Sunday, December 07 2025 | 06:17:26 AM
Breaking News

ಅಸ್ಸಾಂನ ನಮ್ರೂಪ್‌ ನ ಬ್ರಹ್ಮಪುತ್ರ ವ್ಯಾಲಿ ಫರ್ಟಿಲೈಸರ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಬಿವಿಎಫ್‌ಸಿಎಲ್‌) ನ ಹಾಲಿ ಆವರಣದಲ್ಲಿಹೊಸ ಬ್ರೌನ್‌ ಫೀಲ್ಡ್‌ ಅಮೋನಿಯಾ-ಯೂರಿಯಾ ಕಾಂಪ್ಲೆಕ್ಸ್‌ ನಮ್ರೂಪ್‌ 4 ರಸಗೊಬ್ಬರ ಘಟಕ ಸ್ಥಾಪನೆಗೆ ಸಂಪುಟದ ಅನುಮೋದನೆ

Connect us on:

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಸ್ಸಾಂನ ನಮ್ರೂಪ್‌ನ ಬ್ರಹ್ಮಪುತ್ರ ವ್ಯಾಲಿ ಫರ್ಟಿಲೈಸರ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಬಿವಿಎಫ್‌ಸಿಎಲ್‌) ನ ಹಾಲಿ ಆವರಣದಲ್ಲಿ ಯೂರಿಯಾ ಉತ್ಪಾದನೆಯ ವಾರ್ಷಿಕ 12.7 ಲಕ್ಷ ಮೆಟ್ರಿಕ್‌ ಟನ್‌ (ಎಲ್‌ಎಂಟಿ) ಸಾಮರ್ಥ್ಯ‌ದ ಹೊಸ ಬ್ರೌನ್‌ ಫೀಲ್ಡ್‌ ಅಮೋನಿಯಾ-ಯೂರಿಯಾ ಸಂಕೀರ್ಣವನ್ನು ಅಂದಾಜು ಒಟ್ಟು ಯೋಜನಾ ವೆಚ್ಚ 10,601.40 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಜಂಟಿ ಉದ್ಯಮ (ಜೆವಿ) ಮೂಲಕ 70:30 ರ ಸಾಲದ ಇಕ್ವಿಟಿ ಅನುಪಾತದೊಂದಿಗೆ, ಹೊಸ ಹೂಡಿಕೆ ನೀತಿ, 2012ರ ಅಡಿಯಲ್ಲಿಅದರ ತಿದ್ದುಪಡಿಗಳೊಂದಿಗೆ  2014ರ  ಅಕ್ಟೋಬರ್‌ 7ರಂದು ಓದಲಾಗಿದೆ.  ನಮ್ರೂಪ್‌ ನಾಲ್ಕರ ಯೋಜನೆಯನ್ನು ಕಾರ್ಯಾರಂಭಿಸಲು ತಾತ್ಕಾಲಿಕ ಒಟ್ಟಾರೆ ಸಮಯದ ವೇಳಾಪಟ್ಟಿ 48 ತಿಂಗಳುಗಳಾಗಿದೆ.

ಹೆಚ್ಚುವರಿಯಾಗಿ, ಸಾರ್ವಜನಿಕ ಉದ್ಯಮಗಳ ಇಲಾಖೆ (ಡಿಪಿಇ) ಮಾರ್ಗಸೂಚಿಗಳಲ್ಲಿಸೂಚಿಸಲಾದ ಮಿತಿಗಳಿಗೆ ಸಡಿಲಿಕೆಯಲ್ಲಿ ನ್ಯಾಷನಲ್‌ ಫರ್ಟಿಲೈಸಸ್‌ರ್‌ ಲಿಮಿಟೆಡ್‌ (ಎನ್‌ಎಫ್‌ಎಲ್‌) ನ ಈಕ್ವಿಟಿ ಭಾಗವಹಿಸುವಿಕೆಗೆ ಕ್ಯಾಬಿನೆಟ್‌ ಅನುಮೋದನೆ ನೀಡಿದೆ; ಮತ್ತು ನಮ್ರೂಪ್‌-4 ರಸಗೊಬ್ಬರ ಕಾರ್ಖಾನೆಯನ್ನು ಸ್ಥಾಪಿಸುವ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಅಂತರ ಸಚಿವಾಲಯ ಸಮಿತಿ (ಐಎಂಸಿ) ರಚನೆ.

ಪ್ರಸ್ತಾವಿತ ಜೆವಿಯಲ್ಲಿ, ಈಕ್ವಿಟಿ ಮಾದರಿ ಈ ಕೆಳಗಿನಂತಿರುತ್ತದೆ:

(i). ಅಸ್ಸಾಂ ಸರ್ಕಾರ: 40%

(ii). ಬ್ರಹ್ಮಪುತ್ರ ವ್ಯಾಲಿ ಫರ್ಟಿಲೈಸರ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಬಿವಿಎಫ್‌ಸಿಎಲ್‌): 11%

(iii). ಹಿಂದೂಸ್ತಾನ್‌ ಉರ್ವರಾಕ್‌  ರಸಾಯನ್‌ ಲಿಮಿಟೆಡ್‌ (ಎಚ್‌ಯುಆರ್‌ಎಲ್‌): 13%

(iv). ನ್ಯಾಷನಲ್‌ ಫರ್ಟಿಲೈಸಸ್‌ರ್‌ ಲಿಮಿಟೆಡ್‌ (ಎನ್‌ಎಫ್‌ಎಲ್‌): 18%

(v). ಆಯಿಲ್‌ ಇಂಡಿಯಾ ಲಿಮಿಟೆಡ್‌ (ಒಐಎಲ್‌): 18%

ಈಕ್ವಿಟಿಯಲ್ಲಿ ಬಿವಿಎಫ್‌ಸಿಎಲ್‌ನ ಪಾಲು ಸ್ಪಷ್ಟ ಸ್ವತ್ತುಗಳಿಗೆ ಬದಲಾಗಿರುತ್ತದೆ.

ಈ ಯೋಜನೆಯು ದೇಶದಲ್ಲಿ ವಿಶೇಷವಾಗಿ ಈಶಾನ್ಯ ಪ್ರದೇಶದಲ್ಲಿ ದೇಶೀಯ ಯೂರಿಯಾ ಉತ್ಪಾದನಾ ಸಾಮರ್ಥ್ಯ‌ವನ್ನು ಹೆಚ್ಚಿಸುತ್ತದೆ. ಇದು ಈಶಾನ್ಯ, ಬಿಹಾರ, ಪಶ್ಚಿಮ ಬಂಗಾಳ, ಪೂರ್ವ ಉತ್ತರ ಪ್ರದೇಶ ಮತ್ತು ಖಾರ್ಖಂಡ್‌ನಲ್ಲಿ ಹೆಚ್ಚುತ್ತಿರುವ ಯೂರಿಯಾ ರಸಗೊಬ್ಬರಗಳ ಬೇಡಿಕೆಯನ್ನು ಪೂರೈಸುತ್ತದೆ. ನಮ್ರೂಪ್‌-4 ಘಟಕದ ಸ್ಥಾಪನೆಯು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರುತ್ತದೆ. ಇದು ಈ ಪ್ರದೇಶದ ಜನರಿಗೆ ಹೆಚ್ಚುವರಿ ನೇರ ಮತ್ತು ಪರೋಕ್ಷ  ಉದ್ಯೋಗಾವಕಾಶದ ಮಾರ್ಗಗಳನ್ನು ತೆರೆಯುತ್ತದೆ. ಇದು ದೇಶದಲ್ಲಿ ಯೂರಿಯಾದಲ್ಲಿ ಸ್ವಾವಲಂಬನೆಯ ದೃಷ್ಟಿಕೋನವನ್ನು ಸಾಧಿಸಲು ಸಹಾಯ ಮಾಡುತ್ತದೆ.

About Matribhumi Samachar

Check Also

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಗುಜರಾತ್‌ ನಲ್ಲಿ ‘ಅರ್ಥ್ ಶೃಂಗಸಭೆ – 2025’ ಉದ್ಘಾಟಿಸಿದರು

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ರಾಜಧಾನಿ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ …