Thursday, December 25 2025 | 09:27:07 PM
Breaking News

ಹದಿನೆಂಟನೇ ಲೋಕಸಭೆಯ ಆರನೇ ಅಧಿವೇಶನ ಮುಕ್ತಾಯ

Connect us on:

ಡಿಸೆಂಬರ್ 1, 2025 ರಂದು ಪ್ರಾರಂಭವಾದ ಹದಿನೆಂಟನೇ ಲೋಕಸಭೆಯ ಆರನೇ ಅಧಿವೇಶನವು ಇಂದು ಮುಕ್ತಾಯವಾಯಿತು. ಈ ಸಂಬಂಧವಾಗಿ ಮಾಹಿತಿ ನೀಡಿದ ಲೋಕಸಭಾ ಅಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು, ಅಧಿವೇಶನದ ಅವಧಿಯಲ್ಲಿ 15 ಕಲಾಪಗಳು ನಡೆದವು ಎಂದು ತಿಳಿಸಿದರು. ಈ ಅಧಿವೇಶನದ ಒಟ್ಟು ಕಲಾಪದ ಅವಧಿ 92 ಗಂಟೆ 25 ನಿಮಿಷಗಳಾಗಿತ್ತು.

ಅಧಿವೇಶನದ ಅವಧಿಯಲ್ಲಿ ಸದನದ ಕಾರ್ಯದಕ್ಷತೆಯು ಶೇಕಡಾ 111 ರಷ್ಟಿತ್ತು ಎಂದು ಶ್ರೀ ಬಿರ್ಲಾ ಅವರು ತಿಳಿಸಿದರು.

ಅಧಿವೇಶನದ ಅವಧಿಯಲ್ಲಿ 10 ಸರ್ಕಾರಿ ವಿಧೇಯಕಗಳನ್ನು ಮಂಡಿಸಲಾಯಿತು ಮತ್ತು 08 ವಿಧೇಯಕಗಳನ್ನು ಅಂಗೀಕರಿಸಲಾಯಿತು. ಅಂಗೀಕರಿಸಲಾದ ವಿಧೇಯಕಗಳು ಈ ಕೆಳಗಿನಂತಿವೆ:

  1. ಮಣಿಪುರ ಸರಕು ಮತ್ತು ಸೇವಾ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ, 2025;
  2. ಕೇಂದ್ರ ಅಬಕಾರಿ (ತಿದ್ದುಪಡಿ) ವಿಧೇಯಕ, 2025;
  3. ಆರೋಗ್ಯ ಸುರಕ್ಷತೆಯಿಂದ ರಾಷ್ಟ್ರೀಯ ಭದ್ರತಾ ಸೆಸ್ ವಿಧೇಯಕ, 2025;
  4. ಧನವಿನಿಯೋಗ (ಸಂಖ್ಯೆ 4) ವಿಧೇಯಕ, 2025;
  5. ರದ್ದತಿ ಮತ್ತು ತಿದ್ದುಪಡಿ ವಿಧೇಯಕ, 2025;
  6.  ‘ಸಬ್ಕಾ ಬಿಮಾ ಸಬ್ಕಿ ರಕ್ಷಾ’ (ವಿಮಾ ಕಾನೂನುಗಳ ತಿದ್ದುಪಡಿ) ವಿಧೇಯಕ, 2025;
  7. ಭಾರತದ ರೂಪಾಂತರಕ್ಕಾಗಿ ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ ವಿಧೇಯಕ, 2025; ಮತ್ತು
  8. ವಿಕಸಿತ ಭಾರತ – ಗ್ಯಾರಂಟಿ ಫಾರ್‌ ರೋಜಗಾರ್‌ ಅಂಡ್‌ ಆಜೀವಿಕಾ ಮಿಷನ್ (ಗ್ರಾಮೀಣ): ವಿಬಿ – ಜಿ ರಾಮ್ ಜಿ ವಿಧೇಯಕ, 2025.

15 ಡಿಸೆಂಬರ್ 2025 ರಂದು, ಚರ್ಚೆಯ ನಂತರ, ಅನುದಾನಗಳ ಪೂರಕ ಬೇಡಿಕೆಗಳು – ಮೊದಲ ಕಂತು, 2025–26ರ ಮೇಲೆ ಮತದಾನ ನಡೆಯಿತು. ತದನಂತರ, ಧನವಿನಿಯೋಗ (ಸಂಖ್ಯೆ 4) ವಿಧೇಯಕ, 2025 ಅನ್ನು ಅಂಗೀಕರಿಸಲಾಯಿತು.

8 ಡಿಸೆಂಬರ್ 2025 ರಂದು, ರಾಷ್ಟ್ರೀಯ ಗೀತೆ “ವಂದೇ ಮಾತರಂ” 150 ವರ್ಷಗಳನ್ನು ಪೂರೈಸಿದ ನೆನಪಿಗಾಗಿ ಪ್ರಧಾನ ಮಂತ್ರಿಯವರು ಚರ್ಚೆಯನ್ನು ಪ್ರಾರಂಭಿಸಿದರು. ಸದನವು ಈ ವಿಷಯದ ಕುರಿತು 11 ಗಂಟೆ 32 ನಿಮಿಷಗಳ ಕಾಲ ಚರ್ಚಿಸಿತು, ಇದರಲ್ಲಿ 65 ಸದಸ್ಯರು ಭಾಗವಹಿಸಿದ್ದರು. ಅದೇ ರೀತಿ, “ಚುನಾವಣಾ ಸುಧಾರಣೆಗಳ” ವಿಷಯದ ಕುರಿತು ಡಿಸೆಂಬರ್ 9 ಮತ್ತು 10 ರಂದು ಸರಿಸುಮಾರು 13 ಗಂಟೆಗಳ ಕಾಲ ಚರ್ಚೆ ನಡೆಸಲಾಯಿತು, ಇದರಲ್ಲಿ 63 ಸದಸ್ಯರು ಪಾಲ್ಗೊಂಡಿದ್ದರು.

