Tuesday, December 30 2025 | 10:10:42 PM
Breaking News

ದೆಹಲಿಯಲ್ಲಿ ನಡೆದ ಆರನೇ ರಾಮನಾಥ ಗೋಯೆಂಕಾ ಉಪನ್ಯಾಸ ಕಾರ್ಯಕ್ರಮದಲ್ಲಿ ನೀಡಿದ ಭಾಷಣದ ಕೆಲವು ತುಣುಕುಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

Connect us on:

ದೆಹಲಿಯಲ್ಲಿ ನಡೆದ ಆರನೇ ರಾಮನಾಥ ಗೋಯೆಂಕಾ ಉಪನ್ಯಾಸ ಕಾರ್ಯಕ್ರಮದಲ್ಲಿ ನೀಡಿದ ಭಾಷಣದ ಕೆಲವು ತುಣುಕುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಪ್ರತ್ಯೇಕ ಪೋಸ್ಟ್‌ಗಳಲ್ಲಿ ಹಂಚಿಕೊಂಡಿರುವ, ಶ್ರೀ ಮೋದಿ ಅವರು;

“ರಾಮನಾಥ ಗೋಯೆಂಕಾ ಅವರಿಗೆ, ಯಾವಾಗಲೂ ರಾಷ್ಟ್ರವೇ ಮೊದಲನೆಯದಾಗಿತ್ತು. ಅವರು ಯಾವಾಗಲೂ ಸತ್ಯ ಮತ್ತು ವಸ್ತುನಿಷ್ಠ ಪರವಾಗಿ ನಿಲ್ಲುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಕರ್ತವ್ಯ ಮುಖ್ಯವಾಗಿತ್ತು.”

“ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ಇತ್ತೀಚಿನ ಬಿಹಾರ ಚುನಾವಣೆಯಲ್ಲಿ ದಾಖಲೆಯ ಮತದಾನ ಕಂಡುಬಂದಿದೆ, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನದಲ್ಲಿ ಪಾಲ್ಗೊಂಡಿದ್ದು ಇನ್ನಷ್ಟು ವಿಶೇಷವಾಗಿಸಿದೆ.”

“ಭಾರತದ ಬೆಳವಣಿಗೆ ಮಾದರಿಯನ್ನು ಜಗತ್ತಿನ ಭರವಸೆಯ ಮಾದರಿಯಾಗಿ ನೋಡಲಾಗುತ್ತದೆ.”

“ಚುನಾವಣೆಗಳನ್ನು ಗೆಲ್ಲಲು, ಒಬ್ಬರು 24/7 ಚುನಾವಣಾ ತಂತ್ರದಲ್ಲಿಯೇ ಇರಬೇಕಾಗಿಲ್ಲ. ಬದಲಿಗೆ ‘ಭಾವನಾತ್ಮಕವಾಗಿ ಜನರ ಮನಸ್ಸಿಗೆ ಹತ್ತಿರವಾಗಿ ಜನರ ಅಗತ್ಯಗಳನ್ನು ಅರ್ಥಮಾಡಿಕೊಂಡರೆ ಸಾಕು.”

“ಮಾವೋವಾದಿಗಳ ಪ್ರಭಾವ ಇತ್ತೀಚೆಗೆ ಕುಗ್ಗುತ್ತಿದೆ. ಅದು ಭಾರತದ ಅಭಿವೃದ್ಧಿಗೆ ಉತ್ತಮವಾಗಿದೆ.”

“ಬನ್ನಿ, ಗುಲಾಮಗಿರಿಯ ಮನಸ್ಥಿತಿಯಾಗಿದ್ದ ವಸಾಹತುಶಾಹಿ ಮನಸ್ಥಿತಿಯಿಂದ ನಮ್ಮನ್ನು ಮುಕ್ತಗೊಳಿಸಲು ಸಾಮೂಹಿಕವಾಗಿ ಸಂಕಲ್ಪ ಮಾಡೋಣ.”

“अगले 10 साल में गुलामी की मानसिकता से पूरी मुक्ति के लिए देशवासियों से मेरा यह विशेष आह्वान…”

About Matribhumi Samachar

Check Also

ಪವಿತ್ರ ಪ್ರಕಾಶ್ ಉತ್ಸವದಂದು ಶ್ರೀ ಗುರು ಗೋವಿಂದ ಸಿಂಗ್ ಅವರಿಗೆ ಪ್ರಧಾನಮಂತ್ರಿ ಗೌರವ ನಮನ

ಇಂದು ಪವಿತ್ರ ಪ್ರಕಾಶ್ ಉತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ಗೋವಿಂದ ಸಿಂಗ್ ಅವರಿಗೆ …