Thursday, December 11 2025 | 11:47:06 PM
Breaking News

ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ರಾಜಸ್ಥಾನದಲ್ಲಿ 435 ಮೆಗಾವ್ಯಾಟ್ ಸೌರ ಸ್ಥಾವರಕ್ಕೆ ಹಸಿರು ನಿಶಾನೆ ತೋರಿದರು, ಇದು ವೇಗ ಮತ್ತು ಸುಸ್ಥಿರತೆಯ ಮಾದರಿ ಎಂದು ಬಣ್ಣಿಸಿದರು

Connect us on:

ರಾಜಸ್ಥಾನವು ಶುದ್ಧ ಇಂಧನದ ಜಾಗತಿಕ ಕೇಂದ್ರವಾಗಿ ಪರಿವರ್ತನೆಯಾಗುತ್ತಿರುವುದನ್ನು ಒತ್ತಿಹೇಳುತ್ತಾ, ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ರಾಜ್ಯವು ಈಗ ಭರವಸೆ, ಇಂಧನ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯ ದೀಪವಾಗಿದೆ ಎಂದು ಹೇಳಿದರು. ಝೆಲೆಸ್ಟ್ರಾ ಇಂಡಿಯಾ ಅಭಿವೃದ್ಧಿಪಡಿಸಿದ 435 ಮೆಗಾವ್ಯಾಟ್ ಗೋರ್ಬಿಯಾ ಸೌರ ವಿದ್ಯುತ್ ಯೋಜನೆಯನ್ನು ಸಚಿವರು ಇಂದು ರಾಜಸ್ಥಾನದಲ್ಲಿ ಉದ್ಘಾಟಿಸಿದರು.

ದೂರದೃಷ್ಟಿಯ ನಾಯಕತ್ವ ಮತ್ತು ಪ್ರಾಮಾಣಿಕ ಉದ್ದೇಶದ ಮೂಲಕ ಏನು ಸಾಧ್ಯ ಎಂಬುದಕ್ಕೆ ಗೋರ್ಬಿಯಾ ಯೋಜನೆ ಒಂದು ಉಜ್ವಲ ಉದಾಹರಣೆಯಾಗಿದೆ ಎಂದು ಅವರು ಬಣ್ಣಿಸಿದರು. “ನಾವು ಉತ್ಪಾದಿಸುವ ಪ್ರತಿ ಮೆಗಾವ್ಯಾಟ್ ನೊಂದಿಗೆ, ನಾವು ಕೇವಲ ವಿದ್ಯುತ್ ಉತ್ಪಾದಿಸುತ್ತಿಲ್ಲ, ನಾವು ನವ ಭಾರತವನ್ನು ನಿರ್ಮಿಸುತ್ತಿದ್ದೇವೆ” ಎಂದು ಅವರು ಹೇಳಿದರು.  ಜತೆಗೆ ಈ ಯೋಜನೆಯು ಬದಲಾವಣೆಯ ವೇಗ ಮತ್ತು ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ ಎಂದು ಉಲ್ಲೇಖಿಸಿದರು.

ಭಾರತದ ಕ್ಲೀನ್ ಎನರ್ಜಿ ಮಿಷನ್ ನಲ್ಲಿ ರಾಜಸ್ಥಾನ ಮುಂಚೂಣಿಯಲ್ಲಿದೆ 

ಎಂಟು ತಿಂಗಳಲ್ಲಿ ತಲುಪಿಸಲಾದ ಗೋರ್ಬಿಯಾ ಸೌರ ವಿದ್ಯುತ್ ಯೋಜನೆಯು 1250 ಎಕರೆಗಳನ್ನು ವ್ಯಾಪಿಸಿದೆ ಮತ್ತು ಸೌರ ಶಕ್ತಿ ನಿಗಮದೊಂದಿಗೆ 25 ವರ್ಷಗಳ ವಿದ್ಯುತ್ ಖರೀದಿ ಒಪ್ಪಂದವನ್ನು ಬೆಂಬಲಿಸುತ್ತದೆ. ಇದು ವಾರ್ಷಿಕವಾಗಿ 755 ಗಿಗಾವ್ಯಾಟ್ ಗಂಟೆಗಳ ಶುದ್ಧ ವಿದ್ಯುತ್ ಉತ್ಪಾದಿಸುತ್ತದೆ. ಸರಿಸುಮಾರು 1.28 ಲಕ್ಷ ಮನೆಗಳಿಗೆ ಶಕ್ತಿ ನೀಡುತ್ತದೆ ಮತ್ತು ಪ್ರತಿವರ್ಷ ಸುಮಾರು 7.05 ಲಕ್ಷ ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.

