Monday, December 08 2025 | 05:13:40 PM
Breaking News

ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Connect us on:

ಸಿಬ್ಬಂದಿ ನೇಮಕಾತಿ ಆಯೋಗವು ಸಂಯುಕ್ತ ಹಿಂದಿ ಅನುವಾದಕ, ಸ್ಟೆನೊಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’ ಹಾಗೂ ಸಂಯುಕ್ತ ಪದವಿ ಹಂತದ ಪರೀಕ್ಷೆಗಳು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಸಂಯುಕ್ತ ಹಿಂದಿ ಅನುವಾದಕ:

ಸಿಬ್ಬಂದಿ ನೇಮಕಾತಿ ಆಯೋಗದಿಂದ ದೇಶಾದ್ಯಂತ 12 ಆಗಸ್ಟ್, 2025ರಂದು ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಸಂಯುಕ್ತ ಹಿಂದಿ ಅನುವಾದಕ ಪರೀಕ್ಷೆ ನಡೆಯಲಿದೆ. ಭಾರತ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆಗಳಲ್ಲಿ ಖಾಲಿ ಇರುವ 437 (ಅಂದಾಜು) ಹುದ್ದೆಗಳ ಭರ್ತಿಗೆ ಈ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು 100 ರೂ. ಶುಲ್ಕ ಭರಿಸಿ ಪರೀಕ್ಷೆಗೆ ಹಾಜರಾಗಬೇಕು. (ಮಹಿಳಾ ಅಭ್ಯರ್ಥಿಗಳು ಹಾಗೂ ಮೀಸಲಾತಿಗೆ ಅರ್ಹರಾಗಿರುವ ಪ. ಜಾತಿ, ಪ. ಪಂಗಡ, ವಿಕಲ ಚೇತನರು, ನಿವೃತ್ತ ಸೈನಿಕರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.)

ಪರೀಕ್ಷೆಗೆ ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26.06.2025 (23:00 ಗಂಟೆಯವರೆಗೆ). ಪರೀಕ್ಷೆಯ ವೇಳಾಪಟ್ಟಿ, ಪಠ್ಯಕ್ರಮ ಹಾಗೂ ಅರ್ಜಿ ಸಲ್ಲಿಸಲು https://ssc.gov.in ಜಾಲತಾಣಕ್ಕೆ ಭೇಟಿ ನೀಡಿ.

ಸ್ಟೆನೊಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’:

ಸಿಬ್ಬಂದಿ ನೇಮಕಾತಿ ಆಯೋಗದಿಂದ ಸ್ಟೆನೊಗ್ರಾಫರ್ ಗ್ರೇಡ್ ‘ಸಿ’ (ಗ್ರೂಪ್ ‘ಬಿ’ ಗೆಜೆಟೆಡ್ ಅಲ್ಲದ) ಹಾಗೂ ಸ್ಟೆನೊಗ್ರಾಫರ್ ಗ್ರೇಡ್ ‘ಡಿ’ (ಗ್ರೂಪ್ ಸಿ) ಭಾರತ ಸರ್ಕಾರದ ವಿವಿಧ ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿರುವ ವಿವಿಧ ಸಚಿವಾಲಯ, ಇಲಾಖೆ, ಕಚೇರಿಗಳಲ್ಲಿ ಖಾಲಿ ಇರುವ 261 (ಅಂದಾಜು) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ 2025 ಆಗಸ್ಟ್ 6 – 11ರ ವರೆಗೆ ಪರೀಕ್ಷೆ ನಡೆಸಲಾಗುವುದು. 100 ರೂ. ಶುಲ್ಕ ಭರಿಸಿ ಪರೀಕ್ಷೆಗೆ ಹಾಜರಾಗಬೇಕು. (ಮಹಿಳಾ ಅಭ್ಯರ್ಥಿಗಳು ಹಾಗೂ ಮೀಸಲಾತಿಗೆ ಅರ್ಹರಾಗಿರುವ ಪ. ಜಾತಿ, ಪ. ಪಂಗಡ, ವಿಕಲಾಂಗರು, ನಿವೃತ್ತ ಸೈನಿಕರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.)

ಪರೀಕ್ಷೆಗೆ ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26.06.2025 (23:00 ಗಂಟೆಯವರೆಗೆ). ಪರೀಕ್ಷೆಗೆ ಅರ್ಜಿ ಸಲ್ಲಿಸಲು https://ssc.gov.in ಜಾಲತಾಣಕ್ಕೆ ಭೇಟಿ ನೀಡಿ.

ಸಂಯುಕ್ತ ಪದವಿ ಹಂತದ ಪರೀಕ್ಷೆ, 2025:

ಸಿಬ್ಬಂದಿ ನೇಮಕಾತಿ ಆಯೋಗದಿಂದ ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತವಾಗಿ ಸಂಯುಕ್ತ ಪದವಿ ಹಂತದ ಪರೀಕ್ಷೆ (Combined Graduate Leve Examination) ನಡೆಯಲಿದೆ. ಪರೀಕ್ಷೆಯ ಮೊದಲ ಹಂತ 2025 ಆಗಸ್ಟ್ 13 – 30ರ ವರೆಗೆ ನಡೆಯಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 4, 2025 (23:00 ಗಂಟೆಯವರೆಗೆ). ಪರೀಕ್ಷೆಗೆ ಅರ್ಜಿ ಸಲ್ಲಿಸಲು https://ssc.gov.in ಜಾಲತಾಣಕ್ಕೆ ಭೇಟಿ ನೀಡಿ.

About Matribhumi Samachar

Check Also

ಸಶಸ್ತ್ರ ಪಡೆಗಳ ಧ್ವಜ ದಿನದಂದು ಸಶಸ್ತ್ರ ಪಡೆಗಳಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ

ಸಶಸ್ತ್ರ ಪಡೆಗಳ ಧ್ವಜ ದಿನದ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರಧಾನಮಂತ್ರಿ ಅವರು ತಮ್ಮ ಹೃದಯಾಂತರಾಳದ …