Tuesday, December 23 2025 | 02:21:33 AM
Breaking News

ಬೆಂಗಳೂರಿನಲ್ಲಿ ಹೊಸ ಆಧಾರ್‌ ಸೇವಾ ಕೇಂದ್ರದ ಉದ್ಘಾಟನೆ

Connect us on:

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಹೊಸ ಯುಐಡಿಎಐ ಆಧಾರ್‌ ಸೇವಾ ಕೇಂದ್ರವನ್ನು (ಎಎಸ್‌ಕೆ) ಉದ್ಘಾಟಿಸಿದೆ. ನಗರದಲ್ಲಿ ನಾಗರಿಕ ಕೇಂದ್ರಿತ ಆಧಾರ್‌ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಧಾರ್‌ ಸೇವಾ ಕೇಂದ್ರವನ್ನು ಯುಐಡಿಎಐ ತಂತ್ರಜ್ಞಾನ ಕೇಂದ್ರದ ಬೆಂಗಳೂರಿನ ಉಪ ಮಹಾನಿರ್ದೇಶಕಿ ಶ್ರೀಮತಿ ತನುಶ್ರೀ ದೇಬ್‌ ಬರ್ಮಾ(ಐಎಎಸ್‌) ಮತ್ತು ಯುಐಡಿಎಐ-ಪ್ರಾದೇಶಿಕ ಕಚೇರಿ, ಬೆಂಗಳೂರು ಉಪ ಮಹಾನಿರ್ದೇಶಕಿ ಶ್ರೀಮತಿ ಅನ್ನಿ ಜಾಯ್ಸ್ ವಿ. ಅವರು ಆಧಾರ್‌ ಕೇಂದ್ರವನ್ನು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಯುಐಡಿಎಐ ಪ್ರಾದೇಶಿಕ ಕಚೇರಿಯ ಬೆಂಗಳೂರಿನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು:

  • ಶ್ರೀ ಪವನ್‌ ಕುಮಾರ್‌ ಪಹ್ವಾ, ನಿರ್ದೇಶಕರು, ಯುಐಡಿಎಐ ಪ್ರಾದೇಶಿಕ ಕಚೇರಿ, ಬೆಂಗಳೂರು
  • ಶ್ರೀ ಮನೋಜ್‌ ಕುಮಾರ್‌, ನಿರ್ದೇಶಕರು, ಯುಐಡಿಎಐ ಪ್ರಾದೇಶಿಕ ಕಚೇರಿ, ಬೆಂಗಳೂರು
  • ಶ್ರೀ. ಗುಲ್ಶನ್‌ ಕುಮಾರ್‌ ಸಿಂಗ್‌, ಉಪನಿರ್ದೇಶಕರು, ಯುಐಡಿಎಐ ಪ್ರಾದೇಶಿಕ ಕಚೇರಿ, ಬೆಂಗಳೂರು ಮತ್ತು ಇತರ ಗಣ್ಯರು ಮತ್ತು ಆಧಾರ್‌ ಸೇವಾ ಕೇಂದ್ರದ ಅಧಿಕಾರಿಗಳು.

ಈ ಎಚ್‌ಎಸ್‌ಆರ್‌ ಲೇಔಟ್‌ ಎಎಸ್‌ಕೆ 8 ಆಪರೇಷನಲ್‌ ಕಿಟ್‌ಗಳನ್ನು ಹೊಂದಿರುವ ಮಾಡೆಲ್‌ ಬಿ ಸೆಂಟರ್‌ ಆಗಿದೆ. 16 ಕಿಟ್‌ಗಳನ್ನು ಹೊಂದಿರುವ ದೊಡ್ಡ ಮಾದರಿಯ ಆಧಾರ್‌ ಸೇವಾ ಕೇಂದ್ರವು 2026ರ ಮಾರ್ಚ್‌ ವೇಳೆಗೆ ಬೆಂಗಳೂರಿನ ಇತರ ಭಾಗಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ, ಇದು ಸೇವಾ ಸಾಮರ್ಥ್ಯ‌ವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಆಧಾರ್‌ ಸೇವಾ ಕೇಂದ್ರದ ಬಗ್ಗೆ

ಆಧಾರ್‌ ಸೇವಾ ಕೇಂದ್ರವು ಯುಐಡಿಎಐ ನೇರ ಮೇಲ್ವಿಚಾರಣೆಯೊಂದಿಗೆ ಸುರಕ್ಷಿತ, ಪ್ರಮಾಣೀಕೃತ ಮತ್ತು ಉತ್ತಮ-ಗುಣಮಟ್ಟದ ಆಧಾರ್‌ ಸೇವೆಗಳನ್ನು ಒದಗಿಸಲು ಸ್ಥಾಪಿಸಲಾದ ಯುಐಡಿಎಐ-ಚಾಲಿತ ಸೌಲಭ್ಯವಾಗಿದೆ. ಈ ಕೇಂದ್ರವು ನಿವಾಸಿಗಳಿಗೆ ಆಧಾರ್‌ ದಾಖಲಾತಿ, ಜನಸಂಖ್ಯಾ ಮತ್ತು ಬಯೋಮೆಟ್ರಿಕ್‌ ನವೀಕರಣಗಳು, ದೋಷ ತಿದ್ದುಪಡಿಗಳು, ಕುಂದುಕೊರತೆ ಪರಿಹಾರ ಮತ್ತು ಸ್ಥಿತಿ ಟ್ರ್ಯಾಕಿಂಗ್‌ಗೆ  ಪ್ರವೇಶವನ್ನು ಒದಗಿಸುತ್ತದೆ, ಇವೆಲ್ಲವೂ ನಾಗರಿಕರ ಅನುಭವವನ್ನು ಶ್ರೀಮಂತಗೊಳಿಸುತ್ತವೆ.