ರಾಜಸ್ಥಾನದ ವಿದ್ಯುತ್ ಸಾಮರ್ಥ್ಯದ ಸುಮಾರು 70 ಪ್ರತಿಶತವನ್ನು ಈಗ ನವೀಕರಿಸಬಹುದಾದ ಇಂಧನದಿಂದ ಪಡೆಯಲಾಗುತ್ತಿದೆ, 35.4 ಗಿಗಾವ್ಯಾಟ್ ಗಳನ್ನು ಸ್ಥಾಪಿಸಲಾಗಿದೆ, 29.5 ಗಿಗಾವಾಟ್ ಸೌರ ಮತ್ತು 5.2 ಗಿಗಾವಾಟ್ ಪವನ ಶಕ್ತಿಯನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಗಮನಿಸಿದರು. ಭಾರತದ ನವೀಕರಿಸಬಹುದಾದ ಇಂಧನ ಬೆಳವಣಿಗೆಯಲ್ಲಿ ರಾಜ್ಯದ ಸಕ್ರಿಯ ಪಾತ್ರವನ್ನು ಅವರು ಶ್ಲಾಘಿಸಿದರು.

ರೈತರು ಮತ್ತು ಸಮುದಾಯಗಳ ಸಬಲೀಕರಣ

ಈ ಯೋಜನೆಯು ರೈತರನ್ನು ಭಾರತದ ಇಂಧನ ಪ್ರಯಾಣದಲ್ಲಿ ಪಾಲುದಾರರನ್ನಾಗಿ ಮಾಡಿದೆ. ಏಕೆಂದರೆ ಬಳಸಿದ ಭೂಮಿಯನ್ನು ಅವರಿಂದ ಗುತ್ತಿಗೆಗೆ ನೀಡಲಾಗಿದೆ, ಇದು ಸ್ಥಿರ ಆದಾಯವನ್ನು ನೀಡುತ್ತದೆ ಎಂದು ಸಚಿವರು ಒತ್ತಿ ಹೇಳಿದರು. “ನಮ್ಮ ರೈತರು ಇನ್ನು ಮುಂದೆ ಕೇವಲ ಆಹಾರ ಪೂರೈಕೆದಾರರಲ್ಲ. ಅವರು ಈಗ ಇಂಧನ ಪೂರೈಕೆದಾರರಾಗಿದ್ದಾರೆ,” ಎಂದು ಅವರು ಹೇಳಿದರು.

ನಿರ್ಮಾಣದ ಸಮಯದಲ್ಲಿ, 700ಕ್ಕೂ ಹೆಚ್ಚು ಸ್ಥಳೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲಾಯಿತು, ಇದು ಜೀವನೋಪಾಯ ಸೃಷ್ಟಿ ಮತ್ತು ಕೌಶಲ್ಯ ಅಭಿವೃದ್ಧಿಗೆ ಕೊಡುಗೆ ನೀಡಿತು. ಆನ್-ಸೈಟ್ ಸಬ್ ಸ್ಟೇಷನ್ ಮತ್ತು 6.5 ಕಿಲೋಮೀಟರ್ ಪ್ರಸರಣ ಮಾರ್ಗ ಸೇರಿದಂತೆ ಸಂಪೂರ್ಣ ಸ್ಥಳಾಂತರಿಸುವ ಮೂಲಸೌಕರ್ಯವನ್ನು ಕೇವಲ ಐದು ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಗಮನಿಸಿದರು.

ನಾವೀನ್ಯತೆ ಮತ್ತು ಭವಿಷ್ಯದ ತಂತ್ರಜ್ಞಾನ

ಈ ಯೋಜನೆಯು ಗರಿಷ್ಠ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ಸುಧಾರಿತ ಸೌರ ಫಲಕಗಳನ್ನು (ಟಾಪ್ಕಾನ್ ಬೈಫೇಷಿಯಲ್ ಮೊನೊ ಪಿಇಆರ್ ಸಿ ಮ್ಯಾದರಿಗಳು) ಮತ್ತು 1300ಕ್ಕೂ ಹೆಚ್ಚು ರೊಬೊಟಿಕ್ ಕ್ಲೀನಿಂಗ್ ಘಟಕಗಳನ್ನು ಬಳಸುತ್ತದೆ. ಶ್ರೀ ಪ್ರಲ್ಹಾದ್ ಜೋಶಿ ಅವರು ಇದನ್ನು ವಿಶ್ವದರ್ಜೆಯ ಸೌಲಭ್ಯ ಎಂದು ಕರೆದರು ಮತ್ತು ಅಂತಹ ತಂತ್ರಜ್ಞಾನಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದರು.

