Sunday, December 21 2025 | 03:39:39 PM
Breaking News

ಕಳೆದ ಹತ್ತು ವರ್ಷಗಳಲ್ಲಿ ಭಾರತವು 2,361 ಮೆಗಾವ್ಯಾಟ್ ಜೈವಿಕ ಇಂಧನ ಸಾಮರ್ಥ್ಯ, 228 ಮೆಗಾವ್ಯಾಟ್ ತ್ಯಾಜ್ಯದಿಂದ ಇಂಧನ ಉತ್ಪಾದನೆ ಸಾಮರ್ಥ್ಯ ಮತ್ತು 2.88 ಲಕ್ಷ ಜೈವಿಕ ಅನಿಲ ಸ್ಥಾವರಗಳನ್ನು ತನ್ನ ಇಂಧನ ಉತ್ಪಾದನೆಗೆ ಸೇರ್ಪಡೆ ಮಾಡಿದೆ

Connect us on:

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು 2022-23ರಿಂದ 2025.26ರ ಅವಧಿಗೆ 998 ಕೋಟಿ ರೂ.ಗಳ ಆಯವ್ಯಯ ಅನುದಾನದೊಂದಿಗೆ 02.11.2022 ರಂದು ಅಧಿಸೂಚಿಸಲಾದ ʻರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮʼ (ಎನ್‌ಬಿಪಿ)ಹಂತ -1ರ ಅಡಿಯಲ್ಲಿ ದೇಶದಲ್ಲಿ ಜೈವಿಕ ಇಂಧನ ಯೋಜನೆಗಳ ಸ್ಥಾಪನೆಯನ್ನು ಬೆಂಬಲಿಸುತ್ತದೆ. ಈ ನಿಟ್ಟಿನಲ್ಲಿ ಒದಗಿಸಲಾದ ʻಕೇಂದ್ರ ಹಣಕಾಸು ನೆರವುʼ(ಸಿಎಫ್ಎ) ವಿವರಗಳನ್ನು ಅನುಬಂಧ-I ರಲ್ಲಿ ನೀಡಲಾಗಿದೆ.

ಕಳೆದ ಹತ್ತು ವರ್ಷಗಳಲ್ಲಿ, ಸರ್ಕಾರವು ವಿವಿಧ ಯೋಜನೆಗಳ ಮೂಲಕ ಜೈವಿಕ ಇಂಧನ ಯೋಜನೆಗಳನ್ನು ಬೆಂಬಲಿಸುತ್ತಿದೆ. ಇವುಗಳಲ್ಲಿ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ʻರಾಷ್ಟ್ರೀಯ ಜೈವಿಕ ಅನಿಲ ಮತ್ತು ಗೊಬ್ಬರ ನಿರ್ವಹಣಾ ಕಾರ್ಯಕ್ರಮʼ (ಎನ್‌ಬಿಎಂಎಂಪಿ), 2018-19 ರಿಂದ 2020-21 ರವರೆಗಿನ ʻಹೊಸ ರಾಷ್ಟ್ರೀಯ ಜೈವಿಕ ಅನಿಲ ಮತ್ತು ಸಾವಯವ ಗೊಬ್ಬರ ಕಾರ್ಯಕ್ರಮʼ(ಎನ್ಎನ್‌ಬಿಒಎಂಪಿ), 12ನೇ ಯೋಜನೆಯ ಅವಧಿಯಲ್ಲಿ ಜಾರಿಗೆ ತರಲಾದ ʻಸಕ್ಕರೆ ಕಾರ್ಖಾನೆಗಳಲ್ಲಿ ಗ್ರಿಡ್ ಸಂವಾದಾತ್ಮಕ ಜೈವಿಕ ವಿದ್ಯುತ್ ಮತ್ತು ಕಬ್ಬಿನ ಸಹ ಉತ್ಪಾದನೆ  ಉತ್ತೇಜಿಸುವ ಯೋಜನೆʼ,  12ನೇ ಪಂಚವಾರ್ಷಿಕ ಅವಧಿಯಲ್ಲಿನ ʻನಗರ, ಕೈಗಾರಿಕೆ ಮತ್ತು ಕೃಷಿ ತ್ಯಾಜ್ಯಗಳು / ಅವಶೇಷಗಳಿಂದ ಇಂಧನ ತಯಾರಿಕೆ ಕಾರ್ಯಕ್ರಮʼ, 2018-19 ರಿಂದ 2020-21 ರವರೆಗೆ ದೇಶದ ಸಕ್ಕರೆ ಕಾರ್ಖಾನೆಗಳು ಮತ್ತು ಇತರ ಕೈಗಾರಿಕೆಗಳಲ್ಲಿ ಜೈವಿಕ ಇಂಧನ ಆಧಾರಿತ ಸಹ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆಗಳು ಇದರಲ್ಲಿ ಸೇರಿವೆ.

ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಸ್ಥಾಪಿಸಲಾದ ಜೈವಿಕ ಇಂಧನ ಯೋಜನೆಗಳ ವಿವರಗಳನ್ನು ರಾಜ್ಯವಾರು ಅನುಬಂಧ-II ರಲ್ಲಿ ನೀಡಲಾಗಿದೆ. ಇದಲ್ಲದೆ, ʻಎನ್‌ಬಿಪಿ ಹಂತ -1ʼರ ಅಡಿಯಲ್ಲಿ ಹೊಸ ಜೈವಿಕ ಇಂಧನ ಯೋಜನೆಗಳನ್ನು ಉತ್ತೇಜಿಸಲಾಗುತ್ತಿದೆ.

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಸಲ್ಲಿಸಿದ್ದಾರೆ.

ಅನುಬಂಧ-I

ರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮದಡಿ ದೇಶದಲ್ಲಿ ಜೈವಿಕ ಇಂಧನ ಯೋಜನೆಗಳನ್ನು ಸ್ಥಾಪಿಸಲು ಅಸ್ತಿತ್ವದಲ್ಲಿರುವ ʻಸಿಎಫ್ಎʼ ಬೆಂಬಲವನ್ನು ಈ ಕೆಳಗಿನಂತೆ ನೀಡಲಾಗಿದೆ:

ತ್ಯಾಜ್ಯದಿಂದ ಇಂಧನ ಕಾರ್ಯಕ್ರಮ ಸಿಎಫ್ಎ ಕೋಟಿ ರೂ.ಗಳಲ್ಲಿ
ಜೈವಿಕ ಅನಿಲ ಉತ್ಪಾದನೆ ದಿನಕ್ಕೆ 12000 ಕ್ಯೂಬಿಕ್‌ ಮೀಟರ್‌ಗೆ 0.25 ಕೋಟಿ ರೂ.
ಬಯೋ ಸಿಎನ್‌ಜಿ ಉತ್ಪಾದನೆ ಪ್ರತಿ ದಿನಕ್ಕೆ 4800 ಕೆ.ಜಿ.ಗೆ ರೂ. 4.0 ಕೋಟಿ
(ಹೊಸ ಜೈವಿಕ ಅನಿಲ ಸ್ಥಾವರದಿಂದ ಜೈವಿಕ
ಸಿಎನ್‌ಜಿ ಉತ್ಪಾದನೆಗೆ)

ದಿನಕ್ಕೆ 4800 ಕೆ.ಜಿ.ಗೆ 3.0 ಕೋಟಿ ರೂ.  (ಅಸ್ತಿತ್ವದಲ್ಲಿರುವ ಜೈವಿಕ ಅನಿಲ ಸ್ಥಾವರದಿಂದ ಜೈವಿಕ ಸಿಎನ್‌ಜಿ ಜಿ ಉತ್ಪಾದನೆಗಾಗಿ)

ಜೈವಿಕ ಅನಿಲ ಆಧಾರಿತ ವಿದ್ಯುತ್ ಉತ್ಪಾದನೆ 0.75 ಕೋಟಿ ರೂ./ಮೆಗಾವ್ಯಾಟ್
(ಹೊಸ ಜೈವಿಕ ಅನಿಲ ಸ್ಥಾವರದಿಂದ ವಿದ್ಯುತ್ ಉತ್ಪಾದನೆಗಾಗಿ)

