Wednesday, December 24 2025 | 06:40:20 PM
Breaking News

ಭಾರತದ ‘ಸಾಫ್ಟ್ ಪವರ್’ ಮತ್ತು ಜಾಗತಿಕ ಸಾಂಸ್ಕೃತಿಕ ಪ್ರಸರಣದ ಪ್ರಮುಖ ಚಾಲಕಶಕ್ತಿಯಾಗಿ ಹೊರಹೊಮ್ಮಿದ ಒಟಿಟಿ ವಲಯ

Connect us on:

ಭಾರತೀಯ ಕಥೆಗಳು, ಸೃಜನಶೀಲ ಪ್ರತಿಭೆ, ಸಾಂಸ್ಕೃತಿಕ ಪರಂಪರೆ ಮತ್ತು ಸ್ವತಂತ್ರ ಚಲನಚಿತ್ರ ನಿರ್ಮಾಣಕ್ಕೆ ಜಾಗತಿಕ ಪ್ರವೇಶವನ್ನು ಕಲ್ಪಿಸುವ ಮೂಲಕ, ಓವರ್-ದಿ-ಟಾಪ್ (ಒಟಿಟಿ) ವಲಯವು ಭಾರತದ ‘ಸಾಫ್ಟ್ ಪವರ್’ಗೆ ಗಮನಾರ್ಹ ಕೊಡುಗೆ ನೀಡಿದೆ.

ಉದ್ಯಮದ ಅಂದಾಜಿನ ಪ್ರಕಾರ (ಫಿಕ್ಕಿ-ಇವೈ ಮಾಧ್ಯಮ ಮತ್ತು ಮನರಂಜನಾ ಉದ್ಯಮ ವರದಿ 2025), 2024 ರಲ್ಲಿ ವೀಡಿಯೊ ಚಂದಾದಾರಿಕೆ ಆದಾಯವು ಶೇ. 11 ರಷ್ಟು ಏರಿಕೆಯಾಗಿ 9,200 ಕೋಟಿ ರೂ. ತಲುಪಿದೆ. ಒಟಿಟಿಯಲ್ಲಿನ ಸ್ಟ್ರೀಮಿಂಗ್ ಕಂಟೆಂಟ್ಗಾಗಿ ಹಣ ಪಾವತಿಸುವ ಬಳಕೆದಾರರ ಸಂಖ್ಯೆ 9.5 ರಿಂದ 11.8 ಕೋಟಿ ಎಂದು ಅಂದಾಜಿಸಲಾಗಿದೆ.

ಸಾರ್ವಜನಿಕ ಪ್ರಸಾರಕರ ವೇದಿಕೆಯಾದ ವೇವ್ಸ್ ಒಟಿಟಿ, ದೂರದರ್ಶನ ಮತ್ತು ಆಕಾಶವಾಣಿಯ ಶ್ರೀಮಂತ ಆರ್ಕೈವ್ ಗಳು, ಪ್ರಾದೇಶಿಕ ಕಲೆಗಳು, ಸಾಕ್ಷ್ಯಚಿತ್ರಗಳು, ಶಾಸ್ತ್ರೀಯ ಸಂಗೀತ, ಸಾಹಿತ್ಯ ಆಧಾರಿತ ಕಾರ್ಯಕ್ರಮಗಳು ಮತ್ತು ಬಹುಭಾಷಾ ವಿಷಯಗಳನ್ನು ವಿಶ್ವಾದ್ಯಂತ ಪ್ರೇಕ್ಷಕರಿಗೆ ಲಭ್ಯವಾಗುವಂತೆ ಮಾಡುವ ಮೂಲಕ ಈ ವ್ಯಾಪ್ತಿಯನ್ನು ಮತ್ತಷ್ಟು ಬಲಪಡಿಸಿದೆ.

ವೇವ್ಸ್ ಒಟಿಟಿ, ಉದಯೋನ್ಮುಖ ಚಲನಚಿತ್ರ ನಿರ್ಮಾಪಕರು ಮತ್ತು ಕ್ರಿಯೇಟರ್‌ ಗಳನ್ನು ಬೆಂಬಲಿಸಲು ಹಾಗೂ ಅವರು ಜಾಗತಿಕ ಪ್ರೇಕ್ಷಕರನ್ನು ತಲುಪಲು ನೆರವಾಗುವಂತೆ, ತಂತ್ರಜ್ಞಾನ ಆಧಾರಿತ ವಿತರಣಾ ವೇದಿಕೆಯನ್ನು ಒದಗಿಸುವ ವ್ಯವಸ್ಥೆಯನ್ನು ಪರಿಚಯಿಸಿದೆ.

