Tuesday, December 23 2025 | 08:41:53 AM
Breaking News

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಗುಜರಾತಿನ ನೆಲಗಡಲೆ ಹೊಲಗಳಲ್ಲಿ ರೈತರನ್ನು ಭೇಟಿಯಾದರು

Connect us on:

ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಗುಜರಾತ್ ಭೇಟಿಯ ಸಂದರ್ಭದಲ್ಲಿ ನೆಲಗಡಲೆ ಬೆಳೆಗಾರರನ್ನು ಭೇಟಿ ಮಾಡಿದರು. ಜುನಾಗಢದ ಮಾಣೆಕ್ವಾಡಾ ಗ್ರಾಮದಲ್ಲಿ ನೆಲಗಡಲೆ ಹೊಲಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಿದರು. ಕೇಂದ್ರ ಸಚಿವರು ರೈತರೊಂದಿಗೆ ಹೊಲದಲ್ಲಿ ನೆಲಗಡಲೆ ಬೆಳೆಗಳ ಕಳೆ ತೆಗೆಯುವ ಮತ್ತು ಜಮೀನು ಒಪ್ಪಗೊಳಿಸುವ ಕಾರ್ಯದಲ್ಲಿ ಭಾಗವಹಿಸಿದರು.

ಸಂವಾದದ ಸಮಯದಲ್ಲಿ, ಶ್ರೀ ಚೌಹಾಣ್ ಅವರು ಸುಧಾರಿತ ನೆಲಗಡಲೆ ಪ್ರಭೇದಗಳು, ಬೀಜಗಳ ಗುಣಮಟ್ಟ, ಬಳಸುತ್ತಿರುವ ರಸಗೊಬ್ಬರಗಳು ಮತ್ತು ಉತ್ಪಾದನಾ ತಂತ್ರಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ರೈತರು ನೆಲಗಡಲೆ ಕೃಷಿಯಲ್ಲಿನ ಸವಾಲುಗಳು, ಮಾರುಕಟ್ಟೆ ಬೆಲೆಗಳು ಮತ್ತು ನೀರಾವರಿ ಸಂಬಂಧಿತ ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿಸಿದರು.

ಗುಜರಾತಿನ ಪ್ರಮುಖ ಮತ್ತು ಸುಧಾರಿತ ನೆಲಗಡಲೆ ಪ್ರಭೇದ – ‘ಗಿರ್ನಾರ್ -4’ – ಬಗ್ಗೆ ಕೇಂದ್ರ ಕೃಷಿ ಸಚಿವರು ವಿಶೇಷ ಆಸಕ್ತಿ ವಹಿಸಿದರು ಮತ್ತು ಅಧಿಕಾರಿಗಳಿಂದ ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆದರು. ಅವರು ಜಮೀನಿನಲ್ಲಿ ಲಭ್ಯವಿದ್ದ ಡ್ರೋನ್ ಗಳು ಮತ್ತು ಇತರ ಆಧುನಿಕ ಕೃಷಿ ಉಪಕರಣಗಳನ್ನು ಪರಿಶೀಲಿಸಿದರು ಮತ್ತು ಅವುಗಳ ಪರಿಣಾಮಕಾರಿತ್ವ ಮತ್ತು ಉಪಯುಕ್ತತೆಯ ಬಗ್ಗೆ ರೈತರಿಂದ ಪ್ರತಿಕ್ರಿಯೆ ಪಡೆದರು.

ರೈತರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, “ನಮ್ಮ ಅನ್ನದಾತರು ದೇಶದ ಆಹಾರ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಅಮೂಲ್ಯವಾದ ಪಾತ್ರವನ್ನು ವಹಿಸುತ್ತಾರೆ. ಸರ್ಕಾರವು ಪ್ರತಿಯೊಂದು ಹಂತದಲ್ಲೂ ರೈತರೊಂದಿಗೆ ನಿಂತಿದೆ ಮತ್ತು ಅವರ ಕಳವಳಗಳನ್ನು ಪರಿಹರಿಸಲು ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಹೇಳಿದರು.

About Matribhumi Samachar

Check Also

ಅಸ್ಸಾಂನ ನಮ್ರೂಪ್‌ನಲ್ಲಿ ಅಸ್ಸಾಂ ವ್ಯಾಲಿ ಫರ್ಟಿಲೈಜರ್ ಮತ್ತು ಕೆಮಿಕಲ್ ಕಂಪನಿ ಲಿಮಿಟೆಡ್‌ನ ಅಮೋನಿಯಾ-ಯೂರಿಯಾ ರಸಗೊಬ್ಬರ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಅಸ್ಸಾಂನ ದಿಬ್ರುಗಢದ ನಮ್ರೂಪ್‌ನಲ್ಲಿ ಇಂದು ಅಸ್ಸಾಂ ವ್ಯಾಲಿ ಫರ್ಟಿಲೈಜರ್ ಮತ್ತು ಕೆಮಿಕಲ್ ಕಂಪನಿ ಲಿಮಿಟೆಡ್‌ನ ಅಮೋನಿಯಾ-ಯೂರಿಯಾ ರಸಗೊಬ್ಬರ ಯೋಜನೆಗೆ ಪ್ರಧಾನಮಂತ್ರಿ  ಶ್ರೀ …