ದೆಹಲಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಪರ್ವೇಶ್ ಸಾಹಿಬ್ ಸಿಂಗ್, ಶ್ರೀ ಆಶಿಶ್ ಸೂದ್, ಸರ್ದಾರ್ ಮಂಜಿಂದರ್ ಸಿಂಗ್ ಸಿರ್ಸಾ, ಶ್ರೀ ರವೀಂದರ್ ಇಂದ್ರಜ್ ಸಿಂಗ್, ಶ್ರೀ ಕಪಿಲ್ ಮಿಶ್ರಾ ಮತ್ತು ಶ್ರೀ ಪಂಕಜ್ ಕುಮಾರ್ ಸಿಂಗ್ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದ್ದಾರೆ ಮತ್ತು ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಹೀಗೆ ಹೇಳಿದ್ದಾರೆ;
“ದೆಹಲಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಪರ್ವೇಶ್ ಸಾಹಿಬ್ ಸಿಂಗ್ ಜಿ, ಶ್ರೀ ಆಶಿಶ್ ಸೂದ್ ಜಿ, ಸರ್ದಾರ್ ಮಂಜಿಂದರ್ ಸಿಂಗ್ ಸಿರ್ಸಾ ಜಿ, ಶ್ರೀ ರವೀಂದರ್ ಇಂದ್ರಜ್ ಸಿಂಗ್ ಜಿ, ಶ್ರೀ ಕಪಿಲ್ ಮಿಶ್ರಾ ಜಿ ಮತ್ತು ಶ್ರೀ ಪಂಕಜ್ ಕುಮಾರ್ ಸಿಂಗ್ ಜಿ ಅವರುಗಳಿಗೆ ನನ್ನ ಅಭಿನಂದನೆಗಳು. ಈ ತಂಡವು, ಹುರುಪು ಮತ್ತು ಅನುಭವವನ್ನು ಸುಂದರವಾಗಿ ಬೆರೆಸುತ್ತದೆ ಮತ್ತು ಖಂಡಿತವಾಗಿಯೂ ದೆಹಲಿಗೆ ಉತ್ತಮ ಆಡಳಿತವನ್ನು ಖಚಿತಪಡಿಸುತ್ತದೆ. ಅವರಿಗೆ ಶುಭಾಶಯಗಳು.
भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं
ऑडियो बुक : भारत 1885 से 1950 (इतिहास पर एक दृष्टि)
Matribhumi Samachar Kannad