ಯುಐಡಿಎಐನ ಬದ್ಧತೆಯನ್ನು ಪುನರುಚ್ಚರಿಸಿದ ಡಿಡಿಜಿ ಟೆಕ್ನಾಲಜಿ ಸೆಂಟರ್‌, ಯುಐಡಿಎಐ ಆಧಾರ್‌ ಸೇವಾ ಕೇಂದ್ರಗಳ ಹೊಸ ಯುಗವನ್ನು ಪ್ರಾರಂಭಿಸುತ್ತಿದೆ, ದೇಶಾದ್ಯಂತ ಈ ಕೇಂದ್ರಗಳ ಹೆಜ್ಜೆಗುರುತನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಒತ್ತಿ ಹೇಳಿದರು. ಅಲ್ಲದೆ, ವಿಸ್ತರಣೆಯು ಹೆಚ್ಚು ಚದುರಿದ ಕೇಂದ್ರಗಳ ಜಾಲದ ಮೂಲಕ ನಿವಾಸಿಗಳಿಗೆ ಆಧಾರ್‌ ಸೇವೆಗಳಿಗೆ ಉತ್ತಮ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಪ್ರಸ್ತುತ ಬೀಟಾ ಹಂತದಲ್ಲಿರುವ ಮತ್ತು ಶೀಘ್ರದಲ್ಲೇ ಸಂಪೂರ್ಣವಾಗಿ ಬಿಡುಗಡೆಯಾಗಲಿರುವ ಹೊಸ ಆಧಾರ್‌ ಅಪ್ಲಿಕೇಶನ್‌ನ ಬಿಡುಗಡೆಯಂತಹ ತಾಂತ್ರಿಕ ಪ್ರಗತಿಗಳನ್ನು ಅವರು ಮತ್ತಷ್ಟು ವಿವರಿಸಿದರು, ಇದು ನಿವಾಸಿಗಳಿಗೆ ತಮ್ಮ ಮೊಬೈಲ್‌ ಫೋನ್‌ಗಳಿಂದ ನೇರವಾಗಿ ಹೆಚ್ಚಿನ ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಸಿಆರ್‌ಎಂ ಮೂಲಕ ಸೇವೆಗಳನ್ನು ಸ್ವಯಂಚಾಲಿತಗೊಳಿಸಲು ಯುಐಡಿಎಐ ಎಐ ಮತ್ತು ಎಂಎಲ್‌ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ, ಹೆಚ್ಚಿನ ಸಂಖ್ಯೆಯ ಜನರಿಗೆ ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿ ಕುಂದುಕೊರತೆ ಪರಿಹಾರವನ್ನು ಖಾತ್ರಿಪಡಿಸುತ್ತದೆ.

ಹೆಚ್ಚುವರಿಯಾಗಿ, ಬೆಂಗಳೂರಿನ ಯುಐಡಿಎಐ ಪ್ರಾದೇಶಿಕ ಕಚೇರಿಯ ಡಿಡಿಜಿ ಅವರು 2026ರ ಸೆಪ್ಟೆಂಬರ್‌ ವೇಳೆಗೆ ಕರ್ನಾಟಕದಲ್ಲಿ 22 ಕೇಂದ್ರಗಳನ್ನು ತೆರೆಯುವ ಬಗ್ಗೆ ಮತ್ತು ದೇಶಾದ್ಯಂತ 473 ಆಧಾರ್‌ ಸೇವಾ ಕೇಂದ್ರಗಳನ್ನು ತೆರೆಯುವ ಬಗ್ಗೆ ಮಾಹಿತಿ ನೀಡಿದರು, ಇದು ಭಾರತ ಸರ್ಕಾರದ ಡಿಜಿಟಲ್‌ ಸೇರ್ಪಡೆ ಮತ್ತು ಉತ್ತಮ ಆಡಳಿತದ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರವೇಶಿಸಬಹುದಾದ, ಪರಿಣಾಮಕಾರಿ ಮತ್ತು ನಾಗರಿಕ-ಕೇಂದ್ರಿತ ಆಧಾರ್‌ ಸೇವೆಗಳಿಗೆ ಯುಐಡಿಎಐನ ಬದ್ಧತೆಯನ್ನು ಬಲಪಡಿಸುತ್ತದೆ.

About Matribhumi Samachar

Check Also

ಅಸ್ಸಾಂನ ನಮ್ರೂಪ್‌ನಲ್ಲಿ ಅಸ್ಸಾಂ ವ್ಯಾಲಿ ಫರ್ಟಿಲೈಜರ್ ಮತ್ತು ಕೆಮಿಕಲ್ ಕಂಪನಿ ಲಿಮಿಟೆಡ್‌ನ ಅಮೋನಿಯಾ-ಯೂರಿಯಾ ರಸಗೊಬ್ಬರ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಅಸ್ಸಾಂನ ದಿಬ್ರುಗಢದ ನಮ್ರೂಪ್‌ನಲ್ಲಿ ಇಂದು ಅಸ್ಸಾಂ ವ್ಯಾಲಿ ಫರ್ಟಿಲೈಜರ್ ಮತ್ತು ಕೆಮಿಕಲ್ ಕಂಪನಿ ಲಿಮಿಟೆಡ್‌ನ ಅಮೋನಿಯಾ-ಯೂರಿಯಾ ರಸಗೊಬ್ಬರ ಯೋಜನೆಗೆ ಪ್ರಧಾನಮಂತ್ರಿ  ಶ್ರೀ …