0.5 ಕೋಟಿ ರೂ./ಮೆಗಾವ್ಯಾಟ್ (ಅಸ್ತಿತ್ವದಲ್ಲಿರುವ ಜೈವಿಕ ಅನಿಲ ಸ್ಥಾವರದಿಂದ ವಿದ್ಯುತ್ ಉತ್ಪಾದನೆಗಾಗಿ)

ಜೈವಿಕ ಮತ್ತು ಕೃಷಿ-ಕೈಗಾರಿಕಾ ತ್ಯಾಜ್ಯ ಆಧಾರಿತ ವಿದ್ಯುತ್ 0.4 ಕೋಟಿ ರೂ./ಮೆಗಾವ್ಯಾಟ್
ಜೈವಿಕ ಇಂಧನ ಗ್ಯಾಸಿಫೈಯರ್ ಎಲೆಕ್ಟ್ರಿಕಲ್ ಅನ್ವಯಿಕೆಗಳಿಗಾಗಿ ʻಡ್ಯುಯಲ್ ಫ್ಯೂಯಲ್ ಎಂಜಿನ್‌ಗಳಿಗೆ ಪ್ರತಿ ಕಿಲೋವ್ಯಾಟ್‌ ವಿದ್ಯುತ್‌ಗೆ 2,500 ರೂ.

ಎಲೆಕ್ಟ್ರಿಕಲ್ ಅನ್ವಯಿಕೆಗಾಗಿ 100% ಗ್ಯಾಸ್ ಎಂಜಿನ್ ಗಳೊಂದಿಗೆ ಪ್ರತಿ ಕಿ.ವ್ಯಾ. ವಿದ್ಯುತ್‌ಗೆ 15,000 ರೂ.

ಥರ್ಮಲ್ ಅನ್ವಯಿಕೆಗಳಿಗೆ ಪ್ರತಿ 300 ಕಿ.ವ್ಯಾ.ಗೆ 2 ಲಕ್ಷ ರೂ.

ಜೈವಿಕ ಇಂಧನ ಕಾರ್ಯಕ್ರಮ ಸಿಎಫ್ಎ
ಬ್ರಿಕೆಟ್ ಉತ್ಪಾದನಾ ಘಟಕಗಳು ರೂ. 9.00 ಲಕ್ಷ/ ಟಿಪಿಎಚ್

(ಗರಿಷ್ಠ ಸಿಎಫ್ಎ- ಪ್ರತಿ ಯೋಜನೆಗೆ 45.00 ಲಕ್ಷ ರೂ.)

ನಾನ್-ಟಾರ್ರಿಫೈಡ್ ಪೆಲೆಟ್ ಉತ್ಪಾದನಾ ಘಟಕ 21 ಲಕ್ಷ ರೂ./ ಪ್ರತಿ ಗಂಟೆಗೆ ಮೆಟ್ರಿಕ್‌ ಟನ್‌ ಉತ್ಪಾದನಾ ಸಾಮರ್ಥ್ಯಕ್ಕೆ(ಎಂಟಿಪಿಎಚ್) ಅಥವಾ 1 ಟಿಪಿಎಚ್ ಸ್ಥಾವರದ ಘಟಕ ಮತ್ತು ಯಂತ್ರೋಪಕರಣಗಳಿಗೆ ಪರಿಗಣಿಸಲಾದ ಬಂಡವಾಳ ವೆಚ್ಚದ 30% – ಇವುಗಳಲ್ಲಿ  ಯಾವುದು ಕಡಿಮೆಯೋ ಅದು (ಪ್ರತಿ ಯೋಜನೆಗೆ ಗರಿಷ್ಠ 105 ಲಕ್ಷ ರೂ.)
ಟೊರ್ರೆಫೈಡ್ ಪೆಲೆಟ್ ಉತ್ಪಾದನಾ ಘಟಕ ರೂ. 42 ಲಕ್ಷ/ಎಂಟಿಪಿಎಚ್ ಉತ್ಪಾದನಾ ಸಾಮರ್ಥ್ಯ ಅಥವಾ 1 ಟಿಪಿಎಚ್ ಸ್ಥಾವರದ ಘಟಕ ಮತ್ತು ಯಂತ್ರೋಪಕರಣಗಳಿಗೆ ಪರಿಗಣಿಸಲಾದ ಬಂಡವಾಳ ವೆಚ್ಚದ 30%, – ಇವುಗಳಲ್ಲಿ ಯಾವುದು ಕಡಿಮೆಯೋ ಅದು. (ಪ್ರತಿ ಯೋಜನೆಗೆ ಗರಿಷ್ಠ 210 ಲಕ್ಷ ರೂ.)