ವೇವ್ಸ್ ಒಟಿಟಿ ಪ್ರಮುಖವಾಗಿ ಚಂದಾದಾರಿಕೆ-ರಹಿತ ಸಾರ್ವಜನಿಕ ಸೇವಾ ವೇದಿಕೆಯಾಗಿದ್ದು, ಇದು ಚಂದಾದಾರಿಕೆ ಆಧಾರಿತ ಮಾದರಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಜಾಹೀರಾತು ಇದರ ಆದಾಯದ ಪ್ರಮುಖ ಮೂಲವಾಗಿದೆ. ಭಾರತ ಮತ್ತು ಜಾಗತಿಕವಾಗಿ ಸಾರ್ವಜನಿಕ ಪ್ರಸಾರ ಕಂಟೆಂಟ್ ಎಲ್ಲರಿಗೂ ಲಭ್ಯವಾಗುವಂತೆ ಮಾಡುವತ್ತ ಇದು ಗಮನಹರಿಸುತ್ತದೆ.

ಈ ವೇದಿಕೆಯು ಪ್ರಸ್ತುತ ಬೆಳವಣಿಗೆ ಮತ್ತು ವಿಸ್ತರಣೆಯ ಹಂತದಲ್ಲಿದ್ದು, ಅಂತಾರಾಷ್ಟ್ರೀಯ ಬಳಕೆದಾರರ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ. ಕಾರ್ಯತಂತ್ರದ ಪಾಲುದಾರಿಕೆಗಳ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಆದಾಯದ ಮೂಲಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಪ್ರಾರಂಭವಾದ ಮೊದಲ ವರ್ಷದಲ್ಲೇ 80 ಲಕ್ಷಕ್ಕೂ ಹೆಚ್ಚು ಡೌನ್ಲೋಡ್ ಗಳೊಂದಿಗೆ ಬಳಕೆದಾರರ ಬೆಳವಣಿಗೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಡಿಜಿಟಲ್ ವೇದಿಕೆಗಳಲ್ಲಿ ಬಹುಭಾಷಾ ಭಾರತೀಯ ಕಂಟೆಂಟ್ ಮತ್ತು ಸಾರ್ವಜನಿಕ ಸೇವಾ ಮಾಧ್ಯಮಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಇದು ಪ್ರತಿಬಿಂಬಿಸುತ್ತದೆ.

ಸಿನಿಮಾಟೋಗ್ರಾಫ್ ಕಾಯ್ದೆ, 1952 (2023ರಲ್ಲಿ ತಿದ್ದುಪಡಿಯಾದಂತೆ) ಹೊಸದಾಗಿ ಸೇರಿಸಲಾದ ಸೆಕ್ಷನ್ 7(1B)(ii), ಪೈರೇಟೆಡ್ ಚಲನಚಿತ್ರ ಕಂಟೆಂಟ್ ಅನ್ನು ಹೋಸ್ಟ್ ಮಾಡುವ ಮಧ್ಯವರ್ತಿಗಳ ವಿರುದ್ಧ, ಮಾಹಿತಿ ತಂತ್ರಜ್ಞಾನ ಕಾಯಿದೆ, 2000ರ ಸೆಕ್ಷನ್ 79(3)ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

About Matribhumi Samachar

Check Also

ಐಎಫ್‌ಎಫ್‌ಐ ಯಲ್ಲಿ ಮೊಳಗಿದ ಜಾಗತಿಕ ದನಿಗಳು: ಎರಡು ಶಕ್ತಿಶಾಲಿ ಚಿತ್ರಗಳ ಮೂಲಕ ಮಾತೃತ್ವ, ಅಸ್ಮಿತೆ ಮತ್ತು ಇತಿಹಾಸದ ಅನ್ವೇಷಣೆ

ಇಂದು ಐಎಫ್‌ಎಫ್‌ಐ  ವೇದಿಕೆಯಲ್ಲಿ ಎರಡು ತೀರಾ ಭಿನ್ನವಾದ, ಆದರೂ ಭಾವನಾತ್ಮಕವಾಗಿ ಬೆಸೆದಿರುವ ಜಗತ್ತುಗಳ ಸಂಗಮವಾಯಿತು. ‘ಮದರ್ಸ್ ಬೇಬಿ’ ಮತ್ತು ‘ಮೈ …