ಕಳೆದ 11 ವರ್ಷಗಳಲ್ಲಿ ಭಾರತೀಯ ರೈಲ್ವೆಯ ಹಳಿಗಳ ವೇಗದ ಸಾಮರ್ಥ್ಯವನ್ನು ಹೆಚ್ಚಿಸಲು ಹಳಿಗಳ ಮೇಲ್ದರ್ಜೆಗೇರಿಸುವಿಕೆ ಮತ್ತು ಸುಧಾರಣಾ ಕಾರ್ಯಗಳನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಲಾಗಿದೆ. ಹಳಿಗಳ ಮೇಲ್ದರ್ಜೆಗೇರಿಸುವ ಕ್ರಮಗಳಲ್ಲಿ 60 ಕೆಜಿ ತೂಕದ ರೈಲು ಹಳಿಗಳ ಬಳಕೆ, ಅಗಲವಾದ ತಳದ ಕಾಂಕ್ರೀಟ್ ಸ್ಲೀಪರ್ ಗಳು, ದಪ್ಪವಾದ ವೆಬ್ ಸ್ವಿಚ್ ಗಳು, ಉದ್ದನೆಯ ರೈಲ್ ಪ್ಯಾನಲ್ ಗಳು, H ಬೀಮ್ ಸ್ಲೀಪರ್ ಗಳು, ಆಧುನಿಕ ಹಳಿ ನವೀಕರಣ ಮತ್ತು ನಿರ್ವಹಣಾ ಯಂತ್ರಗಳ ಬಳಕೆ, ಲೆವೆಲ್ ಕ್ರಾಸಿಂಗ್ ಗೇಟ್ ಗಳ ಇಂಟರ್ ಲಾಕಿಂಗ್ ಹಾಗೂ ಹಳಿಗಳ ವಿನ್ಯಾಸದ ತೀವ್ರ ಮೇಲ್ವಿಚಾರಣೆ ಮುಂತಾದವುಗಳು ಸೇರಿವೆ.
ಮೇಲಿನ ಕ್ರಮಗಳ ಫಲವಾಗಿ, ಹಳಿಗಳ ವೇಗ ಸಾಮರ್ಥ್ಯದಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. 110 ಕಿಮೀ ವೇಗ ಹಾಗೂ ಅದಕ್ಕಿಂತ ಹೆಚ್ಚಿನ ವೇಗ ಸಾಮರ್ಥ್ಯ ಹೊಂದಿರುವ ಹಳಿಗಳ ಒಟ್ಟು ಶೇಕಡಾವಾರು ಪ್ರಮಾಣವು ಮಾರ್ಚ್ 2014 ರಲ್ಲಿದ್ದ 40% ರಿಂದ ನವೆಂಬರ್ 2025 ರ ವೇಳೆಗೆ 79% ಕ್ಕೆ ಏರಿದೆ. 2014 ಮತ್ತು 2025 ರ ಅವಧಿಯಲ್ಲಿನ ರೈಲ್ವೆ ಹಳಿಗಳ ವೇಗ ಸಾಮರ್ಥ್ಯದ ವಿವರಗಳು ಈ ಕೆಳಗಿನಂತಿವೆ:
| ವಿಭಾಗೀಯ ವೇಗ (ಕಿಮೀ/ಗಂ) | 2014 | 2025 | ||
| ಹಳಿ ಕಿ.ಮೀ | % | ಹಳಿ ಕಿ.ಮೀ | % | |
| <110 | 47897 | 60.4 | 21936 | 20.7 |
| 110-130 | 26409 | 33.3 | 60726 | 57.5 |
| 130 & above | 5036 | 6.3 | 23010 | 21.8 |
| Total | 79342 | 100 | 105672 | 100 |
ಈ ಮಾಹಿತಿಯನ್ನು ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರವಾಗಿ ನೀಡಿದ್ದಾರೆ.
Matribhumi Samachar Kannad