 

ಸಬ್ಬು ರಹಿತ ಸಹ ಉತ್ಪಾದನೆ ಯೋಜನೆಗಳು 40 ಲಕ್ಷ ರೂ./ಮೆಗಾವ್ಯಾಟ್

ಗರಿಷ್ಠ ಸಿಎಫ್ಎ- ಪ್ರತಿ ಯೋಜನೆಗೆ 5.00 ಕೋಟಿ ರೂ.

ಜೈವಿಕ ಇಂಧನ ಕಾರ್ಯಕ್ರಮ ಸಿಎಫ್ಎ
ಸಣ್ಣ ಜೈವಿಕ ಅನಿಲ ಸ್ಥಾವರಗಳಿಗೆ (ಸ್ಥಾವರದ ಸಾಮರ್ಥ್ಯ /ದಿನಕ್ಕೆ 1-25 ಘನ ಮೀಟರ್) ಕ್ಯೂಬಿಕ್ ಮೀಟರ್‌ನಲ್ಲಿ ಸ್ಥಾವರದ ಗಾತ್ರದ ಆಧಾರದ ಮೇಲೆ ಪ್ರತಿ ಸ್ಥಾವರಕ್ಕೆ 9,800 ರೂ.ನಿಂದ 70,400 ರೂ.
ವಿದ್ಯುತ್ ಉತ್ಪಾದನೆ ಮತ್ತು ಥರ್ಮಲ್ ಅನ್ವಯಿಕೆಗಾಗಿ (ಸ್ಥಾವರ ಸಾಮರ್ಥ್ಯ ದಿನಕ್ಕೆ 25 – 2500 ಕ್ಯೂಬಿಕ್ ಮೀಟರ್): ವಿದ್ಯುತ್ ಉತ್ಪಾದನೆಗೆ ಪ್ರತಿ ಕಿಲೋವ್ಯಾಟ್ ಗೆ ರೂ. 35,000/- ರಿಂದ ರೂ. 45,000/-

ಪ್ರತಿ ಕಿಲೋವ್ಯಾಟ್ ಗೆ 17,500 ರೂ.ನಿಂದ 22,500 ರೂ.ವರೆಗೆ ಥರ್ಮಲ್ ಅನ್ವಯಿಕೆಗಳಿಗೆ ಸಮನಾದ ರೂ.

 

ಸೂಚನೆ: ಎನ್ಇಆರ್, ದ್ವೀಪಗಳು, ನೋಂದಾಯಿತ ಗೋಶಾಲೆಗಳು ಮತ್ತು ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಸ್ಟ್ಯಾಂಡರ್ಡ್ ಸಿಎಫ್ಎಗಿಂತ ಶೇ.20 ರಷ್ಟು ಹೆಚ್ಚು)

ಅನುಬಂಧ-II

ಲೋಕಸಭೆಯ ಚುಕ್ಕೆರಹಿತ ಪ್ರಶ್ನೆ ಸಂಖ್ಯೆ 2809, ಭಾಗ (ಡಿ)ಗೆ ಸಂಬಂಧಿಸಿದಂತೆ ‘ಜೈವಿಕ ಇಂಧನ ಕಾರ್ಯಕ್ರಮಕ್ಕೆ ಆರ್ಥಿಕ ನೆರವು’ ಕುರಿತು 17.12.2025 ರಂದು ಉತ್ತರಿಸಲಾಗುವುದು.

ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಸ್ಥಾಪಿಸಲಾದ ಜೈವಿಕ ಇಂಧನ ಯೋಜನೆಗಳ ವಿವರಗಳು ಈ ಕೆಳಗಿನಂತಿವೆ:

    ಜೈವಿಕ ಇಂಧನ ಯೋಜನೆಗಳು ತ್ಯಾಜ್ಯದಿಂದ ಇಂಧನ ಯೋಜನೆಗಳು ಜೈವಿಕ ಅನಿಲ ಸ್ಥಾವರಗಳು
ಕ್ರ.ಸಂ. ರಾಜ್ಯ ಸಾಮರ್ಥ್ಯ (ಮೆ.ವ್ಯಾ) ಸಾಮರ್ಥ್ಯ (ಮೆ.ವ್ಯಾ.ಇ) ಸಂಖ್ಯೆಗಳು
1 ಆಂಧ್ರ ಪ್ರದೇಶ 35.1 35.95 28505
2 ಅರುಣಾಚಲ ಪ್ರದೇಶ 0 0 349
3 ಅಸ್ಸಾಂ 2 0 23612
4 ಬಿಹಾರ 39.8 0.32 236
5 ಛತ್ತೀಸ್ ಗಢ 54 0 11030
6 ಗೋವಾ 0 1 140
7 ಗುಜರಾತ್ 12 15.2 5427
8 ಹರಿಯಾಣ 87.4 17.39 3487
9 ಹಿಮಾಚಲ ಪ್ರದೇಶ 1.5 0 294
10 ಜಾರ್ಖಂಡ್ 14.8 1.04 545
11 ಕರ್ನಾಟಕ 536.81 8.41 34657
12 ಕೇರಳ 1.55 0.23 9639
13 ಮಧ್ಯಪ್ರದೇಶ 31.2 5.86 32120
14 ಮಹಾರಾಷ್ಟ್ರ 1073.5 24.26 71653
15 ಮಣಿಪುರ 0 0 25
16 ಮೇಘಾಲಯ 0 0 867
17 ಮಿಜೋರಾಂ 0 0 648
18 ನಾಗಾಲ್ಯಾಂಡ್ 0 0 102
19 ಒಡಿಶಾ 0.6 0 5966
20 ಪಂಜಾಬ್ 140.29 21.77 19288
21 ರಾಜಸ್ಥಾನ 19.85 1.19 2404
22 ಸಿಕ್ಕಿಂ 0 0 170
23 ತಮಿಳುನಾಡು 112.55 8.68 1740
24 ತೆಲಂಗಾಣ 4.03 9.79 11159
25 ತ್ರಿಪುರಾ 0 0 546
26 ಉತ್ತರಾಖಂಡ 12.5 6.89 8362
27 ಉತ್ತರ ಪ್ರದೇಶ 146.6 41.34 3594
28 ಪಶ್ಚಿಮ ಬಂಗಾಳ 31.6 4.06 851
29 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 0 0 0
30 ಚಂಡೀಗಢ 0 0 0
31 ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು 3.75 0 18
32 ದೆಹಲಿಯ ʻಎನ್‌ಸಿಟಿʼ 0 24.17 0
33 ಜಮ್ಮು ಮತ್ತು ಕಾಶ್ಮೀರ 0 0 101
34 ಲಡಾಖ್ 0 0 0
35 ಲಕ್ಷದ್ವೀಪ 0 0 0
36 ಪುದುಚೇರಿ 0 0 0
37 ಇತರೆ 0 0 10544
  ಒಟ್ಟು 2361.43 227.56 288079

About Matribhumi Samachar

Check Also

ವಿಕಸಿತ ಭಾರತ ಜಿ ರಾಮ್ ಜಿ ಮಸೂದೆ ಕುರಿತು ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾನ್ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದು, …