ಡಿ.ಎಂ ಉದ್ಯಮಕ್ಕೆ ಅತ್ಯಂತ ಪ್ರತಿಷ್ಠಿತ ಮನ್ನಣೆಗಳಲ್ಲಿ ಒಂದಾಗಿವೆ. ಅದರಂತೆ, ನವೆಂಬರ್ 19, 2025 ರಂದು ನಡೆಯಲಿರುವ ‘ ಎಸ್‌.ಟಿ.ಪಿ.ಐ ಐ.ಟಿ. ರಫ್ತು ಪ್ರಶಸ್ತಿಗಳು 2025 ಸಮಾರಂಭ’ದಲ್ಲಿ ವಿವಿಧ ಪ್ರಶಸ್ತಿ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ಕಂಪನಿಗಳನ್ನು ಗೌರವಿಸಲಾಗುವುದು.

About Matribhumi Samachar

Check Also

ಹುಬ್ಬಳ್ಳಿಯಲ್ಲಿ ಹೊಸ ಯುಐಡಿಎಐ ಆಧಾರ್ ಸೇವಾ ಕೇಂದ್ರದ ಉದ್ಘಾಟನೆ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು 29 ಡಿಸೆಂಬರ್ 2025ರಂದು ಹುಬ್ಬಳ್ಳಿಯ ಕೇಶವಪುರದಲ್ಲಿ ಹೊಸ ಯುಐಡಿಎಐ ಆಧಾರ್ ಸೇವಾ ಕೇಂದ್ರವನ್ನು ಉದ್ಘಾಟಿಸಿದೆ. …