ಅಧಿವೇಶನದ ಅವಧಿಯಲ್ಲಿ, 300 ಚುಕ್ಕೆ ಗುರುತಿನ ಪ್ರಶ್ನೆಗಳನ್ನು ಸ್ವೀಕರಿಸಲಾಯಿತು ಮತ್ತು 72 ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರಿಸಲಾಯಿತು. ಅಧಿವೇಶನದಲ್ಲಿ ಒಟ್ಟು 3449 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳನ್ನು ಸ್ವೀಕರಿಸಲಾಯಿತು.

ಶೂನ್ಯ ವೇಳೆಯಲ್ಲಿ  ಸದಸ್ಯರು ಸಾರ್ವಜನಿಕ ಪ್ರಾಮುಖ್ಯತೆಯ ಒಟ್ಟು 408 ತುರ್ತು ವಿಷಯಗಳನ್ನು ಪ್ರಸ್ತಾಪಿಸಿದರು ಮತ್ತು ನಿಯಮ 377ರ ಅಡಿಯಲ್ಲಿ ಒಟ್ಟು 372 ವಿಷಯಗಳನ್ನು ಕೈಗೆತ್ತಿಕೊಳ್ಳಲಾಯಿತು. 11 ಡಿಸೆಂಬರ್ 2025 ರಂದು, ಸದನದ ಶೂನ್ಯ ವೇಳೆಯಲ್ಲಿ 150 ಸದಸ್ಯರು ತಮ್ಮ ವಿಷಯಗಳನ್ನು ಮಂಡಿಸಿದರು.

ಅಧಿವೇಶನದ ಅವಧಿಯಲ್ಲಿ, ನಿರ್ದೇಶನ 73ಎ ಅಡಿಯಲ್ಲಿ 35 ಹೇಳಿಕೆಗಳನ್ನು ನೀಡಲಾಯಿತು. ನಿಯಮ 372ರ ಅಡಿಯಲ್ಲಿ ನೀಡಲಾದ ಎರಡು ಹೇಳಿಕೆಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಂದ ನೀಡಲಾದ ಒಂದು ಹೇಳಿಕೆ ಸೇರಿದಂತೆ ಒಟ್ಟು 38 ಹೇಳಿಕೆಗಳನ್ನು ನೀಡಲಾಯಿತು.

ಅಧಿವೇಶನದಲ್ಲಿ ಒಟ್ಟು 2,116 ಕಾಗದ ಪತ್ರಗಳನ್ನು ಸದನದಲ್ಲಿ ಮಂಡಿಸಲಾಯಿತು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗಳ ಒಟ್ಟು 41 ವರದಿಗಳನ್ನು ಸದನದಲ್ಲಿ ಮಂಡಿಸಲಾಯಿತು.

ಖಾಸಗಿ ಸದಸ್ಯರ ವಿಧೇಯಕಗಳಿಗೆ ಸಂಬಂಧಿಸಿದಂತೆ, ಈ ಅಧಿವೇಶನದಲ್ಲಿ ವಿವಿಧ ವಿಷಯಗಳ ಮೇಲಿನ 137 ಖಾಸಗಿ ಸದಸ್ಯರ ವಿಧೇಯಕಗಳನ್ನು 5 ಡಿಸೆಂಬರ್ 2025 ರಂದು ಮಂಡಿಸಲಾಯಿತು. 12 ಡಿಸೆಂಬರ್ 2025 ರಂದು, ಶ್ರೀ ಶಫಿ ಪರಂಬಿಲ್ ಅವರು ಮಂಡಿಸಿದ್ದ ಖಾಸಗಿ ಸದಸ್ಯರ ನಿರ್ಣಯವನ್ನು ಚರ್ಚೆಯ ನಂತರ ಸದನದ ಅನುಮತಿಯೊಂದಿಗೆ ಹಿಂಪಡೆಯಲಾಯಿತು.

2 ಡಿಸೆಂಬರ್ 2025 ರಂದು, ಜಾರ್ಜಿಯಾ ಸಂಸತ್ತಿನ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಶಲ್ವಾ ಪಾಪುವಾಶ್ವಿಲಿ ಅವರು ತಮ್ಮ ಸಂಸದೀಯ ನಿಯೋಗದೊಂದಿಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾಗ, ಭಾರತದ ಸಂಸತ್ತು ಅವರನ್ನು ಆತ್ಮೀಯವಾಗಿ ಸ್ವಾಗತಿಸಿತು.

About Matribhumi Samachar

Check Also

“‘ವಿಕಸಿತ ಭಾರತ: ಜಿ ರಾಮ್ ಜಿ’ ಯೋಜನೆಯು ನರೇಗಾ (MGNREGA) ಯೋಜನೆಗಿಂತ ಒಂದು ಹೆಜ್ಜೆ ಮುಂದಿನ ಆಲೋಚನೆಯಾಗಿದೆ.” — ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ‘ವಿಕಸಿತ ಭಾರತ: ಜಿ ರಾಮ್ ಜಿ’ (Viksit Bharat: G Ram G) …