ಐಐಟಿ ಬಾಂಬೆಗೆ ತಮ್ಮ ಭೇಟಿಯನ್ನು ಉಲ್ಲೇಖಿಸಿದ ಸಚಿವರು, ಪೆರೋವ್ಸ್ಕಿಟ್ ಟಂಡೆಮ್ ಸೋಲಾರ್ ಸೆಲ್ ಗಳಲ್ಲಿ ನಡೆಯುತ್ತಿರುವ ಕಾರ್ಯಗಳ ಬಗ್ಗೆ ಮಾತನಾಡಿದರು ಮತ್ತು ಮುಂದಿನ ಪೀಳಿಗೆಯ ಸೌರ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಾಯೋಗಿಕ ಯೋಜನೆಗಳನ್ನು ಅನ್ವೇಷಿಸಲು ಝೆಲೆಸ್ಟ್ರಾ ಮತ್ತು ರಾಜಸ್ಥಾನ ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು. ಇಂತಹ ಆವಿಷ್ಕಾರಗಳು ರಾಜಸ್ಥಾನದಂತಹ ಹೆಚ್ಚಿನ ವಿಕಿರಣ ಪೀಡಿತ ರಾಜ್ಯಗಳಲ್ಲಿ ಇಂಧನ ಇಳುವರಿಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಎಂದು ಅವರು ಹೇಳಿದರು.

ನೀತಿ ಸುಧಾರಣೆಗಳು ಮತ್ತು ಹೂಡಿಕೆ ವಾತಾವರಣ

ನೀತಿ ಮತ್ತು ಹೂಡಿಕೆ ಸುಧಾರಣೆಗಳನ್ನು ತ್ವರಿತಗೊಳಿಸಿದ್ದಕ್ಕಾಗಿ ಶ್ರೀ ಪ್ರಲ್ಹಾದ್ ಜೋಶಿ ಅವರು ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ ಅವರನ್ನು ಶ್ಲಾಘಿಸಿದರು. ರಾಜಸ್ಥಾನವು ಸಮಗ್ರ ಶುದ್ಧ ಇಂಧನ ನೀತಿ 2024 ಅನ್ನು ಅಳವಡಿಸಿಕೊಂಡಿದೆ ಮತ್ತು ರಾಜಸ್ಥಾನ ಹಸಿರು ಹೈಡ್ರೋಜನ್ ನೀತಿಯನ್ನು ಕಾರ್ಯಗತಗೊಳಿಸಿದೆ. ನವೀಕರಿಸಬಹುದಾದ ಇಂಧನ ಮತ್ತು ಹಸಿರು ಹೈಡ್ರೋಜನ್ ಮೇಲೆ ಹೆಚ್ಚಿನ ಗಮನ ಹರಿಸಿ ಕಳೆದ ವರ್ಷ 6.57 ಲಕ್ಷ ಕೋಟಿ ರೂ.ಗಳ ಹೂಡಿಕೆ ಬದ್ಧತೆಗಳಿಗೆ ಸಹಿ ಹಾಕಲಾಗಿತ್ತು.

ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಅಡಿಯಲ್ಲಿ, ರಾಜಸ್ಥಾನದಲ್ಲಿ 49000ಕ್ಕೂ ಹೆಚ್ಚು ಮೇಲ್ಛಾವಣಿ ಸ್ಥಾಪನೆಗಳು ಪೂರ್ಣಗೊಂಡಿವೆ, 325 ಕೋಟಿ ರೂ.ಗಿಂತ ಹೆಚ್ಚಿನ ಸಬ್ಸಿಡಿಗಳನ್ನು ವಿತರಿಸಲಾಗಿದೆ. ಈಗಾಗಲೇ 2.7 ಲಕ್ಷ ಅರ್ಜಿಗಳನ್ನು ಸ್ವೀಕರಿಸಿರುವುದರಿಂದ ತ್ವರಿತ ಅನುಷ್ಠಾನವನ್ನು ಅವರು ಒತ್ತಾಯಿಸಿದರು. ಪಿಎಂ-ಕುಸುಮ್ ಅಡಿಯಲ್ಲಿ ಸುಮಾರು 1.45 ಲಕ್ಷ ಸೌರ ಪಂಪ್ ಗಳನ್ನು ಸ್ಥಾಪಿಸಲಾಗಿದೆ.

ಭಾರತದ ಇಂಧನ ಮೈಲಿಗಲ್ಲು

2030ರ ಗಡುವಿಗೆ ಐದು ವರ್ಷಗಳ ಮುಂಚಿತವಾಗಿ, ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಶೇಕಡಾ 50 ರಷ್ಟು ಸ್ಥಾಪಿತ ಸಾಮರ್ಥ್ಯದ ಗುರಿಯನ್ನು ಭಾರತ ಈಗಾಗಲೇ ಸಾಧಿಸಿದೆ ಎಂದು ಸಚಿವರು ಘೋಷಿಸಿದರು. “ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಡಿಯಲ್ಲಿ, ನಾವು ಸಂಕಲ್ಪ ಮಾಡಿದಾಗ, ನಾವು ಸಾಧಿಸುತ್ತೇವೆ,” ಎಂದು ಅವರು ಹೇಳಿದರು.

ಪವನ-ಸೌರ ಹೈಬ್ರಿಡ್ ಯೋಜನೆಗಳ ತ್ವರಿತ ನಿಯೋಜನೆಗೆ ಕರೆ ನೀಡಿದ ಅವರು. ರಾಜಸ್ಥಾನದ ಬಳಕೆಯಾಗದ 284 ಗಿಗಾವ್ಯಾಟ್ ಪವನ ಸಾಮರ್ಥ್ಯದ ಬಗ್ಗೆ ಗಮನಸೆಳೆದರು. ಗೋರ್ಬಿಯಾ ಯೋಜನೆಯು ಭಾರತದ ಶುದ್ಧ ಇಂಧನ ಪ್ರಯಾಣದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ ಎಂದು ಹೇಳುವ ಮೂಲಕ ಅವರು ಮುಕ್ತಾಯಗೊಳಿಸಿದರು. “ಇಂದು, ನಾವು ಸೂರ್ಯನಿಂದ ಆಶೀರ್ವದಿಸಲ್ಪಟ್ಟ ಈ ಭೂಮಿಯಲ್ಲಿ ನಿಂತಿರುವಾಗ, ನಾವು ಕೇವಲ ಸೌಲಭ್ಯವನ್ನು ಉದ್ಘಾಟಿಸುತ್ತಿಲ್ಲ, ನಾವು ಶಕ್ತಿ, ಭರವಸೆ ಮತ್ತು ಸ್ವಾವಲಂಬನೆಯ ಹೊಸ ಯುಗವನ್ನು ಪ್ರಾರಂಭಿಸುತ್ತಿದ್ದೇವೆ.” ಎಂದು ಅವರು ಹೇಳಿದರು.

ಝೆಲೆಸ್ಟ್ರಾ ಬಗ್ಗೆ

ಝೆಲೆಸ್ಟ್ರಾ ಜಾಗತಿಕ, ಲಂಬವಾಗಿ ಸಂಯೋಜಿತ ನವೀಕರಿಸಬಹುದಾದ ಇಂಧನ ಕಂಪನಿಯಾಗಿದ್ದು, 13 ದೇಶಗಳಲ್ಲಿ 29 ಗಿಗಾವ್ಯಾಟ್ ಇಂಗಾಲ ಮುಕ್ತ ಇಂಧನ ಯೋಜನೆಗಳ ಪೋರ್ಟ್ ಪೋಲಿಯೊವನ್ನು ಹೊಂದಿದೆ. ಭಾರತದಲ್ಲಿ, ಕಂಪನಿಯು 5.4 ಗಿಗಾವಾಟ್ ಗಳ ಪೈಪ್ಲೈನ್ ಅನ್ನು ಹೊಂದಿದೆ, 1.7 ಗಿಗಾವಾಟ್ ಗಳು ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಇದು ವಿಶ್ವದ ಅತಿದೊಡ್ಡ ಹೂಡಿಕೆ ನಿಧಿಗಳಲ್ಲಿ ಒಂದಾದ ಇಕ್ಯೂಟಿಯಿಂದ ಬೆಂಬಲಿತವಾಗಿದೆ. ಇದು 273 ಶತಕೋಟಿ ಯುರೋಗಳಿಗಿಂತ ಹೆಚ್ಚಿನ ಆಸ್ತಿಗಳನ್ನು ನಿರ್ವಹಿಸುತ್ತದೆ. 2024ರಲ್ಲಿ, ಬ್ಲೂಮ್ ಬರ್ಗ್ ಎನ್ಇಎಫ್ ಕಾರ್ಪೊರೇಟ್ ಖರೀದಿದಾರರಿಗೆ ಶುದ್ಧ ಇಂಧನದ ಅಗ್ರ ಹತ್ತು ಜಾಗತಿಕ ಮಾರಾಟಗಾರರಲ್ಲಿ ಝೆಲೆಸ್ಟ್ರಾವನ್ನು ಸ್ಥಾನ ನೀಡಿತು ಮತ್ತು ಯುರೋಪ್, ಮಧ್ಯಪ್ರಾಚ್ಯ ಮತ್ತು ಏಷ್ಯಾ ಪ್ರದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.

About Matribhumi Samachar

Check Also

ಕರ್ನಾಟಕದಲ್ಲಿ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಉಪಕ್ರಮಗಳಲ್ಲಿ ಗಮನಾರ್ಹ ಪ್ರಗತಿ

ಕರ್ನಾಟಕದಾದ್ಯಂತ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಯೋಜನೆಗಳಲ್ಲಿ ಗಮನಾರ್ಹ ಪ್ರಗತಿಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ …