ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಮಹಾರಾಷ್ಟ್ರದ ಜೆ ಎನ್ ಪಿ ಎ ಬಂದರಿನಿಂದ (ಪಗೋಟೆ) ದಿಂದ ಚೌಕ್ ವರೆಗೆ (29.219 ಕಿ.ಮೀ) 6 ಪಥದ ಪ್ರವೇಶ ನಿಯಂತ್ರಿತ ಗ್ರೀನ್ ಫೀಲ್ಡ್ ಹೈ ಸ್ಪೀಡ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಈ ಯೋಜನೆಯನ್ನು ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ (ಬಿಒಟಿ) ಮಾದರಿಯಲ್ಲಿ ಒಟ್ಟು 4500.62 ಕೋಟಿ ರೂ. ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಭಾರತದ ಪ್ರಮುಖ ಮತ್ತು ಸಣ್ಣ ಬಂದರುಗಳಿಗೆ ಮೂಲಸೌಕರ್ಯವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಯು ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ತತ್ವಗಳ ಅಡಿಯಲ್ಲಿ ಸಮಗ್ರ ಮೂಲಸೌಕರ್ಯ ಯೋಜನೆಯ ಪ್ರಮುಖ ಗಮನ ಕ್ಷೇತ್ರಗಳಲ್ಲಿ ಒಂದಾಗಿದೆ. ಜೆ ಎನ್ ಪಿ ಎ ಬಂದರಿನಲ್ಲಿ ಹೆಚ್ಚುತ್ತಿರುವ ಕಂಟೇನರ್ ಪ್ರಮಾಣ ಮತ್ತು ನವೀ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಯೊಂದಿಗೆ, ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕವನ್ನು ಹೆಚ್ಚಿಸುವ ಅಗತ್ಯವನ್ನು ಗುರುತಿಸಲಾಗಿತ್ತು.
ಪ್ರಸ್ತುತ, ಪಲಾಸ್ಪೆ ಫಾಟಾ, ಡಿ-ಪಾಯಿಂಟ್, ಕಲಾಂಬೋಲಿ ಜಂಕ್ಷನ್, ಪನ್ವೇಲ್ ನಂತಹ ನಗರ ಪ್ರದೇಶಗಳಲ್ಲಿ ದಿನಕ್ಕೆ ಸುಮಾರು 1.8 ಲಕ್ಷ ಪಿಸಿಯು ಸಂಚಾರವಿರುವ ಭಾರೀ ದಟ್ಟಣೆಯಿಂದಾಗಿ, ಜೆ ಎನ್ ಪಿ ಎ ಬಂದರಿನಿಂದ ರಾಷ್ಟ್ರೀಯ ಹೆದ್ದಾರಿ-48 ರ ಸುವರ್ಣ ಚತುರ್ಭುಜ (ಜಿಕ್ಯೂ) ವಿಭಾಗ ಮತ್ತು ಮುಂಬೈ – ಪುಣೆ ಎಕ್ಸ್‌ಪ್ರೆಸ್‌ವೇಗೆ ವಾಹನಗಳು ತಲುಪಲು 2-3 ಗಂಟೆಗಳು ಬೇಕಾಗುತ್ತದೆ. 2025 ರಲ್ಲಿ ನವೀ ಮುಂಬೈ ವಿಮಾನ ನಿಲ್ದಾಣದ ಕಾರ್ಯಾಚರಣೆಯ ನಂತರ, ನೇರ ಸಂಪರ್ಕದ ಅಗತ್ಯವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಹಾಗಾಗಿಯೇ, ಈ ಸಂಪರ್ಕ ಅಗತ್ಯತೆಗಳನ್ನು ಪೂರೈಸಲು ಮತ್ತು ಜೆ ಎನ್ ಪಿ ಎ ಬಂದರು ಮತ್ತು ನವೀ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಲಾಜಿಸ್ಟಿಕ್ ದಕ್ಷತೆಯನ್ನು ಸುಧಾರಿಸಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.
ಯೋಜನೆಯು ಜೆ ಎನ್ ಪಿ ಎ ಬಂದರಿನಲ್ಲಿ (ಎನ್ ಎಚ್ 348) (ಪಗೋಟೆ ಗ್ರಾಮ) ಪ್ರಾರಂಭವಾಗುತ್ತದೆ ಮತ್ತು ಮುಂಬೈ-ಪುಣೆ ಹೆದ್ದಾರಿಯಲ್ಲಿ (ಎನ್ ಎಚ್-48) ಕೊನೆಗೊಳ್ಳುತ್ತದೆ ಮತ್ತು ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇ ಮತ್ತು ಮುಂಬೈ ಗೋವಾ ರಾಷ್ಟ್ರೀಯ ಹೆದ್ದಾರಿಯನ್ನು (ಎನ್ ಎಚ್-66) ಸಂಪರ್ಕಿಸುತ್ತದೆ.
ಗುಡ್ಡಗಾಡು ಪ್ರದೇಶದ ಘಾಟ್ ವಿಭಾಗದ ಬದಲಿಗೆ, ಸಹ್ಯಾದ್ರಿಯ ಮೂಲಕ ಹಾದುಹೋಗುವ ಎರಡು ಸುರಂಗಗಳನ್ನು ವಾಣಿಜ್ಯ ವಾಹನಗಳ ಚಲನೆಯನ್ನು ಸುಲಭಗೊಳಿಸಲು ಒದಗಿಸಲಾಗಿದೆ, ಇದರಿಂದಾಗಿ ಹೆಚ್ಚಿನ ವೇಗದಲ್ಲಿ ದೊಡ್ಡ ಕಂಟೈನರ್ ಟ್ರಕ್‌ಗಳ ಚಲನೆಯನ್ನು ಖಚಿತಪಡಿಸುತ್ತದೆ.
ಹೊಸ 6 ಪಥದ ಗ್ರೀನ್ ಫೀಲ್ಡ್ ಪ್ರಾಜೆಕ್ಟ್ ಕಾರಿಡಾರ್ ಉತ್ತಮ ಬಂದರು ಸಂಪರ್ಕಕ್ಕೆ ಕಾರಣವಾಗುತ್ತದೆ, ಸುರಕ್ಷಿತ ಮತ್ತು ಪರಿಣಾಮಕಾರಿ ಸರಕು ಸಾಗಣೆಗೆ ಸಹಾಯ ಮಾಡುತ್ತದೆ. ಈ ಯೋಜನೆಯು ಮುಂಬೈ ಮತ್ತು ಪುಣೆ ಸುತ್ತಮುತ್ತಲಿನ ಅಭಿವೃದ್ಧಿಶೀಲ ಪ್ರದೇಶಗಳಲ್ಲಿ ಬೆಳವಣಿಗೆ, ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ.
ಕಾರಿಡಾರ್ನ ನಕ್ಷೆ

Matribhumi Samachar Kannad

